Home> India
Advertisement

Pet Love: ಸಾವನ್ನಪ್ಪಿದ ಮುದ್ದಿನ ನಾಯಿಯ ಕಂಚಿನ ಪ್ರತಿಮೆ ನಿರ್ಮಿಸಿದ ವ್ಯಕ್ತಿ..!

ಸಾವನ್ನಪ್ಪಿದ ಪ್ರೀತಿಯ ನಾಯಿಯ ಸವಿನೆನಪಿಗಾಗಿ ಕಂಚಿನ ಪ್ರತಿಮೆ ನಿರ್ಮಿಸಿದ ವ್ಯಕ್ತಿ.

Pet Love: ಸಾವನ್ನಪ್ಪಿದ ಮುದ್ದಿನ ನಾಯಿಯ ಕಂಚಿನ ಪ್ರತಿಮೆ ನಿರ್ಮಿಸಿದ ವ್ಯಕ್ತಿ..!

ಆಂಧ್ರಪ್ರದೇಶ: ಸಾಕುಪ್ರಾಣಿಗಳನ್ನು ಕುಟುಂಬ ಸದಸ್ಯರಂತೆ ಕಾಣುವುದು ಹೊಸತೇನಲ್ಲ. ಅನೇಕ ಜನರು ತಮ್ಮ ಸಾಕುಪ್ರಾಣಿಗಳನ್ನು ಮನೆಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಜೊತೆಗಿನ ತಮ್ಮ ಪ್ರೀತಿ ಮತ್ತು ಬಂಧವನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವರು ಪ್ರಾಣಿಗಳ ಬಗೆಗೆ ತೋರುವ ಪ್ರೀತಿ ಮತ್ತು ಕಾಳಜಿ ಅನನ್ಯವಾಗಿರುತ್ತದೆ. ಪ್ರೀತಿಯಿಂದ ಸಾಕಿದ ಬೆಕ್ಕು, ನಾಯಿ ಅಥವಾ ಇತರ ಪ್ರಾಣಿಗಳು ಸಾವನ್ನಪ್ಪಿದಾಗ ಮಾಲೀಕರಿಗೆ ದುಃಖವಾಗುವುದು ಸಹಜ.

ಆಂಧ್ರಪ್ರದೇಶದಲ್ಲಿ ಬಹಳ ಪ್ರೀತಿಯಿಂದ ಸಾಕಿದ್ದ ಮುದ್ದಾದ ಶ್ವಾನ ಸಾವನ್ನಪ್ಪಿದ ಬಳಿಕ ಅದರ ಕಂಚಿನ ಪ್ರತಿಮೆ(Bronze Statue)ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ಸುದ್ದಿಯಾಗಿದ್ದಾರೆ. ಹೌದು, ಜ್ಞಾನ ಪ್ರಕಾಶ ರಾವ್ ಎಂಬುವರು ಕೆಲ ವರ್ಷಗಳ ಹಿಂದೆ ಮುದ್ದಾದ ನಾಯಿಮರಿಯನ್ನು ಮನೆಗೆ ತಂದು ಸಾಕುತ್ತಿದ್ದರು. ಆ ನಾಯಿಮರಿ ದೊಡ್ಡದಾಗಿ ಮನೆ ಸದಸ್ಯರ ಪ್ರೀತಿಗೆ ಪಾತ್ರವಾಗಿ ಬದುಕುತ್ತಿತ್ತು. ಆದರೆ 5 ವರ್ಷಗಳ ಹಿಂದೆ ಅನಾರೋಗ್ಯದಿಂದ ಆ ನಾಯಿ ಸಾವನ್ನಪ್ಪಿತ್ತು. ಪ್ರೀತಿಯಿಂದ ಸಾಕಿದ್ದ ನಾಯಿ(Dog) ಸಾವನ್ನಪ್ಪಿದ್ದರಿಂದ ಇಡೀ ಕುಟುಂಬ ಸದಸ್ಯರೇ ದುಃಖದ ಕಡಲಿನಲ್ಲಿ ಮುಳುಗಿದ್ದರು. ಅದರಲ್ಲೂ ಚಿಕ್ಕದಿರುವಾಗಲೇ ಮನೆಗೆ ತಂದು ಸಾಕಿದ್ದ ಶ್ವಾನದ ಸಾವು ಜ್ಞಾನ ಪ್ರಕಾಶ ರಾವ್ ಅವರಿಗೆ ಅರಗಿಸಿಕೊಳ್ಳಲಾಗಿಲ್ಲ. ಆ ನಾಯಿಯ ಸವಿನೆನಪಿಗಾಗಿ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿದ ಅವರು ತಮ್ಮ ಮನೆಯ ಪಕ್ಕದಲ್ಲಿರುವ ಸ್ಥಳದಲ್ಲಿ ಕಂಚಿನ ಪ್ರತಿಮೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ WhatsApp DP ನೋಡುತ್ತಿದ್ದಾರೆ ಹೀಗೆ ಚೆಕ್ ಮಾಡಿ

