Home> India
Advertisement

ಛತ್ತೀಸ್ ಗಡ್: ನಕ್ಸಲರ ಅಟ್ಟಹಾಸಕ್ಕೆ ನಾಲ್ವರು ಬಿಎಸ್ಎಫ್ ಸೈನಿಕರು ಬಲಿ

ನಕ್ಸಲರು ಮತ್ತೆ ಅಟ್ಟಹಾಸವನ್ನು ಮೆರೆದಿದ್ದು, ಈಗ ಛತ್ತೀಸ್ ಗಡ್ ದಲ್ಲಿ ಎನ್ ಕೌಂಟರ್ ದಾಳಿಯಲ್ಲಿ ನಾಲ್ವರು ಬಿಎಸ್ಎಫ್ ಸೈನಿಕರು ಹತ್ಯೆಯಾಗಿದ್ದಾರೆ,ಇಬ್ಬರು ಗಾಯಗೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಛತ್ತೀಸ್ ಗಡ್: ನಕ್ಸಲರ ಅಟ್ಟಹಾಸಕ್ಕೆ ನಾಲ್ವರು ಬಿಎಸ್ಎಫ್ ಸೈನಿಕರು ಬಲಿ

ನವದೆಹಲಿ: ನಕ್ಸಲರು ಮತ್ತೆ ಅಟ್ಟಹಾಸವನ್ನು ಮೆರೆದಿದ್ದು, ಈಗ ಛತ್ತೀಸ್ ಗಡ್ ದಲ್ಲಿ ಎನ್ ಕೌಂಟರ್ ದಾಳಿಯಲ್ಲಿ ನಾಲ್ವರು ಬಿಎಸ್ಎಫ್ ಸೈನಿಕರು ಹತ್ಯೆಯಾಗಿದ್ದಾರೆ, ಅಲ್ಲದೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಗುರುವಾರದಂದು ನಕ್ಸಲರು ಹಾಗೂ ಬಿಎಸ್ಎಫ್ ಸೈನಿಕರ ನಡುವೆ ಛತ್ತೀಸ್ ಗಡ್ ದಲ್ಲಿರುವ ಕಾಂಕೆರ್ ಜಿಲ್ಲೆಯಲ್ಲಿ ಎನ್ಕೌಂಟರ್ ದಾಳಿ ನಡೆದ ವರದಿಯಾಗಿದೆ.

ನಕ್ಸಲ ಕಾರ್ಯಾಚರಣೆ ಆಪರೇಶನ್ ಡಿಐಜಿಪಿ ಪಿ.ಸುಂದರ್ ರಾಜ್ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ" ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಎನ್ ಕೌಂಟರ್ ದಾಳಿಯಲ್ಲಿ ಬಿಎಸ್ಎಫ್ 114 ಬಟಾಲಿಯನ್ ನ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ, ಜೊತೆಗೆ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಈ ಘಟನೆಯ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
 

Read More