Home> India
Advertisement

ಭಾರತಾದ್ಯಂತ 600 ಕೈದಿಗಳ ಬಿಡುಗಡೆ: ಗೃಹ ಸಚಿವಾಲಯ

ತಿಹಾರ್ ಜೈಲಿನಿಂದ ಈಗಾಗಲೇ 5 ಖೈದಿಗಳನ್ನು ಹೆಸರಿಸಲಾಗಿದ್ದರೂ, ಮೂವರನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. 

ಭಾರತಾದ್ಯಂತ 600 ಕೈದಿಗಳ ಬಿಡುಗಡೆ: ಗೃಹ ಸಚಿವಾಲಯ

ನವದೆಹಲಿ: ಗಾಂಧಿ ಜಯಂತಿ ಅಂಗವಾಗಿ ದೇಶಾದ್ಯಂತ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಪ್ರಕರಣಗಳಡಿಯಲ್ಲಿ ಶಿಕ್ಷೆಗೊಳಗಾಗದ ಸುಮಾರು 600 ಕೈದಿಗಳನ್ನು ವಿಶೇಷ ಯೋಜನೆಯಡಿ ಜೈಲುಗಳಿಂದ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಆದರೆ, ಮಹಾರಾಷ್ಟ್ರ ಮತ್ತು ಹರಿಯಾಣ ಜೈಲುಗಳಿಂದ ಆಯ್ಕೆಯಾದ ಸುಮಾರು 80 ಅಪರಾಧಿಗಳು ಅವರ ಬಿಡುಗಡೆಗಾಗಿ ಮತ್ತಷ್ಟು ದಿನ ಕಾಯಬೇಕಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಘೋಷಣೆ ಮತ್ತು ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತಿರುವುದರಿಂದ, ಚುನಾವಣೆ ಮುಗಿಯುವವರೆಗೂ ಅವರ ಬಿಡುಗಡೆ ದಿನಾಂಕವನ್ನು ತಡೆಹಿಡಿಯಲಾಗಿದೆ.

"ತಿಹಾರ್ ಜೈಲಿನಿಂದ ಈಗಾಗಲೇ 5 ಖೈದಿಗಳನ್ನು ಹೆಸರಿಸಲಾಗಿದ್ದರೂ, ಮೂವರನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಇಬ್ಬರು ಕೈದಿಗಳು ಕ್ರಮವಾಗಿ 1 ಲಕ್ಷ ಮತ್ತು 50,000 ರೂ.ಗಳ ದಂಡವನ್ನು ಪಾವತಿಸಬೇಕಾಗಿದೆ" ಎಂದು ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯಲ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

Read More