Home> India
Advertisement

Bharat Petroleum cylinderನಲ್ಲಿ ಸಬ್ಸಿಡಿ ಪಡೆಯುವುದು ಹೇಗೆಂದು ತಿಳಿಯಿರಿ

ಸಾರ್ವಜನಿಕ ವಲಯದ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಖಾಸಗೀಕರಣಗೊಂಡ ನಂತರವೂ ಅದರ 7.3 ಕೋಟಿ ದೇಶೀಯ ಎಲ್‌ಪಿಜಿ ಗ್ರಾಹಕರು ಸಬ್ಸಿಡಿಯ ಲಾಭವನ್ನು ಪಡೆಯಬಹುದಾಗಿದೆ. ಸಬ್ಸಿಡಿಯನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.
 

Bharat Petroleum cylinderನಲ್ಲಿ ಸಬ್ಸಿಡಿ ಪಡೆಯುವುದು ಹೇಗೆಂದು ತಿಳಿಯಿರಿ

ನವದೆಹಲಿ: ಸಾರ್ವಜನಿಕ ವಲಯದ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಖಾಸಗೀಕರಣಗೊಂಡ ನಂತರವೂ ಅದರ 7.3 ಮಿಲಿಯನ್ ದೇಶೀಯ ಎಲ್‌ಪಿಜಿ ಗ್ರಾಹಕರು ಸಬ್ಸಿಡಿಯ ಲಾಭವನ್ನು ಪಡೆಯಬಹುದಾಗಿದೆ. 

ಎಲ್‌ಪಿಜಿ ಸಬ್ಸಿಡಿ (LPG Subsidy) ನೀಡುವ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಕಾರ್ಯತಂತ್ರದ ವ್ಯಾಪಾರ ಘಟಕವನ್ನು (ಎಸ್‌ಬಿಯು) ರಚಿಸಲು ಕಂಪನಿ ಯೋಜಿಸಿದೆ. ಬಿಪಿಸಿಎಲ್‌ನ (BPCL) ಹೊಸ ಮಾಲೀಕರು ಕಂಪನಿಯ ಎಲ್‌ಪಿಜಿ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡ ಮೂರು ವರ್ಷಗಳ ನಂತರವೇ ಅದನ್ನು ಉಳಿಸಿಕೊಳ್ಳುವ ಅಥವಾ ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೂರು ವರ್ಷಗಳ ನಂತರವಷ್ಟೇ ಬದಲಾವಣೆ:
ಮೂರು ವರ್ಷಗಳ ನಂತರವೂ ಬಿಪಿಸಿಎಲ್‌ನ ಹೊಸ ಮಾಲೀಕರು ಎಲ್‌ಪಿಜಿ (LPG) ವ್ಯವಹಾರವನ್ನು ಇದೇ ಕಂಪನಿಯಲ್ಲಿ ಮುಂದುವರೆಸಲು ಬಯಸಿದರೆ, ಅದರ ನಂತರವೂ ಗ್ರಾಹಕರು ಸರ್ಕಾರದ ಸಹಾಯಧನವನ್ನು ಅಂದರೆ ಸಬ್ಸಿಡಿ ಪಡೆಯುವುದನ್ನು ಮುಂದುವರಿಸುತ್ತಾರೆ. ಹೊಸ ಮಾಲೀಕರು ಎಲ್‌ಪಿಜಿ ವ್ಯವಹಾರವನ್ನು ಉಳಿಸಿಕೊಳ್ಳಲು ನಿರಾಕರಿಸಿದರೆ, ಮೂರು ವರ್ಷಗಳ ನಂತರ ಅದರ ಎಲ್‌ಪಿಜಿ ಗ್ರಾಹಕರನ್ನು ಇತರ ಎರಡು ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗೆ ವರ್ಗಾಯಿಸಲಾಗುತ್ತದೆ.

LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್

ಗ್ರಾಹಕರಿಗೆ ಸಬ್ಸಿಡಿ ಮುಂದುವರಿಕೆ:
ಖಾಸಗೀಕರಣಗೊಂಡ ನಂತರವೂ ಕಂಪನಿಯ 7.3 ಕೋಟಿ ಗ್ರಾಹಕರಿಗೆ ಸರ್ಕಾರ ಸಬ್ಸಿಡಿ ಪಡೆಯುವುದನ್ನು ಮುಂದುವರಿಸಲಿದೆ. ಆದರೆ ಖಾಸಗಿ ಕಂಪನಿಗೆ ಸರ್ಕಾರ ಸಹಾಯಧನ ನೀಡುವ ವಿಷಯ ಪ್ರತ್ಯೇಕ ಕಾರ್ಯತಂತ್ರದ ವ್ಯಾಪಾರ ಘಟಕದ (ಎಸ್‌ಬಿಯು) ಅಡಿಯಲ್ಲಿ ಇಡಲಾಗುತ್ತದೆ. ಎಸ್‌ಬಿಯು ಖಾತೆಗಳ ವಿವರಗಳನ್ನು ಪ್ರತ್ಯೇಕವಾಗಿ ಇಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಎಸ್‌ಬಿಯುನಲ್ಲಿ ಎಷ್ಟು ಸಬ್ಸಿಡಿ ನೀಡಲಾಗಿದೆ ಮತ್ತು ಎಷ್ಟು ಗ್ರಾಹಕರಿಗೆ ಅವರು ಡಿಜಿಟಲ್ ರೀತಿಯಲ್ಲಿ ಸಬ್ಸಿಡಿ ಕಳುಹಿಸಿದ್ದಾರೆ ಎಂಬ ವಿವರಗಳನ್ನು ಹೊಂದಿರಬೇಕು.

ಎಸ್‌ಬಿಯು ಖಾತೆಗಳನ್ನು ಸಹ ಕೇಂದ್ರ ಸರ್ಕಾರ ಲೆಕ್ಕಪರಿಶೋಧನೆಗೆ ಒಳಪಡಿಸುತ್ತದೆ. ಖಾಸಗೀಕರಣದ ನಂತರ ಭಾರತ್ ಪೆಟ್ರೋಲಿಯಂಗೆ (Bharat Petroleum) ಸಬ್ಸಿಡಿ ನೀಡುವುದರಿಂದ ಇತರ ಖಾಸಗಿ ಎಲ್‌ಪಿಜಿ ವಿತರಕರಿಗೆ ಸಹ ಸಬ್ಸಿಡಿ ನೀಡಲಾಗುವುದು ಎಂದಲ್ಲ. "ಭಾರತ್ ಪೆಟ್ರೋಲಿಯಂ ಹಳೆಯ ಕಂಪನಿಯಾಗಿದೆ ಮತ್ತು ಆದ್ದರಿಂದ ತನ್ನ ಗ್ರಾಹಕರ ಸಬ್ಸಿಡಿಯನ್ನು ರಾತ್ರೋರಾತ್ರಿ ರದ್ದುಗೊಳಿಸಲಾಗುವುದಿಲ್ಲ" ಎಂದು ಅಧಿಕಾರಿಗಳು ಹೇಳಿದರು.

ನಿಮ್ಮ LPG ಸಂಪರ್ಕವನ್ನು ಆಧಾರ್‌ಗೆ ಲಿಂಕ್ ಮಾಡಲು ಇಲ್ಲಿದೆ 5 ಸುಲಭ ವಿಧಾನ

ಕಂಪನಿಯ ಹೊಸ ಮಾಲೀಕರು ಯಾವುದೇ ಸ್ವತ್ತುಗಳನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಮೂರು ವರ್ಷಗಳ ನಂತರ ಎಲ್‌ಪಿಜಿ ವ್ಯವಹಾರವನ್ನು ಹೊಂದಲು ಅಥವಾ ಮಾರಾಟ ಮಾಡುವ ಹಕ್ಕನ್ನು ಅವರು ಹೊಂದಿರುತ್ತಾನೆ. ಸರ್ಕಾರ ವರ್ಷಕ್ಕೆ 12 ಎಲ್‌ಪಿಜಿ ಸಿಲಿಂಡರ್‌ಗಳಿಗೆ (LPG cylinders) ಸಬ್ಸಿಡಿ ನೀಡುತ್ತದೆ. ಗ್ರಾಹಕರು ಹೆಚ್ಚುವರಿ ಸಿಲಿಂಡರ್ ಪಡೆಯಬೇಕಾದರೆ ಪ್ರತಿ ಸಿಲಿಂಡರ್‌ಗೆ 50 ರೂ.ಗಳನ್ನು ಅಧಿಕವಾಗಿ ಪಾವತಿಸಬೇಕಾಗುತ್ತದೆ. 

Read More