Home> India
Advertisement

ದೀಪಾವಳಿಗೂ ಮುನ್ನ ಸಿಎಂ ಕೇಜ್ರಿವಾಲ್ ಭರ್ಜರಿ ಗಿಫ್ಟ್, ದೆಹಲಿ ನಿವಾಸಿಗಳಿಗೆ ಆಗಲಿದೆ ಲಾಭ

ಸಿಎಂ ಅರವಿಂದ್ ಕೇಜ್ರಿವಾಲ್ , 'ದೀಪಾವಳಿ ಸಂದರ್ಭದಲ್ಲಿ ದೆಹಲಿಯ ವ್ಯಾಪಾರಿಗಳು, ಉದ್ಯಮಿಗಳು, ಕೈಗಾರಿಕೋದ್ಯಮಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. 

ದೀಪಾವಳಿಗೂ ಮುನ್ನ ಸಿಎಂ ಕೇಜ್ರಿವಾಲ್ ಭರ್ಜರಿ ಗಿಫ್ಟ್, ದೆಹಲಿ ನಿವಾಸಿಗಳಿಗೆ ಆಗಲಿದೆ ಲಾಭ

ನವದೆಹಲಿ : ದೀಪಾವಳಿಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejriwal) , ರಾಷ್ಟ್ರ ರಾಜಧಾನಿ ಜನತೆಗೆ   ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ದೆಹಲಿಯ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಂಗಡಿಗಳಿಗೆ ಸ್ಥಳಾವಕಾಶವನ್ನು ನೀಡುವ ಪೋರ್ಟಲ್ ಅನ್ನು ತಮ್ಮ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ. ಈ ಪೋರ್ಟಲ್ (Portal) ಮೂಲಕ ಜನರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ದೆಹಲಿಯ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಬಹುದು. 

ವ್ಯಾಪಾರಿಗಳಿಗೆ ಸಂತಸದ ಸುದ್ದಿ: 

ಸಿಎಂ ಅರವಿಂದ್ ಕೇಜ್ರಿವಾಲ್ (Aravind Kejriwal), 'ದೀಪಾವಳಿ ಸಂದರ್ಭದಲ್ಲಿ ದೆಹಲಿಯ ವ್ಯಾಪಾರಿಗಳು, ಉದ್ಯಮಿಗಳು, ಕೈಗಾರಿಕೋದ್ಯಮಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. 'ದೆಹಲಿ ಬಜಾರ್' (Delhi Bazar Portal) ಹೆಸರಿನ ಪೋರ್ಟಲ್ ಅನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಈ ಪೋರ್ಟಲ್ ನಲ್ಲಿ ದೆಹಲಿಯ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಅಂಗಡಿಗಳು ಸ್ಥಾನ ಪಡೆಯಲಿವೆ ಎಂದು ಅವರು ತಿಳಿಸಿದ್ದಾರೆ. 

ಇದನ್ನೂ ಓದಿ : Corona Vaccine: ದೇಶದ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಭೆ

ಎಲ್ಲೇ ಇದ್ದರೂ ದೆಹಲಿಯ ಅಂಗಡಿಗಳಿಂದ ಶಾಪಿಂಗ್ ಮಾಡಬಹುದು : 
'ಈಗ ದೆಹಲಿಯ ಮಾರುಕಟ್ಟೆಯ ಪೋರ್ಟಲ್ ಅನ್ನು ರಚಿಸಲಾಗುತ್ತಿದ್ದು, ಜನರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ, ದೆಹಲಿಯ ವಸ್ತುಗಳನ್ನು ಖರೀದಿಸಬಹುದು. ಪ್ರತಿಯೊಂದು ಮಾರುಕಟ್ಟೆಯು ಈ ಪೋರ್ಟಲ್‌ನಲ್ಲಿ ಕಾಣಸಿಗುತ್ತವೆ.  ನಿಮ್ಮ ನೆಚ್ಚಿನ ಯಾವುದೇ ಅಂಗಡಿಯಿಂದ ಸರಕುಗಳನ್ನು ಖರೀದಿಸಬಹುದು ಮತ್ತು ಅದನ್ನು ವಿದೇಶದಲ್ಲಿ ಆರ್ಡರ್ ಮಾಡಬಹುದು ಎಂದು ಸಿಎಂ ಕೆಜ್ರಿವಾಲ್ (CM Kejriwal) ಹೇಳಿದ್ದಾರೆ. ಇದು ದೆಹಲಿಯ ಜಿಡಿಪಿಯನ್ನು (GDP) ಅತ್ಯಂತ ವೇಗವಾಗಿ ಹೆಚ್ಚಿಸಲು ಮತ್ತು ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.  

ಅಂಗಡಿಯೊಳಗೆ ವರ್ಚುವಲಿ ತಿರುಗಾಡಬಹುದು :
ಕಮಲಾ ನಗರ, ಲಜಪತ್ ನಗರ ಮತ್ತು ಖಾನ್ ಮಾರುಕಟ್ಟೆ ಸೇರಿದಂತೆ ಎಲ್ಲಾ ಸಣ್ಣ ಮತ್ತು ದೊಡ್ಡ ಮಾರುಕಟ್ಟೆಗಳು ಈ ಪೋರ್ಟಲ್‌ನಲ್ಲಿ ಇರುತ್ತವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಪೋರ್ಟಲ್ ಮೂಲಕ ಪ್ರತಿ ಅಂಗಡಿಯೊಳಗೆ ವರ್ಚುವಲಿ ತಿರುಗಾಡಬಹುದು ಎಂದು ಹೇಳಿದ್ದಾರೆ. ನಿರ್ದಿಷ್ಟ ಅಂಗಡಿಯಿಂದ ಸರಕುಗಳನ್ನು ಖರೀದಿಸಬೇಕಾದರೆ, ಪೋರ್ಟಲ್‌ನಲ್ಲಿ ಅಂಗಡಿಯ ಹೆಸರನ್ನು ಟೈಪ್ ಮಾಡಿದರೆ ಸಾಕು.

ಇದನ್ನೂ ಓದಿ : Indian Railways: ಟಿಕೆಟ್ ಬುಕಿಂಗ್ ವೇಳೆ ಕನ್ಫರ್ಮ್ ಲೋವರ್ ಬರ್ತ್ ಬೇಕಿದ್ದರೆ ಹೀಗೆ ಮಾಡಬೇಕು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More