Home> India
Advertisement

ಚೀನಾಕ್ಕೆ ಮತ್ತೊಂದು ಆಘಾತ, ಕೇಂದ್ರ ಸರ್ಕಾರದ ಈ ಸಚಿವಾಲಯದಿಂದ ಚೀನಾ ಉತ್ಪನ್ನಗಳ ನಿಷೇಧ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ತಮ್ಮ ಇಲಾಖೆಯಲ್ಲಿ ಯಾವುದೇ ಚೀನೀ ಸರಕುಗಳು ಬರುವುದಿಲ್ಲ ಮತ್ತು ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು. ಇದಲ್ಲದೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಗದಿಪಡಿಸಿದ ಮಾನದಂಡಗಳಿಗೆ ವಿದೇಶಿ ಸರಕುಗಳನ್ನು ಸಹ ಪರೀಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
 

ಚೀನಾಕ್ಕೆ ಮತ್ತೊಂದು ಆಘಾತ, ಕೇಂದ್ರ ಸರ್ಕಾರದ ಈ ಸಚಿವಾಲಯದಿಂದ ಚೀನಾ ಉತ್ಪನ್ನಗಳ ನಿಷೇಧ

ನವದೆಹಲಿ: ಇಂಡೋ-ಚೀನಾ (Indo-China) ಗಡಿ ವಿವಾದದ ವಿಷಯ ಈಗ ಬಯಲು ಸೀಮೆಯನ್ನು ತಲುಪಿದೆ. ಗಡಿಭಾಗದಲ್ಲಿ ವಿನಾಕಾರಣ ಯುದ್ಧ ಭೀತಿ ನಿರ್ಮಾಣ ಮಾಡುತ್ತಿರುವ ಚೀನಾ ವಿರುದ್ಧ ಭಾರತ ಸರ್ಕಾರದ ಕಟ್ಟುನಿಟ್ಟಿನ ನಿಲುವಿನಿಂದಾಗಿ ಈಗ ಅನೇಕ ಸಚಿವಾಲಯಗಳು ಚೀನಾದ ಸರಕುಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿವೆ. ಇತ್ತೀಚಿಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಸಚಿವಾಲಯದಲ್ಲಿ ಎಲ್ಲಾ ಚೀನೀ ಸರಕುಗಳನ್ನು ನಿಷೇಧಿಸಲು ಈಗ ನಿರ್ಧರಿಸಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್ (Ram Vilas Paswan) ಅವರು ತಮ್ಮ ಇಲಾಖೆಯಲ್ಲಿ ಯಾವುದೇ ಚೀನೀ ಸರಕುಗಳು ಬರುವುದಿಲ್ಲ ಮತ್ತು ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು. ಇದಲ್ಲದೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಗದಿಪಡಿಸಿದ ಮಾನದಂಡಗಳಿಗೆ ವಿದೇಶಿ ಸರಕುಗಳನ್ನು ಸಹ ಪರೀಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಆಹಾರ ಸಚಿವರ ಈ ನಿರ್ಧಾರದ ನಂತರ ಸಚಿವಾಲಯ ಮತ್ತು ಸಚಿವಾಲಯದ ಅಡಿಯಲ್ಲಿರುವ ಇಲಾಖೆಗಳು ಮತ್ತು ಸಂಸ್ಥೆಗಳು ಮಾಡಿದ ಖರೀದಿಗಳಲ್ಲಿ ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡಲಾಗಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಮತ್ತು ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (ಸಿಡಬ್ಲ್ಯುಸಿ) ಮುಂತಾದ ಸಂಸ್ಥೆಗಳು ಕೇಂದ್ರ ಆಹಾರ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ.

ಚೀನಾದಲ್ಲಿ ತಯಾರಿಸಿದ ಯಾವುದೇ ವಸ್ತುವನ್ನು ಜಿಇಎಂ ಪೋರ್ಟಲ್‌ನಿಂದ ಅಥವಾ ಬೇರೆಲ್ಲಿಯೂ ಖರೀದಿಸಲಾಗುವುದಿಲ್ಲ ಎಂದು ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ವಿದೇಶಿ ಸರಕುಗಳನ್ನು ಮಾನದಂಡಗಳ ಮೇಲೆ ಪರೀಕ್ಷಿಸಲು ನಿಯಮಗಳನ್ನು ರೂಪಿಸಲಾಗುತ್ತಿದೆ. ಈ ನಿಯಮಗಳು ಚೀನಾಕ್ಕೆ ಮಾತ್ರವಲ್ಲದೆ ವಿದೇಶದಿಂದ ಬರುವ ಎಲ್ಲಾ ಸರಕುಗಳಿಗೂ ಅನ್ವಯವಾಗುತ್ತವೆ  ಎಂದು ಕೇಂದ್ರ ಸಚಿವರು ಹೇಳಿದರು.

ಚೀನಿ ಆ್ಯಪ್‌ಗಳ ಬ್ಯಾನ್ ಬೆನ್ನಲ್ಲೇ ಈ ಭಾರತೀಯ ಆ್ಯಪ್‌ಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡ್...!

ಭಾರತೀಯ ಸರಕುಗಳನ್ನು ವಿದೇಶದಲ್ಲಿ ಪರೀಕ್ಷಿಸಿದಂತೆಯೇ ಅದೇ ರೀತಿಯಲ್ಲಿ ವಿದೇಶಿ ಸರಕುಗಳನ್ನು ಇಲ್ಲಿಯ ಮಾನದಂಡಗಳ ಮೇಲೂ ಪರೀಕ್ಷಿಸಲಾಗುವುದು ಎಂದು ಅವರು ಹೇಳಿದರು.

ಚೀನಾದೊಂದಿಗಿನ ಗಡಿ ವಿವಾದದ ನಂತರ ಅನೇಕ ಸರ್ಕಾರಿ ಇಲಾಖೆಗಳು ಚೀನಾದ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಮುರಿದಿವೆ. ಇವುಗಳಲ್ಲಿ ಭಾರತೀಯ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಮತ್ತು ಬಿಎಸ್‌ಎನ್‌ಎಲ್ ಸೇರಿವೆ. ಸರ್ಕಾರದ ಕಠಿಣ ಮನೋಭಾವದಿಂದಾಗಿ ಚೀನಾದ ಕಂಪನಿಗಳು ಲಕ್ಷಾಂತರ ಡಾಲರ್‌ಗಳ ನಷ್ಟ ಅನುಭವಿಸುತ್ತವೆ.
 

Read More