Home> India
Advertisement

ತನ್ನ 14ನೆ ವಯಸ್ಸಿನಲ್ಲಿ Degree ಪೂರ್ಣಗೊಳಿಸಿ ಇತಿಹಾಸ ಬರೆದ Hyderabad ಪೋರ

ಇನ್ನೂ ಮಕ್ಕಳು ಶಾಲೆಯಲ್ಲಿ ಓದುವ ವಯಸ್ಸಿನಲ್ಲಿ ಅಗಸ್ತ್ಯ ಜೈಸ್ವಾಲ್ ಹೆಸರಿನ ಪೋರ ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಿಂದ BA ಮಾಸ್ ಕಮ್ಯುನಿಕೆಶನ್ ಮತ್ತು ಜರ್ನಲಿಸಂ ನಲ್ಲಿ ಪದವಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಅಗಸ್ತ್ಯ ಪಾತ್ರನಾಗಿದ್ದಾನೆ.

ತನ್ನ 14ನೆ ವಯಸ್ಸಿನಲ್ಲಿ Degree ಪೂರ್ಣಗೊಳಿಸಿ ಇತಿಹಾಸ ಬರೆದ Hyderabad ಪೋರ

ಹೈದರಾಬಾದ್: ತನ್ನ ವಯಸ್ಸಿನ 14ನೇ ವಯಸ್ಸಿನಲ್ಲಿ ಪದವಿ ವ್ಯಾಸಂಗ ಮುಗಿಸಿ ಅಗಸ್ತ್ಯ ಜೈಸ್ವಾಲ್ ಎಲ್ಲರನ್ನು ಆಚ್ಚರಿಗೊಳಿಸಿದ್ದಾರೆ. ಅಗಸ್ತ್ಯ ಈ ಸಾಧನೆ ಮಾಡಿದ ಮೊದಲ ಭಾರತೀಯ ವಿದ್ಯಾರ್ಥಿ ಎಂದೂ ಕೂಡ ಹೇಳಲಾಗುತ್ತಿದೆ. ಮಕ್ಕಳು ಶಾಲಾಭ್ಯಾಸ ಮಾಡುವ ವಯಸ್ಸಿನ್ಗಲ್ಲಿಯೇ ಅಗಸ್ತ್ಯ ಹೈದ್ರಾಬಾದ್ (Hyderabad) ನ ಓಸ್ಮಾನಿಯಾ ಯುನಿವರ್ಸಿಟಿಯಿಂದ (Osmania University) BA ಮಾಸ್ ಕಮ್ಯೂನಿಕೇಶನ್ ಹಾಗೂ ಜರ್ನಲಿಸಂ ಪದವಿ ಪಡೆದಿದ್ದಾರೆ.

ಇದನ್ನು ಓದಿ- Video: ಆಂಬ್ಯುಲೆನ್ಸ್ ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ಪೊಲೀಸ್ ಪೇದೆ..!
fallbacks

ಈ ಮೊದಲು ಕೂಡ ಹಲವು ಸಾಧನೆ ಮಾಡಿದ್ದಾನೆ ಅಗಸ್ತ್ಯ
ಅಗಸ್ತ್ಯ ಇಂತಹ ಸಾಧನೆ ಮಾಡಿರುವುದು ಇದೆ ಮೊದಲಲ್ಲ. ಇದಕ್ಕೂ ಮೊದಲು 9ನೇ ವರ್ಷ ವಯಸ್ಸಿನಲ್ಲಿ ಅಗಸ್ತ್ಯ ತೆಲಂಗಾಣ ಬೋರ್ಡ್ ಆಯೋಜಿಸುವ 10ನೇ ತರಗತಿ ಹಾಗೂ 11ನೇ ವರ್ಷದಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ಪಾಸ್ ಮಾಡಿದ್ದಾನೆ. ಇದಲ್ಲದೆ ಅಗಸ್ತ್ಯ ರಾಷ್ಟ್ರೀಯ ಮಟ್ಟದ ಟೇಬಲ್ ಟೆನ್ನಿಸ್ ಆಟಗಾರ ಕೂಡ ಆಗಿದ್ದಾನೆ.
ಇದನ್ನು ಓದಿ- ಇನ್ನು ಮುಂದೆ ಬೆಂಗಳೂರು, ಚೆನ್ನೈ, ಹೈದರಾಬಾದಿನಲ್ಲೇ ಸಿಗುತ್ತೆ ತಿರುಪತಿ ಲಡ್ಡು, ಅದೂ ಸಬ್ಸಿಡಿ ದರದಲ್ಲಿ...
fallbacks

