Home> India
Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿಯ ಗತ್ತು.. ಗಮ್ಮತ್ತು.. ನೆಟ್ಟಿಗರ ಮನಗೆದ್ದ ಟೈಗರ್ ವಿಡಿಯೋ

Viral Video: ಐಎಫ್ ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಈ ವಿಡಿಯೋ ಇಂಟರ್ನೆಟ್‌ ಬಳಕೆದಾರರ ಗಮನ ಸೆಳೆದಿದೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿಯ ಗತ್ತು.. ಗಮ್ಮತ್ತು.. ನೆಟ್ಟಿಗರ ಮನಗೆದ್ದ ಟೈಗರ್ ವಿಡಿಯೋ

ಹುಲಿಯೊಂದು  ರಾಷ್ಟ್ರೀಯ ಹೆದ್ದಾರಿಯಲ್ಲಿ (National highway) ಅಡ್ಡಾಡುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಗಮನ ಸೆಳೆದಿದೆ, ಅನೇಕ ಬಳಕೆದಾರರನ್ನು ವಿಸ್ಮಯಗೊಳಿಸಿದೆ.

15 ಸೆಕೆಂಡ್‌ಗಳ ಕಿರು ಕ್ಲಿಪ್‌ನಲ್ಲಿ, ಹುಲಿ (Tiger) ಕಾಡಿನೊಳಗೆ ನಾಜೂಕಾಗಿ ಹೋಗುವುದನ್ನು ಕಾಣಬಹುದು. ಐಎಫ್ ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಕ್ಲಿಪ್ ನೆತ್ತಿಗರನ್ನು ಬೆರಗುಗೊಳಿಸಿದೆ.

 

 

ಈ ಕ್ಷಣವನ್ನು ಛಾಯಾಗ್ರಾಹಕ ರಾಜ್ ಮೋಹನ್ ಸೆರೆಹಿಡಿದಿದ್ದಾರೆ. ಛಾಯಾಗ್ರಾಹಕ ರಾಜ್ ಮೋಹನ್ ಅವರು ತಮಿಳುನಾಡಿನಲ್ಲಿ ಸೆರೆ ಹಿಡಿಯ ಈ ವಿಡಿಯೋವನ್ನು (Viral Video) ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅತಿಯಾಗಿ ಆಕಳಿಕೆ ಬರುತ್ತಿದ್ದರೆ ಹುಷಾರಾಗಿರಿ.. ಇದು ಈ ಅಪಾಯಗಳ ಬಗ್ಗೆ ಹೇಳುತ್ತಿದೆ

ಐಎಫ್‌ಎಸ್ ಅಧಿಕಾರಿ ಇದನ್ನು ಹಂಚಿಕೊಂಡ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, 38,000 ವೀಕ್ಷಣೆಗಳನ್ನು ದಾಖಲಿಸಲಾಗಿದೆ. ಟ್ವಿಟ್ಟರ್ ಬಳಕೆದಾರರು ಹಲವಾರು ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.

ವಿಶ್ವದ ಶೇ.70ರಷ್ಟು ಹುಲಿಗಳು ಭಾರತದಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More