Home> India
Advertisement

Bharat Bandh: ಫೆ.26ಕ್ಕೆ 'ಸಾರಿಗೆ ಸಂಘಟನೆ'ಗಳಿಂದ 'ಭಾರತ್ ಬಂದ್'ಗೆ ಕರೆ..!

ಇದರಿಂದಾಗಿ ಅಂದು 40 ಲಕ್ಷ ಟ್ರಕ್ ಗಳು ರಸ್ತೆಗೆ ಇಳಿಯೋದಿಲ್ಲ. ಇದರಿಂದಾಗಿ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Bharat Bandh: ಫೆ.26ಕ್ಕೆ 'ಸಾರಿಗೆ ಸಂಘಟನೆ'ಗಳಿಂದ 'ಭಾರತ್ ಬಂದ್'ಗೆ ಕರೆ..!

ಬೆಂಗಳೂರು: ಇಂಧನ ದರ ಏರಿಕೆ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಹೊಸ ಇ-ವೇ ಬಿಲ್ ನೀತಿ ವಿರುದ್ಧ, ಫೆಬ್ರವರಿ 26ಕ್ಕೆ, ಸಿಎಐಟಿ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಇದರಿಂದಾಗಿ ಅಂದು 40 ಲಕ್ಷ ಟ್ರಕ್ ಗಳು ರಸ್ತೆಗೆ ಇಳಿಯೋದಿಲ್ಲ. ಇದರಿಂದಾಗಿ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಕುರಿತಂತೆ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್(CAIT) ಮಾಹಿತಿ ನೀಡಿದ್ದು, ಇಂಧನ ದರ ಏರಿಕೆ, ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಹಾಗೂ ಹೊಸ ಇ-ವೇ ಬಿಲ್ ನೀತಿಯ ವಿರುದ್ಧ ಫೆಬ್ರವರಿ 26ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಇಂತಹ ನಮ್ಮ ಭಾರತ್ ಬಂದ್ ಗೆ ಭಾರತದ ರಸ್ತೆ ಸಾರಿಗೆ ವಲಯದ ಅತ್ಯುನ್ನತ ಸಂಸ್ಥೆಗಳ್ಲೊಂದಾದ ಆಲ್ ಇಂಡಿಯಾ ಟ್ರಾನ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಷ್ ಬೆಂಬಲ ಸೂಚಿಸಿರುವುದಾಗಿ ತಿಳಿಸಿದೆ.

Heavy Rainfall: ರಾಜ್ಯದಲ್ಲಿ ವರುಣನ ಅಬ್ಬರ: ಉಡುಪಿಯಲ್ಲಿ ಭಾರೀ ಮಳೆ..!

ಫೆ.26ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ವರೆಗೆ ಸುಮಾರು 40 ಲಕ್ಷ ಟ್ರಕ್(Truck) ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಅಂದು ಒಂದು ದಿನ ಎಲ್ಲ ಬುಕ್ಕಿಂಗ್ ತಿರಸ್ಕರಿಸಲಾಗುವುದು. ಇ-ವೇ ಬಿಲ್ ಕೇಂದ್ರಿತ ಸರಕುಗಳ ಸಾಗಾಣಿಕೆಯನ್ನು ತಿರಸ್ಕರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದೆ.

DK Shivakumar: ಕೈ ತೊರೆದು ಕಮಲ ಸೇರಿದವರಿಗೆ ಮರಳಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ ಡಿಕೆಶಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More