Home> India
Advertisement

ದೆಹಲಿ ಬಿಜೆಪಿ ಅಧ್ಯಕ್ಷ ಪಟ್ಟ ತ್ಯಜಿಸಿದ ಮನೋಜ್ ತಿವಾರಿ

ನಟ-ರಾಜಕಾರಣಿ ಮನೋಜ್ ತಿವಾರಿ ( Manoj Tiwari ) ಅವರು ದೆಹಲಿ ಬಿಜೆಪಿ ಮುಖ್ಯಸ್ಥ ಸ್ಥಾನದಿಂದ ನಿರ್ಗಮಿಸಿದ್ದಾರೆ.ಈಗ ಅವರ ಸ್ಥಾನದಲ್ಲಿ ಆದೇಶ್ ಕುಮಾರ್ ಗುಪ್ತಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಪಕ್ಷ ತಿಳಿಸಿದೆ.

ದೆಹಲಿ ಬಿಜೆಪಿ ಅಧ್ಯಕ್ಷ ಪಟ್ಟ ತ್ಯಜಿಸಿದ ಮನೋಜ್ ತಿವಾರಿ

ನವದೆಹಲಿ: ನಟ-ರಾಜಕಾರಣಿ ಮನೋಜ್ ತಿವಾರಿ ( Manoj Tiwari ) ಅವರು ದೆಹಲಿ ಬಿಜೆಪಿ ಮುಖ್ಯಸ್ಥ ಸ್ಥಾನದಿಂದ ನಿರ್ಗಮಿಸಿದ್ದಾರೆ.ಈಗ ಅವರ ಸ್ಥಾನದಲ್ಲಿ ಆದೇಶ್ ಕುಮಾರ್ ಗುಪ್ತಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಪಕ್ಷ ತಿಳಿಸಿದೆ.

ಮಾಜಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಮೇಯರ್ ಆದೇಶ್ ಗುಪ್ತಾ ಅವರನ್ನು ಅಧ್ಯಕ್ಷ ಪಟ್ಟಕ್ಕೆ ನೇಮಕ ಮಾಡುವುದರ ಮೂಲಕವಾಗಿ ಬಿಜೆಪಿ ಮತ್ತೊಮ್ಮೆ ವೈಶ್ಯ ಸಮುದಾಯದ ಬೆಂಬಲ ಗಳಿಸಲು ಯತ್ನಿಸುತ್ತಿದೆ ಎನ್ನಲಾಗಿದೆ. 

2016 ರಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಮನೋಜ್ ತಿವಾರಿ, ಫೆಬ್ರವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿತ್ತು, ದೆಹಲಿ ಸೋಲಿನ ನಂತರ ಮನೋಜ್ ತಿವಾರಿ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ ಪರ್ಯಾಯ ಮಾರ್ಗ ದೊರೆಯುವವರೆಗೂ ಅವರಿಗೆ ಮುಂದುವರಿಯುವಂತೆ ಕೇಳಲಾಯಿತು ಎಂದು ಮೂಲಗಳು ತಿಳಿಸಿವೆ.

ಈಗ ಬಿಜೆಪಿ ಈ ಬದಲಾವಣೆಯನ್ನು ವಾಡಿಕೆಯ ಕ್ರಮ ಎಂದು ಕರೆದಿದೆ. ದೆಹಲಿ ಜೊತೆಗೆ ಛತ್ತೀಸ್ ಗಡ್ ದಲ್ಲಿ ವಿಷ್ಣು ದಿಯೋ ಸಾಯಿ ಮತ್ತು ಮಣಿಪುರದಲ್ಲಿ ಎಸ್ ಟಿಕೇಂದ್ರ ಸಿಂಗ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.  

Read More