Home> India
Advertisement

Assembly Election Results 2021: ಮಮತಾ ಬ್ಯಾನರ್ಜಿಯಿಂದ ಎಂ.ಕೆ. ಸ್ಟಾಲಿನ್‌ರವರೆಗಿನ ಟಾಪ್ 10 ಅಭ್ಯರ್ಥಿಗಳಿವರು

ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕಾಗಿ ಸಕಲ ರೀತಿಯಲ್ಲಿಯೂ ಸಜ್ಜಾಗಿರುವ ಚುನಾವಣಾ ಆಯೋಗವು ಮತಎಣಿಕೆ ಕೇಂದ್ರಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿದೆ. ಅದಲ್ಲದೆ ಕೋವಿಡ್ -19 ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೂಡ ಕ್ರಮ ಕೈಗೊಂಡಿದೆ.

Assembly Election Results 2021: ಮಮತಾ ಬ್ಯಾನರ್ಜಿಯಿಂದ ಎಂ.ಕೆ. ಸ್ಟಾಲಿನ್‌ರವರೆಗಿನ ಟಾಪ್ 10 ಅಭ್ಯರ್ಥಿಗಳಿವರು

ನವದೆಹಲಿ: ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಗೆ ಇಂದು  ಬೆಳಿಗ್ಗೆಯಿಂದ ಮತ ಎಣಿಕೆ ಆರಂಭವಾಗಿದೆ.

ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕಾಗಿ ಸಕಲ ರೀತಿಯಲ್ಲಿಯೂ ಸಜ್ಜಾಗಿರುವ ಚುನಾವಣಾ ಆಯೋಗವು ಮತಎಣಿಕೆ ಕೇಂದ್ರಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿದೆ. ಅದಲ್ಲದೆ ಕೋವಿಡ್ -19 ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೂಡ ಕ್ರಮ ಕೈಗೊಂಡಿದೆ.

ಪಂಚರಾಜ್ಯ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿರುವ ಟಾಪ್ 10 ಅಭ್ಯರ್ಥಿಗಳಿವರು:
ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ) :

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 2011 ರಿಂದ  ಅಧಿಕಾರದಲ್ಲಿದೆ. ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ (Mamata Banerjee) ಈ ಬಾರಿ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಇದನ್ನೂ ಓದಿ - Assembly Election Results 2021: ಇಂದು ಬಹುನಿರೀಕ್ಷಿತ ಪಂಚರಾಜ್ಯ ಚುನಾವಣಾ ಫಲಿತಾಂಶ

ಸುವೇಂಡು ಅಧಿಕಾರಿ (ಪಶ್ಚಿಮ ಬಂಗಾಳ) :
ಪಶ್ಚಿಮ ಬಂಗಾಳವು ಅತಿ ಹೆಚ್ಚು 294 ಸ್ಥಾನಗಳನ್ನು ಹೊಂದಿದೆ. ಈ ರಾಜ್ಯದಲ್ಲಿ ಎಂಟು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುವೆಂಡು ಅಧಿಕಾರಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಸುವೆಂದು ಅಧಿಕಾರಿ ಈ ಮೊದಲು ಟಿಎಂಸಿ ಪಕ್ಷದಲ್ಲಿದ್ದರು.

ಎಂ.ಕೆ.ಸ್ಟಾಲಿನ್ (ತಮಿಳುನಾಡು) :
ಕೊಲಾಥೂರ್‌ನಿಂದ ಮತ್ತೊಮ್ಮೆ ಸ್ಪರ್ಧಿಸುತ್ತಾ, ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ. ಕರುಣಾನಿಧಿಯವರ ಮಗ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಎಂ.ಕೆ.ಸ್ಟಾಲಿನ್ (MK Stalin) ಈ ಹಿಂದೆ 2009 ರಿಂದ 2011 ರವರೆಗೆ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.

ಎಡಪ್ಪಾಡಿ ಪಳನಿಸ್ವಾಮಿ (ತಮಿಳುನಾಡು): 
ಮಾಜಿ ಸಿಎಂ ಜೆ ಜಯಲಲಿತಾ ಅವರ ನಿಧನದ ನಂತರ ನಾಲ್ಕು ಬಾರಿ ಶಾಸಕರಾಗಿದ್ದ  ಎಡಪ್ಪಾಡಿ ಪಳನಿಸ್ವಾಮಿ ಅವರು 2017 ರಲ್ಲಿ ರಾಜ್ಯದ ಆಡಳಿತವನ್ನು ವಹಿಸಿಕೊಂಡರು. 

