Home> India
Advertisement

ಹೊಸ ಕೊರೊನಾ ತಳಿ ಮಧ್ಯೆ ಸಿಂಗಾಪುರ್ ವಿಮಾನ ಸಂಚಾರ ಸ್ಥಗಿತಗೊಳಿಸಲು ಕೇಜ್ರಿವಾಲ್ ಮನವಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಂಗಾಪುರದಲ್ಲಿ ಪತ್ತೆಯಾದ ಹೊಸ ಕೋವಿಡ್ ರೂಪಾಂತರ ಭಾರತಕ್ಕೂ ಹರಡುವ ಸಂಭವ ಇರುವ ಹಿನ್ನಲೆಯಲ್ಲಿ ಸಿಂಗಾಪುರ್ ಹಾಗೂ ಹೊರಗಿನ ವಿಮಾನಗಳನ್ನು ಸ್ಥಗಿತಗೊಳಿಸಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದು ಮಕ್ಕಳಿಗೆ ಅಪಾಯಕಾರಿ ಆಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಬೇಗನೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಹೊಸ ಕೊರೊನಾ ತಳಿ ಮಧ್ಯೆ ಸಿಂಗಾಪುರ್ ವಿಮಾನ ಸಂಚಾರ ಸ್ಥಗಿತಗೊಳಿಸಲು ಕೇಜ್ರಿವಾಲ್ ಮನವಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಂಗಾಪುರದಲ್ಲಿ ಪತ್ತೆಯಾದ ಹೊಸ ಕೋವಿಡ್ ರೂಪಾಂತರ ಭಾರತಕ್ಕೂ ಹರಡುವ ಸಂಭವ ಇರುವ ಹಿನ್ನಲೆಯಲ್ಲಿ ಸಿಂಗಾಪುರ್ ಹಾಗೂ ಹೊರಗಿನ ವಿಮಾನಗಳನ್ನು ಸ್ಥಗಿತಗೊಳಿಸಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದು ಮಕ್ಕಳಿಗೆ ಅಪಾಯಕಾರಿ ಆಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಬೇಗನೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ : Ather Energy ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಸೋರಿಕೆ

"ಸಿಂಗಾಪುರಕ್ಕೆ ಬಂದ ಹೊಸ ರೂಪದ ಕರೋನಾ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ, ಭಾರತದಲ್ಲಿ ಇದು ಮೂರನೇ ಅಲೆಯಾಗಿ ಬರಬಹುದು. ಕೇಂದ್ರ ಸರ್ಕಾರಕ್ಕೆ ನನ್ನ ಮನವಿ ಏನೆಂದರೆ : 1. ಸಿಂಗಾಪುರದೊಂದಿಗೆ ವಿಮಾನ ಸೇವೆಗಳನ್ನು ತಕ್ಷಣದಿಂದ ಜಾರಿಗೆ ತರಲಾಗುವುದು 2 ಲಸಿಕೆ ಆಯ್ಕೆಗಳಿಗೆ ಆದ್ಯತೆ ನೀಡುವುದು ಮಕ್ಕಳಿಗೂ ಸಹಕಾರಿಯಾಗಬೇಕು ಎಂದು ಅವರು ಹಿಂದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳನ ಮೇಲೊಂದು ಮೆಗಾಸಿಟಿ ಯಾವಾಗ ನಿರ್ಮಾಣವಾಗುತ್ತೆ ಗೊತ್ತಾ..?

ತಜ್ಞರ ಪ್ರಕಾರ ಮೊದಲನೇ ಅಲೆಯು ವೃದ್ದರಿಗೆ ಸಮಸ್ಯೆಯನ್ನುಂಟು ಮಾಡಿದ್ದರೆ ಎರಡನೇ ಅಲೆಯ ಯುವಕರನ್ನು ಗುರಿಯಾಗಿಸಿದೆ. ಈಗ ಮೂರನೇ ಅಲೆಯೂ ಮಕ್ಕಳ ಮೇಲೆ ಪರಿಣಾಮ ಬಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

"ಮೂರನೇ ಅಲೆಯ ವೈರಸ್ ಪ್ರಧಾನವಾಗಿ ಮಕ್ಕಳನ್ನು ಗುರಿಯಾಗಿಸುವ ಸಾಧ್ಯತೆಯಿದೆ, ಮುಖ್ಯವಾಗಿ ವಯಸ್ಕರು ಸೋಂಕಿಗೆ ಒಳಗಾಗುತ್ತಾರೆ ಅಥವಾ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ" ಎಂದು ಹೃದಯ ಶಸ್ತ್ರಚಿಕಿತ್ಸಕ ಮತ್ತು ನಾರಾಯಣ ಆರೋಗ್ಯ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯ್ ರಾಘವನ್ ಮೂರನೇ  ಅಲೆಯು"ಅನಿವಾರ್ಯ" ಎಂದು ಎಚ್ಚರಿಸಿದ್ದಾರೆ ಮತ್ತು ಉದಯೋನ್ಮುಖ ತಳಿಗಳನ್ನು ಎದುರಿಸಲು ಲಸಿಕೆಗಳನ್ನು "ನವೀಕರಿಸುವ" ಅಗತ್ಯವಿದೆ ಎಂದು ಸೂಚಿಸಿದ್ದಾರೆ.ಮೂರನೇ ಅಲೆಯು ಯಾವ ಸಮಯದಲ್ಲಿ ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಹೊಸ ಅಲೆಗಳಿಗೆ ನಾವು ಸಿದ್ಧರಾಗಿರಬೇಕು.ಈಗ ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ, ದೇಶವು ಅದನ್ನು ತಪ್ಪಿಸಬಹುದು ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More