Home> India
Advertisement

ಮುಂಬೈನಲ್ಲಿ ಅಲ್ ಖೈದಾ ಉಗ್ರರ ದಾಳಿ ಭೀತಿ : ಮಹಾರಾಷ್ಟ್ರದಲ್ಲಿ ಹೈ ಅಲರ್ಟ್!

ಎಕ್ಯೂಐಎಸ್ ಜೂನ್ 6ರಂದು ಬೆದರಿಕೆ ಪತ್ರ ನೀಡಿದ್ದು, ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ 'ಪ್ರವಾದಿ ಗೌರವಕ್ಕಾಗಿ ಹೋರಾಡಲು' ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿತ್ತು.

ಮುಂಬೈನಲ್ಲಿ ಅಲ್ ಖೈದಾ ಉಗ್ರರ ದಾಳಿ ಭೀತಿ : ಮಹಾರಾಷ್ಟ್ರದಲ್ಲಿ ಹೈ ಅಲರ್ಟ್!

Mumbai on High Alert : ಪ್ರವಾದಿ ಮುಹಮ್ಮದ್ ಪರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಸೇಡು ತೀರಿಸಿಕೊಳ್ಳಲು ಅಲ್-ಖೈದಾ (AQIS) ದೇಶದ ಹಲವಾರು ನಗರಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಮಾಡುವ ಬೆದರಿಕೆ ನೀಡಿದ ನಂತರ ದೇಶದ ಭದ್ರತಾ ಏಜೆನ್ಸಿಗಳು ಅಲರ್ಟ್ ಮೋಡ್‌ನಲ್ಲಿವೆ. ಅಲ್ ಖೈದಾ ಬಗ್ಗೆ ಮಹಾರಾಷ್ಟ್ರ ಹೈ ಅಲರ್ಟ್ ಘೋಷಣೆ ಮಾಡಿದೆ. 

ಮುಂಬೈನಲ್ಲಿ ಉಗ್ರರ ಸಂಚು

ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಸ್ಥಳಗಳಲ್ಲಿ ಹೈ ಅಲರ್ಟ್ ನೀಡಲಾಗಿದೆ. ಕಾನ್ಪುರದ ಮಾದರಿಯಲ್ಲಿ ಕೆಲವು ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸುವ ಸಂಚು ನಡೆಸಬಹುದು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ಕಲ್ಲು, ಬಾಟಲ್ ದಾಳಿಯ ಸಾಧ್ಯತೆಯ ಕುರಿತು ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ ಇಡಲು ನಿರ್ಧರಿಸಿದೆ. ಈ ಕುರಿತು ಗೃಹ ಸಚಿವಾಲಯ ಶೀಘ್ರದಲ್ಲೇ ಸಭೆ ನಡೆಸಲಿದ್ದು, ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸಚಿವಾಲಯದ ಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ಪ್ರವಾದಿ ಬಗ್ಗೆ ಹೇಳಿಕೆ ವಿಚಾರ: ಅಲ್ ಖೈದಾದಿಂದ ಭಾರತದಲ್ಲಿ ಆತ್ಮಾಹುತಿ ಬಾಂಬ್​​ ದಾಳಿ ಬೆದರಿಕೆ!

ಅಲ್-ಖೈದಾ ಬೆದರಿಕೆಯ ನಂತರ ಸರ್ಕಾರದಿಂದ ಹೈ ಅಲರ್ಟ್

ಎಕ್ಯೂಐಎಸ್ ಜೂನ್ 6ರಂದು ಬೆದರಿಕೆ ಪತ್ರ ನೀಡಿದ್ದು, ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ 'ಪ್ರವಾದಿ ಗೌರವಕ್ಕಾಗಿ ಹೋರಾಡಲು' ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿತ್ತು. ಈ ಬೆದರಿಕೆಯ ನಂತರ, ಎಲ್ಲಾ ರಾಜ್ಯಗಳು ಹೈ ಅಲರ್ಟ್ ಆಗಿವೆ. ಈ ಭಯೋತ್ಪಾದಕರು ಈಗ ದೆಹಲಿ, ಬಾಂಬೆ, ಯುಪಿ ಮತ್ತು ಗುಜರಾತ್‌ನಲ್ಲಿ ತಮ್ಮ ಅಂತ್ಯಕ್ಕಾಗಿ ಕಾಯಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. ನಿರ್ದಿಷ್ಟ ನಗರಗಳನ್ನು ಹೆಸರಿಸಿ ಅಲ್-ಖೈದಾ ಬೆದರಿಕೆ ಹಾಕಿರುವುದು ಇದೇ ಮೊದಲು.

ಕೇಂದ್ರೀಯ ಸಂಸ್ಥೆಗಳು ನಿಗಾ

ಬೆದರಿಕೆ ಪತ್ರವನ್ನು ಪರಿಶೀಲಿಸಿದ ನಂತರ ಕೇಂದ್ರೀಯ ಏಜೆನ್ಸಿಗಳು ಸಂಬಂಧಪಟ್ಟ ಎಲ್ಲಾ ರಾಜ್ಯ ಪೊಲೀಸ್ ಪಡೆಗಳಿಗೆ ಹೆಚ್ಚಿನ ಎಚ್ಚರಿಕೆಯನ್ನು ನೀಡುವಂತೆ ಕೇಳಿಕೊಂಡಿವೆ. ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಅನೇಕ ಭಯೋತ್ಪಾದಕ ಸಂಘಟನೆಗಳು ಬೆದರಿಕೆ ಪತ್ರಗಳನ್ನು ನೀಡಿವೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮುಸ್ಲಿಂ ರಾಷ್ಟ್ರಗಳಿಂದಲೂ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಮತ್ತೊಂದೆಡೆ, ದೆಹಲಿ ಪೊಲೀಸರು ತನಗೆ ಭದ್ರತೆ ನೀಡಲು ನಿರ್ಧರಿಸಿದ ನಂತರ ತನಗೆ ಬೆದರಿಕೆಗಳು ಬರುತ್ತಿವೆ ಎಂದು ನೂಪುರ್ ಶರ್ಮಾ ಆರೋಪಿಸಿದ್ದಾರೆ.

ಇದನ್ನೂ ಓದಿ : ಮುಚ್ಚಿಡಲು ಏನೂ ಇಲ್ಲ, ನಮ್ಮದು ಕಾನೂನು ಪಾಲಿಸುವ ಪಕ್ಷ : ಕಾಂಗ್ರೆಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More