Home> India
Advertisement

Congress ಹಿರಿಯ ಮುಖಂಡ Salman Khurshid ನಿವಾಸದ ಮೇಲೆ ದಾಳಿ, ಅಯೋಧ್ಯೆಯ ಕುರಿತು ವಿವಾದಾತ್ಮಕ ಪುಸ್ತಕ ಪ್ರಕಟ ಹಿನ್ನೆಲೆ

Sunrise Over Ayodhya Book Congroversy: ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ (Salman Khurshid) ಅವರು ಅಯೋಧ್ಯೆಯ ಕುರಿತು ಬರೆದಿರುವ 'ಸನ್‌ರೈಸ್ ಓವರ್ ಅಯೋಧ್ಯೆ' ಪುಸ್ತಕದ ಬಗ್ಗೆ ಕೋಲಾಹಲ ಮುಂದುವರೆದಿದೆ. ವಿವಾದಿತ ಪುಸ್ತಕದ ಬಗ್ಗೆ ಖುರ್ಷಿದ್ ನಿರಂತರ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ.

Congress ಹಿರಿಯ ಮುಖಂಡ Salman Khurshid ನಿವಾಸದ ಮೇಲೆ ದಾಳಿ, ಅಯೋಧ್ಯೆಯ ಕುರಿತು ವಿವಾದಾತ್ಮಕ ಪುಸ್ತಕ ಪ್ರಕಟ ಹಿನ್ನೆಲೆ

ನೈನಿತಾಲ್: Sunrise Over Ayodhya Book Congroversy - ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ 'ಸನ್‌ರೈಸ್ ಓವರ್ ಅಯೋಧ್ಯೆ' ಪುಸ್ತಕದ (Sunrise Over Ayodhya Book) ಬಗ್ಗೆ ಗಲಾಟೆ ಮುಂದುವರೆದಿದೆ. ಈ ಪರ-ವಿರೋಧದ ಹೇಳಿಕೆಗಳ ಜ್ವಾಲೆ ಇದೀಗ ಖುರ್ಷಿದ್ ಮನೆಗೆ ತಲುಪಿದೆ. ನೈನಿತಾಲ್‌ನಲ್ಲಿರುವ (Nainital) ಅವರ ನಿವಾಸಕ್ಕೆ ಸೋಮವಾರ ಬೆಂಕಿ ಹಚ್ಚಿ ಕಲ್ಲು ತೂರಾಟ (Stone Pelting) ನಡೆಸಲಾಗಿದೆ. ಘಟನೆಯ ಬಗ್ಗೆ ಸ್ವತಃ ಸಲ್ಮಾನ್ ಖುರ್ಷಿದ್ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋಗಳನ್ನು ಖುರ್ಷಿದ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
 

ಇದನ್ನೂ ಓದಿ-New Excise Policy : ಎಣ್ಣೆ ಪ್ರಿಯರೆ ಗಮನಿಸಿ : ನ. 17 ರಿಂದ ದೆಹಲಿಯಲ್ಲಿ ಸಿಗುವುದಿಲ್ಲ ನಿಮ್ಮ ನೆಚ್ಚಿನ ಎಣ್ಣೆ!