ನಾಯಿಯ 5ನೇ ಪುಣ್ಯತಿಥಿಯ ದಿನದಂದು ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಜ್ಞಾನ ಪ್ರಕಾಶ ರಾವ್ ಮತ್ತು ಅವರ ಕುಟುಂಬ ಸದಸ್ಯರು ಎಲ್ಲ ರೀತಿಯ ಶಾಸ್ತ್ರಗಳನ್ನೂ ನೆರವೇರಿಸಿದ್ದಾರೆ. ನಾಯಿಯ ಪುತ್ಥಳಿಯನ್ನು ಹೂಗಳಿಂದ ಸಿಂಗರಿಸಿ, ಪೂಜೆಯನ್ನೂ ಮಾಡಿದ್ದಾರೆ. ಅಲ್ಲದೆ ಹೊಸದಾಗಿ ನಿರ್ಮಿಸಿರುವ ಶ್ವಾನದ ಕಂಚಿನ ಪ್ರತಿಮೆ(Dog Bronze Statue)ಗೆ ಕಲಶಾಭಿಷೇಕ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬಂದವರಿಗೆ ಊಟ ಕೂಡ ಹಾಕಿಸಿದ್ದಾರೆ.

ಇದನ್ನೂ ಓದಿ: PF ಗ್ರಾಹಕರಿಗೆ ಗುಡ್ ನ್ಯೂಸ್ : ಈ ತಿಂಗಳು ನಿಮ್ಮಗೆ ಸಿಗಲಿದೆ ಶೇ.8.5 ಬಡ್ಡಿ! 

ಈ ಬಗ್ಗೆ ಪ್ರತಿಕ್ರಿಯಿಸಿರುವ ಜ್ಞಾನ ಪ್ರಕಾಶ ರಾವ್, ‘ಈ ನಾಯಿಯನ್ನು ನಾವು ಅತ್ಯಂತ ಪ್ರೀತಿಯಿಂದ ಸಾಕಿದ್ದೇವು. ಅದನ್ನು ನಮ್ಮ ಮಕ್ಕಳಂತೆ ನೋಡಿಕೊಂಡಿದ್ದೇವು. 9 ವರ್ಷಗಳ ಹಿಂದೆಯೇ ಈ ನಾಯಿಯನ್ನು ತಂದು ಸಾಕುತ್ತಿದ್ದೇವು. ಆದರೆ 5 ವರ್ಷಗಳ ಹಿಂದೆ ಅನಾರೋಗ್ಯದಿಂದ ಇದು ಮೃತಪಟ್ಟಿತ್ತು. ನಮ್ಮ ಪ್ರೀತಿಗೆ ಪಾತ್ರವಾಗಿದ್ದ ನಾಯಿ ಸಾವನ್ನಪ್ಪಿದ್ದು ನಮಗೆ ಬಹಳ ದುಃಖ ತಂದಿದೆ. ಪ್ರತಿವರ್ಷ ಅದರ ಪುಣ್ಯತಿಥಿ ಮಾಡಿಕೊಂಡು ಬಂದಿದ್ದೇವು. 5ನೇ ವರ್ಷದ ಪುಣ್ಯತಿಥಿಗೆ ಅದರ ಸವಿನೆನಪಿಗಾಗಿ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿ ಕಂಚಿನ ಪ್ರತಿಮೆ ನಿರ್ಮಿಸಿದ್ದೇವೆ’ ಎಂದು ಹೇಳಿದ್ದಾರೆ. ಪ್ರತಿಯೊಬ್ಬರ ಹೃದಯ ತಟ್ಟುವಂತಿರುವ ಈ ಶ್ವಾನದ ಕಂಚಿನ ಪ್ರತಿಮೆ ನಿರ್ಮಾಣದ ಸುದ್ದಿ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More