Home> India
Advertisement

ತ್ರಿಪುರಾದಲ್ಲಿ ಭಾರೀ ಬಿರುಗಾಳಿ: ಓರ್ವ ಮಹಿಳೆ ಸಾವು, ನಿರಾಶ್ರಿತರಾದ 6,000 ಮಂದಿ!

ಬಿರುಗಾಳಿಯಿಂದಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ಪಶ್ಚಿಮ ತ್ರಿಪುರಾದಲ್ಲಿ ಹೆಚ್ಚು ನಷ್ಟವಾಗಿದೆ  ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಯೋಜನಾ ಅಧಿಕಾರಿ ಶರತ್ ಕೆ ದಾಸ್ ತಿಳಿಸಿದ್ದಾರೆ.

ತ್ರಿಪುರಾದಲ್ಲಿ ಭಾರೀ ಬಿರುಗಾಳಿ: ಓರ್ವ ಮಹಿಳೆ ಸಾವು, ನಿರಾಶ್ರಿತರಾದ 6,000 ಮಂದಿ!

ಅಗರ್ತಲಾ: ಕಳೆದ ಎರಡು ದಿನಗಳಿಂದ ಬಿಡದೆ ಬೀಸಿದ ಬಿರುಗಾಳಿಯಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 6,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಅಲ್ಲದೆ, ಬೆಳೆಗಳು ಮತ್ತು ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಹಿಂದೆದೂ ಕಂಡರಿಯದಂತಹ ಬಿರುಗಾಳಿ ಈ ಬಾರಿ ಬೀಸಿದ್ದು, ಬುಧವಾರ ಸಂಜೆ ಕೆಲಸದಿಂದ ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರು ಮಾರ್ಗಮಧ್ಯದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ. ಬಿರುಗಾಳಿಯಿಂದಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ಪಶ್ಚಿಮ ತ್ರಿಪುರಾದಲ್ಲಿ ಹೆಚ್ಚು ನಷ್ಟವಾಗಿದೆ  ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಯೋಜನಾ ಅಧಿಕಾರಿ ಶರತ್ ಕೆ ದಾಸ್ ತಿಳಿಸಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಪರಿಹಾರ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್ ಮತ್ತು ಅರೆಸೈನಿಕ ಪಡೆಗಳನ್ನು ಸನ್ನದ್ಧಗೊಳಿಸಲಾಗಿದೆ.  ಮಳೆ ಮತ್ತು ಬಿರುಗಾಳಿಯಿಂದಾಗಿ ಒಟ್ಟು  5,894 ಜನರು ನಿರಾಶ್ರಿತರಾಗಿದ್ದಾರೆ. ಖೋವೈ ಮತ್ತು ಪಶ್ಚಿಮ ತ್ರಿಪುರಾ ಜಿಲ್ಲೆಗಳ 48 ಪರಿಹಾರ ಶಿಬಿರಗಳಲ್ಲಿ ಇವರಿಗೆ ಆಶ್ರಯ ನೀಡಲಾಗಿದೆ ಎಂದು ದಾಸ್ ತಿಳಿಸಿದ್ದಾರೆ. 

Read More