Home> India
Advertisement

5 ಮನೆ, ಹೋಮ್ ಥಿಯೇಟರ್, ಸ್ವಿಮ್ಮಿಂಗ್ ಪೂಲ್ & ಲಕ್ಷುರಿ ಕಾರು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳಿಗೆ ಶಾಕ್!

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ್ ಪಾಲ್‍ಗೆ ಸೇರಿದ 10,000 ಚದರ ಅಡಿಯ ಬಂಗಲೆಯಲ್ಲಿ ಹೋಮ್ ಥಿಯೇಟರ್, ಈಜುಕೊಳ ಸೇರಿದಂತೆ ಎಲ್ಲಾ ಐಷಾರಾಮಿ ಸೌಕರ್ಯಗಳಿವೆ.  

5 ಮನೆ, ಹೋಮ್ ಥಿಯೇಟರ್, ಸ್ವಿಮ್ಮಿಂಗ್ ಪೂಲ್ & ಲಕ್ಷುರಿ ಕಾರು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳಿಗೆ ಶಾಕ್!

ಭೋಪಾಲ್​: ಮಧ್ಯಪ್ರದೇಶದ ಸರ್ಕಾರಿ ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು)ದ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗಿದ್ದು, ಸರ್ಕಾರಿ ಅಧಿಕಾರಿಯ ಮನೆ ನೋಡಿ ಅಧಿಕಾರಿಗಳೇ ಸುಸ್ತಾಗಿದ್ದಾರೆ.

5​​ ಸ್ಟಾರ್​ ಹೋಟೆಲ್​ಗೂ ಕಡಿಮೆಯಿಲ್ಲ!

ಈ ಸರ್ಕಾರಿ ಅಧಿಕಾರಿಯ ಮನೆ ಯಾವುದೇ 5​​ ಸ್ಟಾರ್​ ಹೋಟೆಲ್​ಗೂ ಕಡಿಮೆಯಿಲ್ಲ. ಈತನ ಐಷಾರಾಮಿ ನಿವಾಸದಲ್ಲಿ ಈಜುಕೊಳ, ದೊಡ್ಡ ಸ್ನಾನದ ತೊಟ್ಟಿ, ಮಿನಿ ಬಾರ್​ ಮತ್ತು ಹೋಮ್​​ ಥಿಯೇಟರ್​ ಸೇರಿ ಲಕ್ಷುರಿ ಹೋಟೆಲ್​ನಲ್ಲಿರುವ ಎಲ್ಲ ಸೌಲಭ್ಯಗಳು ಇವೆ.

ಇದನ್ನೂ ಓದಿ: Video: ಮೃಗಗಳಂತೆ ವರ್ತಿಸಿದ ಮನುಷ್ಯ, ಬಾಲ-ಕಾಲ ಹಿಡಿದೆಳೆದು ಚಿರತೆಯ ಪ್ರಾಣವನ್ನೇ ಹೀರಿದ ಕ್ರೂರಿ

ಮಧ್ಯಪ್ರದೇಶದ ಪಟಿಯಾಲದಲ್ಲಿ ಆರ್​ಟಿಒ ಅಧಿಕಾರಿ ಸಂತೋಷ್​ ಪೌಲ್​ ಸೇರಿದ 10,000 ಚದರ ಅಡಿ ಐಷಾರಾಮಿ ಬಂಗಲೆ ನೋಡಿ ಸ್ವತಃ ದಾಳಿ ನಡೆಸಲು ಬಂದಿದ್ದ ಅಧಿಕಾರಿಗಳು ಬೆಸ್ತುಬಿದ್ದಿದ್ದಾರೆ. ಸಂತೋಷ್ ಪೌಲ್ ಲಂಚದ ರೂಪದಲ್ಲಿ ಕೋಟ್ಯಂತರ ರೂ. ಗಳಿಸಿದ್ದಾನೆ. ಅಕ್ರಮ ಆಸ್ತಿ ಸಂಪದಾನೆ ಆರೋಪ ಹಿನ್ನೆಲೆ ಈತನ ಜಬಲ್ಪುರದ ಮನೆ ಮೇಲೆ ದಾಳಿ ನಡೆಸಿದಾಗ ಸರ್ಕಾರಿ ಅಧಿಕಾರಿಯ ಕರ್ಮಕಾಂಡ ಬಯಲಾಗಿದೆ. ಮನೆಯಲ್ಲಿರುವ ಐಷಾರಾಮಿ ಸೌಲಭ್ಯಗಳಿಗೆ ಸಾಕ್ಷಿಯಾಗಿ ದಾಳಿಯ ವೇಳೆ ಸೆರೆಹಿಡಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ. ಈ ಭ್ರಷ್ಟನ ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 5 ಮನೆಗಳಿರುವುದು ಪತ್ತೆಯಾಗಿದ.

EOW ಅಧಿಕಾರಿಗಳ ದಾಳಿಯ ವೇಳೆ 15 ಲಕ್ಷ ರೂ. ನಗದು, ದುಬಾರಿ ಚಿನ್ನಾಭರಣ, ಲಕ್ಷುರಿ ಕಾರುಗಳು, ಮನೆಗಳು ಮತ್ತು ಫಾರ್ಮ್​ ಹೌಸ್​ಗಳು ಪತ್ತೆಯಾಗಿವೆ. ಅಧಿಕಾರಿ ಸಂತೋಷ್​ ಪೌಲ್​​ ಪತ್ನಿ ರೇಖಾ ಕೂಡ ಸರ್ಕಾರಿ ಉದ್ಯೋಗಿಯಾಗಿದ್ದು, ಗಂಡನ ಕಚೇರಿಯಲ್ಲೇ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದಾಳೆಂದು ತಿಳಿದುಬಂದಿದೆ.

ಇದನ್ನೂ ಓದಿ: Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್‌?

ಪ್ರಾಥಮಿಕ ತನಿಖೆಯ ಪ್ರಕಾರ ಈ ದಂಪತಿಯ ಆದಾಯದ ಮೂಲಗಳಿಗೆ ಹೋಲಿಸಿದರೆ ಶೇ.650ರಷ್ಟು ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಇದೆಲ್ಲವೂ ಆಕ್ರಮ ಆಸ್ತಿ ಎಂದು ತಿಳಿದುಬಂದಿದೆ. ಸದ್ಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More