Home> India
Advertisement

ಭಾರತದ ದೊಡ್ಡ ಸೇನಾ ನೆಲೆಯನ್ನು ಸ್ಫೋಟಿಸಲು ಅಲ್-ಖೈದಾ ಪ್ಲಾನ್!

ಭಯೋತ್ಪಾದಕ ಸಂಸ್ಥೆ ಅಲ್ ಖೈದಾ(Al-Qaeda) ಭಾರತದಲ್ಲಿ ದೊಡ್ಡ ಆಕ್ರಮಣ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ದಾಳಿಯು ಭಾರತದ ದೊಡ್ಡ ಸೇನಾ ನೆಲೆಯನ್ನು ಸ್ಫೋಟಿಸಲು ತಯಾರಿ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ದೊಡ್ಡ ಸೇನಾ ನೆಲೆಯನ್ನು ಸ್ಫೋಟಿಸಲು ಅಲ್-ಖೈದಾ ಪ್ಲಾನ್!

ನವದೆಹಲಿ: ಭಯೋತ್ಪಾದಕ ಸಂಸ್ಥೆ ಅಲ್ ಖೈದಾ(Al-Qaeda) ಭಾರತದಲ್ಲಿ ದೊಡ್ಡ ಆಕ್ರಮಣ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ದಾಳಿಯು ಭಾರತದ ದೊಡ್ಡ ಸೇನಾ ನೆಲೆಯನ್ನು ಸ್ಫೋಟಿಸಲು ತಯಾರಿ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಲ್ ಖೈದಾ ಭಯೋತ್ಪಾದಕರು ತಮ್ಮನ್ನು ಈ ಘಟನೆಯನ್ನು ಕಾರ್ಯಗತಗೊಳಿಸದೆ, ಭಯೋತ್ಪಾದಕ ಅಬ್ದುಲ್ಲಾ ಅಲ್ಹಾಂಡಾಗೆ ಇದರ ಜವಾಬ್ದಾರಿ ವಹಿಸಲು ಅಲ್ ಖೈದಾ ನಿರ್ಧರಿಸಿದೆ. ಭಾರತದ ಮಿಲಿಟರಿ ನೆಲೆಯಲ್ಲಿ ಆತ್ಮಹತ್ಯೆ ದಾಳಿ ನಡೆಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. 

ಜೈಶ್-ಇ-ಮೊಹಮ್ಮದ್ ಸಹ ಈ ಕಾರ್ಯಸಾಧನೆಗೆ ಸಹಾಯ ಮಾಡುತ್ತಿದೆ ಎಂದು ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಲ್ಲಿ ತಿಳಿದುಬಂದಿದೆ. ಹೇಗಾದರೂ,  ಅಲ್ ಖೈದಾ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ.

ಈ ಮಾಹಿತಿ ತಿಳಿಯುತ್ತಿದ್ದಂತೆ ಇಂಟೆಲಿಜೆನ್ಸ್ ಭಾರತೀಯ ಭದ್ರತಾ ನೆಲೆಗಳಲ್ಲಿ ಅಲರ್ಟ್ ಆಗಿರುವಂತೆ ಎಚ್ಚರಿಕೆ ನೀಡಿದೆ. ಭದ್ರತಾ ಚಾಕ್ ಅನ್ನು ಇರಿಸಿಕೊಳ್ಳಲು ಸೂಚನೆ ನೀಡಲಾಗಿದ್ದು, ಮಿಲಿಟರಿ ನೆಲೆಗಳಲ್ಲಿರುವವರು ಮೈಯೆಲ್ಲಾ ಕಣ್ಣಾಗಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

2016 ರಲ್ಲಿ ಪಠಾನ್ಕೋಟ್ನಲ್ಲಿ ದಾಳಿ:
2016 ರಲ್ಲಿ ಪಂಜಾಬ್, ಪಠಾನ್ಕೋಟ್ನಲ್ಲಿರುವ ಮಿಲಿಟರಿ ನೆಲೆಯಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯನ್ನು ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನಡೆಸಿತು. ಈ ಆತ್ಮಹತ್ಯಾ ದಾಳಿಯಲ್ಲಿ  JeM ನ ಆರು ಭಯೋತ್ಪಾದಕರು ಸುಮಾರು 65 ಗಂಟೆಗಳ ಕಾರ್ಯಾಚರಣೆ ನಡೆಸಿದ್ದರು. ಈ ಘಟನೆಯಲ್ಲಿ 7 ಸೈನಿಕರು ಹುತಾತ್ಮರಾದರು.

ಪಠಾನ್ಕೋಟ್ ನಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕರು ಡಿಸೆಂಬರ್ 2015 ರಲ್ಲಿ ಪಾಕಿಸ್ತಾನದಿಂದ  ಭಾರತದ ಗಡಿ ದಾಟಿದ್ದರು. ಜನವರಿ 2, 2016ರಂದು ಬೆಳಿಗ್ಗೆ 3:30 ರ ವೇಳೆಗೆ ಭಯೋತ್ಪಾದಕರು ಶಸ್ತ್ರಾಸ್ತ್ರಗಳೊಂದಿಗೆ ಏರ್ಬೇಸ್ ತಲುಪಿದ್ದರು. ಈ ದಾಳಿಯಲ್ಲಿ ಏರ್ಬೇಸ್ ನ ಏಳು ಭದ್ರತಾ ಸಿಬ್ಬಂದಿಗಳು ಮೃತಪಟ್ಟರು ಮತ್ತು 37 ಮಂದಿ ಗಾಯಗೊಂಡಿದ್ದರು.  ದಾಳಿ ಮಾಡಲು ಬಂದ ಎಲ್ಲಾ ಭಯೋತ್ಪಾದಕರು ಸಾವನ್ನಪ್ಪಿದರು.

Read More