ಎನ್ ರಂಗಸಾಮಿ (ಪುದುಚೇರಿ):
ಎನ್‌ಡಿಎಯ ಶಿಬಿರದಿಂದ ಎಐಎನ್‌ಆರ್‌ಸಿ ಮುಖ್ಯಸ್ಥ ಎನ್ ರಂಗಸಾಮಿ ಕೂಡ ಪುದುಚೇರಿಯ ತಟ್ಟಂಚಾವಡಿಯಿಂದ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ - ಸರ್ಕಾರ ಎಚ್ಚೆತ್ತುಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಲಿ-ಸೋನಿಯಾ ಗಾಂಧಿ

ಪಿ ಸೆಲ್ವನಡಾನೆ (ಪುದುಚೇರಿ):
ಕಾಂಗ್ರೆಸ್ ಪ್ರಮುಖ ಅಭ್ಯರ್ಥಿಗಳ ಪೈಕಿ ಪಿ.ಸೆಲ್ವನಾಡನೆ ಪುದುಚೇರಿಯ ಕಾರ್ದಿರ್ಗಮಂ ವಿಧಾನಸಭಾ ಸ್ಥಾನದಿಂದ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.

ಪಿಣರಾಯಿ ವಿಜಯನ್ (ಕೇರಳ):
ಕೇರಳದಲ್ಲಿ ಕಳೆದ ನಾಲ್ಕು ದಶಕಗಳಿಂದ ಒಮ್ಮೆ ಯುಡಿಎಫ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೊಮ್ಮೆ ಎಲ್ಡಿಎಫ್ ಆ ಸ್ಥಾನವನ್ನು ಅಲಂಕರಿಸುವ ವಾಡಿಕೆ ಹೊಂದಿದೆ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರಿ ಜಯ ಸಾಧಿಸಿದ್ದಾರೆ. ವಿಜಯನ್ ಅವರು 2016 ರಲ್ಲಿ ತಮ್ಮ ಅಧಿಕಾರ ವಹಿಸಿಕೊಂಡಿದ್ದು ರಾಜ್ಯದಲ್ಲಿ ಉತ್ತಮ ಪ್ರಾಬಲ್ಯ ಹೊಂದಿದ್ದಾರೆ. ನಿರ್ಗಮನ ಸಮೀಕ್ಷೆಗಳನ್ನು ಪರಿಗಣಿಸಿದರೆ, ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.

ಕುಮ್ಮನಂ ರಾಜಶೇಖರನ್ (ಕೇರಳ):
ರಾಜಶೇಖರನ್ ಅವರು ರಾಜ್ಯದ ಬಿಜೆಪಿ ಅಭ್ಯರ್ಥಿ. ಅವರು ಮಿಜೋರಾಂನ ಮಾಜಿ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ. ಅವರು 2015-2018ರವರೆಗೆ ಪಕ್ಷದ ಅಧ್ಯಕ್ಷರಾಗಿದ್ದರು. ರಾಜಶೇಖರನ್ ಅವರು ತಿರುವನಂತಪುರದ ನೆಮೊಮ್ ನಿಂದ ಚುನಾವಣೆಯಲ್ಲಿ  ಕಣದಲ್ಲಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಈ ಕ್ಷೇತ್ರದಿಂದ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂಬುದು ಬಹಳ ಆಸಕ್ತಿದಾಯಕವಾಗಿದೆ.

ಇದನ್ನೂ ಓದಿ - India's Covid Crisis: ಸೇನಾ ಪಡೆಗೆ ತುರ್ತು ಆರ್ಥಿಕ ಅಧಿಕಾರ ನೀಡಿದ ಕೇಂದ್ರ

ಸರ್ಬಾನಂದ ಸೋನೊವಾಲ್ (ಅಸ್ಸಾಂ):
ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಕಾಂಗ್ರೆಸ್ ’ರಾಜೀಬ್ ಲೋಚನ್ ಪೆಗು ವಿರುದ್ಧ ಎಸ್ಟಿ ಕಾಯ್ದಿರಿಸಿದ ಕ್ಷೇತ್ರವಾದ ಮಜುಲಿಯಿಂದ ಸ್ಪರ್ಧಿಸಿದ್ದಾರೆ. ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ಭವಿಷ್ಯ ನುಡಿದಿವೆ.

ರಿಪುನ್ ಬೋರಾ (ಅಸ್ಸಾಂ) :
ಕಾಂಗ್ರೆಸ್ ಅಸ್ಸಾಂ ಪ್ರದೇಶದ ಮುಖ್ಯಸ್ಥ ರಿಪುನ್ ಬೋರಾ ಗೋಹ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ ಅವರ ವಿರುದ್ಧ ಉತ್ತಪಾಲ್ ಬೋರಾಹ್ ಅವರನ್ನು ಕಣಕ್ಕಿಳಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More