ಯಾವ ಸಂಗತಿಗೆ ವಿರೋಧ ವ್ಯಕ್ತವಾಗುತ್ತಿದೆ?
ಹಿರಿಯ ಕಾಂಗ್ರೆಸ್ ಮುಖಂಡ ಬರೆದಿರುವ ಪುಸ್ತಕದಲ್ಲಿ (Salman Khurshid Book) ಹಿಂದುತ್ವವನ್ನು ಭಯೋತ್ಪಾದಕ ಸಂಘಟನೆಗಳಾದ ಐಸಿಸ್ ಮತ್ತು ಬೊಕೊ ಹರಾಮ್‌ನೊಂದಿಗೆ ಹೋಲಿಸಲಾಗಿದೆ. ಇದರಿಂದ ಹಿಂದುತ್ವ ಸಂಘಟನೆಗಳು ಮತ್ತು ಭಾರತೀಯ ಜನತಾ ಪಕ್ಷವನ್ನು ಗುರಿಯಾಗಿಸಲಾಗಿದೆ ಎಂದರೆ ತಪ್ಪಾಗಲಾರದು. ಅವರ ಪುಸ್ತಕ ಹೊರಬಂದಾಗಿನಿಂದ, ರಾಜಕೀಯ ವಿವಾದಗಳು ನಿಲ್ಲುವ ಮಾನೆ ಎತ್ತುತ್ತಿಲ್ಲ. ಈ ಘಟನೆಯ ನಂತರ, ರಾಜಕೀಯ ವಾಗ್ದಾಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಪ್ರಕರಣ ಮತ್ತಷ್ಟು ದೊಡ್ಡದಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ-Abhinav Ambulance: ಕರ್ನಾಟಕ ಮಾದರಿಯಂತೆ ಉತ್ತರ ಪ್ರದೇಶದಲ್ಲೂ ಗೋವುಗಳಿಗೆ ಆಂಬುಲೆನ್ಸ್ ಸೇವೆ!

ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ
ಹಿಂದುತ್ವದ ಕುರಿತು ಹೇಳಿಕೆ ನೀಡಿರುವ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ಪ್ರಕಟಣೆ, ಪ್ರಸಾರ ಮತ್ತು ಮಾರಾಟವನ್ನು ನಿಲ್ಲಿಸುವಂತೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಶನಿವಾರ ಅರ್ಜಿ ಸಲ್ಲಿಸಲಾಗಿದೆ. ಅಡ್ವೊಕೇಟ್ ವಿನೀತ್ ಜಿಂದಾಲ್ ಅವರು ವಕೀಲ ರಾಜ್ ಕಿಶೋರ್ ಚೌಧರಿ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಖುರ್ಷಿದ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ 'ಸನ್‌ರೈಸ್ ಓವರ್ ಅಯೋಧ್ಯೆ: ನೇಷನ್‌ಹುಡ್ ಇನ್ ಅವರ್ ಟೈಮ್' (Sunrise Over Ayodhya) ಪುಸ್ತಕವು ಹಿಂದುತ್ವವನ್ನು ಐಸಿಸ್ ಮತ್ತು ಬೋಕೊ ಹರಾಮ್‌ನಂತಹ ಉಗ್ರವಾದಿ ಜಿಹಾದಿ ಗುಂಪುಗಳೊಂದಿಗೆ ಹೋಲಿಸುತ್ತದೆ. ಪುಸ್ತಕದ ಪುಟ 113 ರಲ್ಲಿ 'ದಿ ಕೇಸರಿ ಆಕಾಶ' ಎಂಬ ಅಧ್ಯಾಯದಲ್ಲಿ ಈ ಕಾಮೆಂಟ್ ಮಾಡಲಾಗಿದೆ, ಇದು ಐಸಿಸ್ ಮತ್ತು ಬೋಕೋ ಹರಾಮ್‌ಗೆ ಹಿಂದೂ ಧರ್ಮದ ಹೋಲಿಕೆಯನ್ನು ಹಿಂದೂಗಳು ಅನುಸರಿಸುತ್ತಿರುವ ನಕಾರಾತ್ಮಕ ಸಿದ್ಧಾಂತವೆಂದು ಗ್ರಹಿಸಲಾಗಿದೆ ಮತ್ತು ಹಿಂದೂ ಧರ್ಮವು ಹಿಂಸಾತ್ಮಕ, ಅಮಾನವೀಯ ಮತ್ತು ದಬ್ಬಾಳಿಕೆಯ ಧರ್ಮ ಎನ್ನಲಾಗಿದೆ.

ಇದನ್ನೂ ಓದಿ-ಮಹಿಳೆಯರ ಸ್ವತಂತ್ರ ಹಾಗೂ ಬೌದ್ಧಿಕ ಚಾರಿತ್ರ್ಯಕ್ಕೆ ಜೀವ ತುಂಬಿದ ಲೇಖಕಿ Mannu Bhandari ಇನ್ನಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More