Home> India
Advertisement

Chandrayaan-3: 14ನೇ ಜುಲೈ 2023 ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಉಳಿಯಲಿದೆ- ಪ್ರಧಾನಿ ಮೋದಿ

Chandrayaan-3 Launch: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14ನೇ ಜುಲೈ 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

Chandrayaan-3: 14ನೇ ಜುಲೈ 2023 ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಉಳಿಯಲಿದೆ- ಪ್ರಧಾನಿ ಮೋದಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ(ISRO) ಮಹತ್ವಾಕಾಂಕ್ಷೆಯ 3ನೇ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ-3 ಉಡಾವಣೆಗೆ ಕೆಲವು ಗಂಟೆಗಳ ಮೊದಲು ಪ್ರಧಾನಿ ಮೋದಿಯವರು ಇಸ್ರೋ ವಿಜ್ಞಾನಿಗಳಿಗೆ ‘ಆಲ್ ದಿ ಬೆಸ್ಟ್’ ಹೇಳಿ ಟ್ವೀಟ್ ಮಾಡಿದ್ದಾರೆ.

‘ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14ನೇ ಜುಲೈ 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಚಂದ್ರಯಾನ-3 ನಮ್ಮ 3ನೇ ಚಂದ್ರಯಾನ, ಅದರ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ’ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Odisha Train Mishap: ಬಾಲಾಸೊರ್ ರೈಲು ದುರಂತ ಪ್ರಕರಣ, ರೇಲ್ವೆ ವಿಭಾಗದ 7 ಜನ ಸಿಬ್ಬಂದಿ ಅಮಾನತು

ತಮ್ಮ ಮತ್ತೊಂದು ಟ್ವೀಟ್‍ನಲ್ಲಿ ಚಂದ್ರಯಾನ-3ರ ಕೆಲವು ತಾಂತ್ರಿಕ ವಿವರಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ‘ಕಕ್ಷೆ ಏರಿಸುವ ಕುಶಲತೆಯ ನಂತರ ಚಂದ್ರಯಾನ-3 ಅನ್ನು ಚಂದ್ರನ ವರ್ಗಾವಣೆ ಪಥಕ್ಕೆ ಸೇರಿಸಲಾಗುತ್ತದೆ. 300,000 ಕಿ.ಮೀ.ಗೂ ಹೆಚ್ಚು ಕ್ರಮಿಸುವ ಇದು ಮುಂಬರುವ ವಾರಗಳಲ್ಲಿ ಚಂದ್ರನನ್ನು ತಲುಪಲಿದೆ. ಆನ್‌ಬೋರ್ಡ್‌ನಲ್ಲಿರುವ ವೈಜ್ಞಾನಿಕ ಉಪಕರಣಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುತ್ತದೆ ಮತ್ತು ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾರೆ.

‘ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಚಂದ್ರಯಾನ-1 ಅನ್ನು ಜಾಗತಿಕ ಚಂದ್ರನ ಕಾರ್ಯಾಚರಣೆಗಳಲ್ಲಿ ಪಥ್ ಬ್ರೇಕರ್ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಚಂದ್ರನ ಮೇಲೆ ನೀರಿನ ಅಣುಗಳ ಉಪಸ್ಥಿತಿಯನ್ನು ದೃಢಪಡಿಸಿದೆ. ಇದು ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳಲ್ಲಿ ಕಾಣಿಸಿಕೊಂಡಿದೆ’ ಎಂದು ಪ್ರಧಾನಿ ಮೋದಿ ಮತ್ತೊಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿನ ಹಿಂದಿದೆ 54 ನಾರಿಯರ ಶಕ್ತಿ: ದೇಶದ ಕನಸು ನನಸಾಗಿದ ಮಹಿಳೆಯರು ಇವರೇ…

ಚಂದ್ರಯಾನ-1ರವರೆಗೆ ಚಂದ್ರನು bone-dry, ಭೂವೈಜ್ಞಾನಿಕವಾಗಿ ನಿಷ್ಕ್ರಿಯ ಮತ್ತು ವಾಸಯೋಗ್ಯವಲ್ಲದ ಆಕಾಶಕಾಯ ಎಂದು ನಂಬಲಾಗಿತ್ತು. ಈಗ ಇದು ನೀರು ಮತ್ತು ಉಪ-ಮೇಲ್ಮೈ ಮಂಜುಗಡ್ಡೆಯ ಉಪಸ್ಥಿತಿಯೊಂದಿಗೆ ಕ್ರಿಯಾತ್ಮಕ ಮತ್ತು ಭೌಗೋಳಿಕವಾಗಿ ಸಕ್ರಿಯವಾಗಿರುವ ದೇಹವಾಗಿ ಕಂಡುಬರುತ್ತದೆ. ಬಹುಶಃ ಭವಿಷ್ಯದಲ್ಲಿ ಇಲ್ಲಿ ಸಂಭಾವ್ಯವಾಗಿ ವಾಸಿಸಬಹುದು!’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More