ಎರಡು ಕೈಗಳಿಂದ ಏಕಕಾಲಕ್ಕೆ ಬರೆಯುತ್ತಾನೆ ಅಗಸ್ತ್ಯ
ಅಗಸ್ತ್ಯ ತನ್ನ ಎರಡು ಕೈಗಳನ್ನು ಬಳಸಿ ಕೇವಲ 1.72 ಸೆಕೆಂಡ್ ಗಳಲ್ಲಿ A ಟು Z ಟೈಪ್ ಮಾಡಬಲ್ಲರು. ಇದಲ್ಲದೆ ಅಗಸ್ತ್ಯ ಸುಮಧುರ ಕಂಠದ ಮಾಲೀಕ ಕೂಡ ಆಗಿದ್ದಾನೆ. ಅಗಸ್ತ್ಯ ಓರ್ವ ಇಂಟರ್ನ್ಯಾಷನಲ್ ಮೋಟಿವೇಷನಲ್ ಸ್ಪೀಕರ್ ಕೂಡ ಆಗಿದ್ದಾನೆ. ಆದರೆ, ಇವೆಲ್ಲವುಗಳನ್ನು ಹೊರತುಪಡಿಸಿ ಅಗಸ್ತ್ಯ ಓರ್ವ ವೈದ್ಯನಾಗುವ ಕನಸು ಕಾಣುತ್ತಾನೆ.

ಇದನ್ನು ಓದಿ- Boss ನೀಡಿದ Gift ನಿಂದ ಕೋಟ್ಯಾಧಿಪತಿಗಳಾಗಿದ್ದಾರೆ ಈ ಕಂಪನಿಯ ನೌಕರರು
fallbacks

ಕೇವಲ 2 ವರ್ಷ ವಯಸ್ಸಿನಲ್ಲಿಯೇ ಅಗಸ್ತ್ಯ 300 ಪ್ರಶ್ನೆಗಳಿಗೆ ಉತ್ತರಿಸಿದ್ದ
ಅಗಸ್ತ್ಯನ ಈ ಸಾಧನೆಯಿಂದ ಆತನ ಪೋಷಕರು ಕೂಡ ತುಂಬಾ ಖುಷಿಯಾಗಿದ್ದಾರೆ. ಪ್ರತಿಯೊಂದು ಮಗುವಿನಲ್ಲಿ ಒಂದು ವಿಶೇಷ ಗುಣ ಇರುತ್ತದೆ. ಹೀಗಾಗಿ ತಂದೆ-ತಾಯಿಯರು ತಮ್ಮ ಮಕ್ಕಳ ಮೇಲೆ ವೈಯಕ್ತಿಕ ಗಮನ ನೀಡಿದರೆ ಪ್ರತಿಯೊಂದು ಮಗು ತನ್ನ ಕ್ಷೇತ್ರದಲ್ಲಿ ಇತಿಹಾಸ ಬರೆಯಬಲ್ಲದು ಎಂದು ಅಗಸ್ತ್ಯ ಪೋಷಕರು ಹೇಳುತ್ತಾರೆ. ಅಗಸ್ತ್ಯ ತನ್ನ 2 ವರ್ಷ ವಯಸ್ಸಿನಿಂದಲೂ ಕೂಡ ಕಮಾಲ್ ಮಾಡುತ್ತಲೇ ಇದ್ದಾರೆ. ತನ್ನ ಎರಡನೇ ವಯಾಸಿನಲ್ಲಿ 300ಕ್ಕೂ ಅಧಿಕ ಪ್ರಶ್ನೆಗಳ ಉತ್ತರ ನೀಡಿದ್ದರು. ಬಳಿಕ ಪೋಷಕರು ಅವರಿಗೆ ಗೈಡೆನ್ಸ್ ನೀಡಿದ್ದಾರೆ.

ಇದನ್ನು ಓದಿ- ಡಿಸೆಂಬರ್ 1 ರಿಂದ ಬದಲಾಗಲಿವೆ ಹಲವು ನಿಯಮಗಳು, ಇವುಗಳನ್ನು ನೆನಪಿನಲ್ಲಿಡಿ
fallbacks

ಆಟವಾಡುತ್ತಲೇ ಸಿಕ್ಕ ಟ್ರೇನಿಂಗ್ ನಿಂದ ಇತಿಹಾಸ ರಚನೆ
ಈ ಕುರಿತು ಹೇಳಿಕೆ ನೀಡುವ ಅಗಸ್ತ್ಯ ಪೋಷಕರು ನಾವು ಅಗಸ್ತ್ಯನನ್ನು ಆಟವಾಡುವ ವಾತಾವರಣದಲ್ಲಿಯೇ ಶಿಕ್ಷಣ ನೀಡಿದ್ದೇವೆ. ವಿಷಯಗಳನ್ನು ಅರಿತು ತಮ್ಮ ಭಾಷೆಯಲ್ಲಿಅದನ್ನು ಪ್ರಸ್ತುತಪಡಿಸಲು ಹೇಳಿ ಕೊಟ್ಟಿದ್ದೇವೆ. ಯಾವಾಗಲು ಅಗಸ್ತ್ಯ ನಮಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆದರೆ, ಅದಕ್ಕೆ ನಾವು ಪ್ರ್ಯಾಕ್ಟಿಕಲ್ ರೂಪದಲ್ಲಿ ಉತ್ತರಿಸುತ್ತೇವೆ. ಇದರ ಜೊತೆಗೆ ನಾವು ಅವನಿಗೆ ಬರವಣಿಗೆ ಹಾಗೂ ಸ್ಮೃತಿ ಅಭ್ಯಾಸ ಕೂಡ ಹೇಳಿಕೊಟ್ಟಿದ್ದೇವೆ.

Read More