Home> India
Advertisement

ಫೋಟೋ ಶೂಟ್ ಮಧ್ಯೆ ರೈಲು ಬಂತು.. 90 ಅಡಿ ಕಂದಕಕ್ಕೆ ಹಾರಿದ ಜೋಡಿ!! ವಿಡಿಯೋ ವೈರಲ್

Video viral : ರಾಜಸ್ಥಾನದ ಪಾಲಿಯಲ್ಲಿ  ನವ ವಿವಾಹಿತ ಜೋಡಿ ಕೊರ್ಮಗಟ್ ರೈಲ್ವೆ ಸೇತುವೆ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿವಾಗ  ಆಗ ಅನಿರೀಕ್ಷಿತವಾಗಿ ಹಳಿ ಮೇಲೆ ರೈಲು ಬಂದಿದ್ದು,  ಏನು ಮಾಡಬೇಕೆಂದು ತಿಳಿಯದೆ ದಂಪತಿ 90 ಅಡಿ ರೈಲ್ವೆ ಸೇತುವೆಯಿಂದ ಜಿಗಿದಿರುವ ಘಟನೆ ನಡೆದಿದೆ. 

ಫೋಟೋ ಶೂಟ್ ಮಧ್ಯೆ ರೈಲು ಬಂತು.. 90 ಅಡಿ ಕಂದಕಕ್ಕೆ ಹಾರಿದ ಜೋಡಿ!! ವಿಡಿಯೋ ವೈರಲ್

ರಾಜಸ್ಥಾನದ ಪಾಲಿಯಲ್ಲಿ  ನವ ವಿವಾಹಿತ ಜೋಡಿ ಕೊರ್ಮಗಟ್ ರೈಲ್ವೆ ಸೇತುವೆ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿವಾಗ  ಆಗ ಅನಿರೀಕ್ಷಿತವಾಗಿ ಹಳಿ ಮೇಲೆ ರೈಲು ಬಂದಿದ್ದು,  ಏನು ಮಾಡಬೇಕೆಂದು ತಿಳಿಯದೆ ದಂಪತಿ 90 ಅಡಿ ರೈಲ್ವೆ ಸೇತುವೆಯಿಂದ ಜಿಗಿದಿರುವ ಘಟನೆ ನಡೆದಿದೆ. 

ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಆಚರಣೆಗಳು ಎಷ್ಟು ಪಾತ್ರವನ್ನು ವಹಿಸಿವೆಯೋ, ಹಾಗೆಯೇ ಫೋಟೋ ಶೂಟ್‌ಗಳೂ ಕೂಡ ಹಾಗೆಯೇ ಪಾತ್ರವಹಿಸಿದ್ದರು.  ಮದುವೆಯ ಪೂರ್ವ, ಮದುವೆ ಮತ್ತು ನಂತರದ ಮದುವೆಗಳಿಗೆ ಫೋಟೋಶೂಟ್‌ಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ ಬೇರೆ ಬೇರೆ ಬಟ್ಟೆ ಧರಿಸಿ, ಹೊರ ದೇಶಗಳಿಗೆ ಹೋಗಿ ಅಥವಾ ಬೇರೆ ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ತಮಗೆ ಇಷ್ಟ ಬಂದಂತೆ ಫೋಟೋಶೂಟ್ ಮಾಡುತ್ತಾರೆ. ಆ ಮೂಲಕ ರೈಲ್ವೇ ಹಳಿ ಮೇಲೆ ವಿಭಿನ್ನವಾಗಿ ಫೋಟೋಶೂಟ್ ಮಾಡಲು ಯತ್ನಿಸಿದ ಯುವ ಜೋಡಿ ಇದೀಗ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನು ಓದಿ : ದಿನನಿತ್ಯ ಬಳಕೆಯ ಸಾಸಿವೆಯಿಂದಾಗುವ ಪ್ರಯೋಜನಗಳೇನು ಗೊತ್ತಾ ?!! ತಿಳಿಯಿರಿ

ರಾಜಸ್ಥಾನದ ಪಾಲಿ ಮೂಲದ ನವ ವಿವಾಹಿತ ಜೋಡಿ ಕೊರ್ಮಗಟ್ ರೈಲ್ವೆ ಸೇತುವೆ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿದ್ದರು. ಆಗ ಅನಿರೀಕ್ಷಿತವಾಗಿ ಆ ಹಳಿ ಮೇಲೆ ರೈಲು ಬಂದಿದೆ. ಏನು ಮಾಡಬೇಕೆಂದು ತಿಳಿಯದೆ ದಂಪತಿ 90 ಅಡಿ ರೈಲ್ವೆ ಸೇತುವೆಯಿಂದ ಜಿಗಿದಿದ್ದಾರೆ.

ಸಾರ್ವಜನಿಕರು ಗಂಭೀರವಾಗಿ ಗಾಯಗೊಂಡವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅದರಲ್ಲೂ ಪತಿಯ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : ರಶ್ಮಿಕಾ, ಶ್ರೀಲೀಲಾ ಬೆನ್ನಲ್ಲೇ ಬಾಲಿವುಡ್’ಗೆ ಕನ್ನಡದ ಖ್ಯಾತ ನಿರ್ಮಾಪಕಿ ಎಂಟ್ರಿ… ಯಾರು ಆ ಬ್ಯೂಟಿ

ಈ ಘಟನೆಯ ವಿಡಿಯೋ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ರೈಲು ಬರುತ್ತಿರುವುದನ್ನು ಕಂಡ ದಂಪತಿ ಸೇತುವೆ ಮೇಲಿಂದ ಜಿಗಿದ ಆಘಾತಕಾರಿ ದೃಶ್ಯಗಳು ಗಮನ ಸೆಳೆಯುತ್ತಿವೆ. ಅಪಘಾತ ಸಂಭವಿಸಿದ ಕೊರ್ಮಗಟ್ ರೈಲ್ವೆ ಸೇತುವೆಯು ಜನರಲ್ಲಿ ಫೋಟೋಶೂಟ್ ಮಾಡಲು ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ ಮತ್ತು ಇದು ಅಪಾಯಗಳಿಂದ ತುಂಬಿದೆ ಎಂದು ಜನರು ಹೇಳುತ್ತಾರೆ. ಅಲ್ಲದೆ ಮುಂದೆ ಇಂತಹ ಅವಘಡಗಳು ನಡೆಯದಂತೆ ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More