Home> India
Advertisement

Free, Free, Free… ಇಲ್ಲಿ ಎಸಿ, ಫ್ರಿಡ್ಜ್ ಸೇರಿ ಗೃಹೋಪಯೋಗಿ ವಸ್ತುಗಳೆಲ್ಲಾ Free: ಮಿಸ್ ಮಾಡದೆ ಇಂದೇ ಭೇಟಿ ನೀಡಿ

Wall of Goodness: ಚಳಿಗಾಲದಲ್ಲಿ, ಅನೇಕ ಜನರು ತಮ್ಮ ಹಳೆಯ ಸ್ವೆಟರ್ ನಂತಹ ವಸ್ತುಗಳನ್ನು ಇಲ್ಲಿ ಇಡುತ್ತಾರೆ. ಇದರ ಉದ್ದೇಶ ನಿರಾಶ್ರಿತರು, ಬಡವರು ಬಳಸಿಕೊಳ್ಳಲಿ ಎಂಬುದಾಗಿದೆ. ಆದರೆ ಇಂದು ನಾವು ನಿಮಗೆ 'ಬಾಕ್ಸ್ ಆಫ್ ಗುಡ್ನೆಸ್’ ಬಗ್ಗೆ ತಿಳಿಸಲಿದ್ದೇವೆ. ಈ ಪೆಟ್ಟಿಗೆಯಲ್ಲಿ ಹಳೆ ಬಟ್ಟೆಗಳ ಬದಲು ಮನೆಯಲ್ಲಿರುವ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಿ, ಸಮಾಜದಲ್ಲಿ ಕೆಲಸ ಮಾಡುವವರು ಹಾಗೂ ಇತರೆ ನಿರ್ಗತಿಕರಿಗೆ ನೀಡಲಾಗುತ್ತದೆ.

Free, Free, Free… ಇಲ್ಲಿ ಎಸಿ, ಫ್ರಿಡ್ಜ್ ಸೇರಿ ಗೃಹೋಪಯೋಗಿ ವಸ್ತುಗಳೆಲ್ಲಾ Free: ಮಿಸ್ ಮಾಡದೆ ಇಂದೇ ಭೇಟಿ ನೀಡಿ

Wall of Goodness: ನಮ್ಮಲ್ಲಿ ಹೆಚ್ಚಿನವರು 'ಸದಾಚಾರದ ಗೋಡೆ(wall of goodness)' ಎಂಬ ಪದವನ್ನು ಕೇಳಿರಬೇಕು. ಇದು ಸಾಮಾನ್ಯವಾಗಿ ಒಂದು ಅಡ್ಡರಸ್ತೆ ಅಥವಾ ಕಾಲೋನಿಯ ಮುಖ್ಯ ಗೇಟ್‌’ನಲ್ಲಿ ಕಂಡುಬರುತ್ತದೆ. ಬಡವರ ಸಹಾಯಕ್ಕಾಗಿ ‘wall of goodness'ನ್ನು ಮಾಡಲಾಗುತ್ತದೆ. ಇದರ ಮೇಲೆ ಜನರು ತಮ್ಮ ಹಳೆಯ ಬಟ್ಟೆಗಳು, ಅಗತ್ಯವಿಲ್ಲದ ವಸ್ತುಗಳನ್ನು ನೇತುಹಾಕುತ್ತಾರೆ. ಅದು ಅಗತ್ಯವಿರುವವರಿಗೆ ಉಪಯುಕ್ತವಾಗುತ್ತದೆ ಎಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ.

ಇದನ್ನೂ ಓದಿ: ನಾಟು ನಾಟು ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಪಾಕಿಸ್ತಾನ ನಟಿ..! ವಿಡಿಯೋ ವೈರಲ್‌ 

