Home> India
Advertisement

ಅಯೋಧ್ಯೆ ರಾಮಜನ್ಮ ಭೂಮಿ ವಿವಾದ: ಇಂದು ಸುಪ್ರೀಂ ವಿಚಾರಣೆ

ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ವಿವಾದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಆರಂಭಿಸಲಿದೆ.

ಅಯೋಧ್ಯೆ ರಾಮಜನ್ಮ ಭೂಮಿ ವಿವಾದ: ಇಂದು ಸುಪ್ರೀಂ ವಿಚಾರಣೆ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ವಿವಾದವನ್ನು ಮಧ್ಯಸ್ಥಿಕೆಗೆ ವಹಿಸಿದ ಎರಡು ತಿಂಗಳ ಬಳಿಕ ಶುಕ್ರವಾರ ಸುಪ್ರೀಂಕೋರ್ಟ್ ಈ ಬಗ್ಗೆ ಮತ್ತೆ ವಿಚಾರಣೆ ಆರಂಭಿಸಲಿದೆ.

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್, ನ್ಯಾಯಮೂರ್ತಿಗಳಾದ ಎಸ್​.ಎ.ಬೊಬ್ಬೆ, ಡಿ.ವೈ. ಚಂದ್ರಚೂಡ್​, ಅಶೋಕ್​ ಭೂಷಣ್​ ಹಾಗೂ ಅಬ್ದುಲ್​ ನಜೀರ್​ ಅವರ ಪಂಚ ಸದಸ್ಯ ಪೀಠ ಇಂದು ಬೆಳಿಗ್ಗೆ 10.30ಕ್ಕೆ ಈ ಕುರಿತಾದ ವಿಚಾರಣೆ ನಡೆಸಲಿದೆ.

ಮಾರ್ಚ್ 8 ರಂದು ಅಯೋಧ್ಯೆ ವಿವಾದ ಪ್ರಕರಣದ ಇತ್ಯರ್ಥಕಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎಫ್.ಎಂ.ಐ ಖಲಿಫುಲ್ಲಾ, ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನು ಸಂಧಾನಕಾರರನ್ನಾಗಿ ನೇಮಿಸಿತ್ತು. ಅಲ್ಲದೆ, ಎಂಟು ವಾರಗಳಲ್ಲಿ ಈ ಸಮಿತಿ ವರದಿ ಸಲ್ಲಿಸುವಂತೆಯೂ ಆದೇಶ ನೀಡಿತ್ತು. ಇಂದು ಸಮಿತಿ ವರದಿ ಸಲ್ಲಿಸಲಿದ್ದು, ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. 

Read More