Home> India
Advertisement

ದಲಿತ ಕುಟುಂಬದ 16 ಮಂದಿಗೆ ಗೃಹಬಂಧನ-ಚಿತ್ರಹಿಂಸೆ: ಗರ್ಭದಲ್ಲಿಯೇ ಕಂದನನ್ನು ಕಳೆದುಕೊಂಡ ತಾಯಿಯ ಕಣ್ಣೀರು

ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಜಗದೀಶ ಗೌಡ ಮತ್ತು ಅವರ ಪುತ್ರ ತಿಲಕ್ ಗೌಡ ಮೇಲೆ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ಪರಾರಿಯಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

 ದಲಿತ ಕುಟುಂಬದ 16 ಮಂದಿಗೆ ಗೃಹಬಂಧನ-ಚಿತ್ರಹಿಂಸೆ: ಗರ್ಭದಲ್ಲಿಯೇ ಕಂದನನ್ನು ಕಳೆದುಕೊಂಡ ತಾಯಿಯ ಕಣ್ಣೀರು

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಬೆಂಬಲಿಗ ಜಗದೀಶ ಗೌಡ ಎಂಬಾತ ತಮ್ಮ ಕಾಫಿ ತೋಟದಲ್ಲಿ 16 ದಲಿತ ಜನರನ್ನು ಬಂಧನದಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ತಮಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಅದರಲ್ಲಿ ಗರ್ಭಿಣಿಯೊಬ್ಬರಿದ್ದು, ಆಕೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಜಗದೀಶ ಗೌಡ ಮತ್ತು ಅವರ ಪುತ್ರ ತಿಲಕ್ ಗೌಡ ಮೇಲೆ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ಪರಾರಿಯಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಇದನ್ನೂ ಓದಿ:  ಸಾನ್ಯಾ ಇರೋವರೆಗೂ ಬಿಗ್‌ಬಾಸ್‌ಗೆ ಸೋಲಿಲ್ಲ : ದೊಡ್ಮನೆ ಸೆಂಟರ್‌ ಅಟ್ರ್ಯಾಕ್ಷನ್‌ ಈ ಬೇಬಿ ಡಾಲ್

ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ಪಕ್ಷದ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್, “ಬಿಜೆಪಿಗೂ ಆತನಿಗೂ ಯಾವುದೇ ಸಂಬಂಧವಿಲ್ಲ.ಜಗದೀಶ್ ಪಕ್ಷದ ಕಾರ್ಯಕರ್ತನೂ ಅಲ್ಲ, ಸದಸ್ಯನೂ ಅಲ್ಲ. ಕೇವಲ ಬಿಜೆಪಿ ಬೆಂಬಲಿಗರು" ಎಂದು ಹೇಳಿದರು.

ಸಂತ್ರಸ್ತರು ಜೇನುಗದ್ದೆ ಗ್ರಾಮದ ಕಾಫಿ ತೋಟದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಮಾಲೀಕರಿಂದ 9 ಲಕ್ಷ ಸಾಲ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಾಲವನ್ನು ಮರುಪಾವತಿಸಲು ವಿಫಲವಾದಾಗ ಅವರನ್ನು ಗೃಹ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಿದ್ದಾನೆ ಎಂದು ತಿಳಿದುಬಂದಿದೆ.  

“ಜಗದೀಶ್ ಗೌಡ ತಮ್ಮ ಸಂಬಂಧಿಕರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಕ್ಟೋಬರ್ 8 ರಂದು ಕೆಲವರು ಬಾಳೆಹೊನ್ನೂರು ಠಾಣೆಗೆ ಆಗಮಿಸಿ ದೂರು ನೀಡಿದ್ದರು. ಆದರೆ ಅದೇ ದಿನ ದೂರನ್ನು ಮತ್ತೆ ಹಿಂಪಡೆದಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಮರುದಿನ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಗೆ ಹೊಸದಾಗಿ ದೂರು ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದಾಗ 8-10 ಜನರನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕಿರುವುದು ಬೆಳಕಿಗೆ ಬಂದಿದೆ. ಆ ಬಳಿಕ ಪೊಲೀಸರು ಮಾಲೀಕರನ್ನು ವಿಚಾರಣೆಗೊಳಪಡಿಸಿದ ನಂತರ ಬಿಡುಗಡೆಗೊಳಿಸಲಾಯಿತು.

"ಕಳೆದ 15 ದಿನಗಳಿಂದ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ನಾಲ್ಕು ಕುಟುಂಬಗಳಲ್ಲಿ 16 ಸದಸ್ಯರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ದೂರುದಾರರ ಪ್ರಕಾರ, ಎಲ್ಲಾ 16 ಮಂದಿಯನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು" ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: Too Hot to Handle: ಜಾಳಿಗೆ ಬ್ಲೌಸ್ ಧರಿಸಿ ಪಡ್ಡೆಗಳ ನಿದ್ದೆಗೆ ಬೆಂಕಿ ಇಟ್ಟ ನೋರಾ.. ಫೋಟೋ ನೋಡಿ

"ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ನನ್ನನ್ನು ಥಳಿಸಲಾಯಿತು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಅವರು ನನ್ನ ಫೋನ್ ಅನ್ನು ವಶಪಡಿಸಿಕೊಂಡರು" ಎಂದು ಮಗುವನ್ನು ಕಳೆದುಕೊಂಡ ಅರ್ಪಿತಾ ಕಣ್ಣೀರು ಸುರಿಸಿದರು ಹೇಳಿದರು.

 

 

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More