ಚಳಿಗಾಲದಲ್ಲಿ, ಅನೇಕ ಜನರು ತಮ್ಮ ಹಳೆಯ ಸ್ವೆಟರ್ ನಂತಹ ವಸ್ತುಗಳನ್ನು ಇಲ್ಲಿ ಇಡುತ್ತಾರೆ. ಇದರ ಉದ್ದೇಶ ನಿರಾಶ್ರಿತರು, ಬಡವರು ಬಳಸಿಕೊಳ್ಳಲಿ ಎಂಬುದಾಗಿದೆ. ಆದರೆ ಇಂದು ನಾವು ನಿಮಗೆ 'ಬಾಕ್ಸ್ ಆಫ್ ಗುಡ್ನೆಸ್’ ಬಗ್ಗೆ ತಿಳಿಸಲಿದ್ದೇವೆ. ಈ ಪೆಟ್ಟಿಗೆಯಲ್ಲಿ ಹಳೆ ಬಟ್ಟೆಗಳ ಬದಲು ಮನೆಯಲ್ಲಿರುವ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಿ, ಸಮಾಜದಲ್ಲಿ ಕೆಲಸ ಮಾಡುವವರು ಹಾಗೂ ಇತರೆ ನಿರ್ಗತಿಕರಿಗೆ ನೀಡಲಾಗುತ್ತದೆ.

ಲೋಟಸ್ ಬೌಲೆವರ್ಡ್ ಸೊಸೈಟಿ ನೋಯ್ಡಾದ ಉಪಕ್ರಮ:

ಲೋಟಸ್ ಬೌಲೆವರ್ಡ್ ಸೊಸೈಟಿ ಎಂದು ಕರೆಯಲ್ಪಡುವ ಈ ಸೊಸೈಟಿಯು ನೋಯ್ಡಾದಲ್ಲಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಕಾರ್ಯದರ್ಶಿ ಅಭಿಷೇಕ್ ಗುಪ್ತಾ, “ಸಮಾಜದಲ್ಲಿ ಅನೇಕ ಕುಟುಂಬಗಳ ಮನೆಯಲ್ಲಿ ಬಳಸದೇ ಇರುವ ಎಲೆಕ್ಟ್ರಾನಿಕ್ ವಸ್ತುಗಳಿರುತ್ತವೆ. ಇಂತರ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡಿದರೆ ಉತ್ತಮ ಎಂಬ ಆಲೋಚನೆಯಿಂದ ಈ ಉಪಕ್ರಮ ಮಾಡಲಾಗಿದೆ. ಇದು ನಿರ್ಗತಿಕರಿಗೆ ಉಪಯುಕ್ತವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Virat Kohli:“ನನ್ನನ್ನು ಮದುವೆಯಾಗು ಕೊಹ್ಲಿ…!!”: ವಿರಾಟ್’ಗೆ ಪ್ರಪೋಸ್ ಮಾಡಿದ ಈ ಸ್ಟಾರ್ ಕ್ರಿಕೆಟ್ ಆಟಗಾರ್ತಿ

ಸೊಸೈಟಿಯ ಜಂಟಿ ಉಪಕ್ರಮದಿಂದ ಇಲ್ಲಿ ದೊಡ್ಡ ಬಾಕ್ಸ್ ಒಂದನ್ನು ಇಡಲಾಗಿತ್ತು. ಇದರಲ್ಲಿ ಅಪಾರ್ಟ್ ಮೆಂಟ್ ನವರು ಬಳಕೆಯಾಗದ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುತ್ತಾರೆ. ಎಸಿ, ಫ್ರಿಡ್ಜ್, ಕೂಲರ್ ಸೇರಿದಂತೆ ಹಲವು ಅಗತ್ಯ ವಸ್ತುಗಳು ಈ ಬಾಕ್ಸ್ ಗಳಲ್ಲಿ ಇಡಲಾಗಿದ್ದು, ಸೊಸೈಟಿಯಲ್ಲಿ ಕೆಲಸ ಮಾಡುವ ಸೇವಕರು, ತೋಟಗಾರರು, ಗೇಟ್‌ಕೀಪರ್‌ಗಳು ಸೇರಿದಂತೆ ಇತರ ಜನರು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಬಹುದು. ನೊಯ್ಡಾದ ಸೊಸೈಟಿಯವರು ಮಾಡಿರುವ ಈ ಕೆಲಸ ಸಮಾಜಕ್ಕೆ ಸ್ಪೂರ್ತಿಯೇ ಎನ್ನಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More