Home> India
Advertisement

ಕಾನ್ಪುರದ ಸಮೀಪ ಹಳಿತಪ್ಪಿದ ಪೂರ್ವಾ ಎಕ್ಸ್ಪ್ರೆಸ್ 12 ಬೋಗಿಗಳು, ಹಲವರಿಗೆ ಗಾಯ

ಪ್ರಯಾಗ್ ನಿಂದ ನವದೆಹಲಿಗೆ ಸಾಗುತ್ತಿದ್ದ ರೈಲು ರಾತ್ರಿ 12.54ರ ಸುಮಾರಿಗೆ ಕಾನ್ಪುರದ ಸಮೀಪ ಹಳಿತಪ್ಪಿದೆ.

ಕಾನ್ಪುರದ ಸಮೀಪ ಹಳಿತಪ್ಪಿದ ಪೂರ್ವಾ ಎಕ್ಸ್ಪ್ರೆಸ್ 12 ಬೋಗಿಗಳು, ಹಲವರಿಗೆ ಗಾಯ

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿರುವ ರೂಮಾ ರೈಲ್ವೆ ನಿಲ್ದಾಣದ ಸಮೀಪ ಪೂರ್ವಾ ಎಕ್ಸ್ಪ್ರೆಸ್ (12303) ನ 12 ಬೋಗಿಗಳು ಹಳಿತಪ್ಪಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಹೌರಾ ಮತ್ತು ಹೊಸದಿಲ್ಲಿ ನಡುವೆ ಸಂಚಾರ ನಡೆಸುವ ಈ ರೈಲು ಪ್ರಯಾಗ್ ನಿಂದ ನವದೆಹಲಿಗೆ ಸಾಗುತ್ತಿದ್ದ ವೇಳೆ ರಾತ್ರಿ 12.54ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಅಪಘಾತದ ಸಮಯದಲ್ಲಿ, ರೈಲು ವೇಗವು ಗಂಟೆಗೆ 100 ಕಿಲೋಮೀಟರ್ ಇತ್ತು. ಕಂಪ್ಲಿಂಗ್ ಮುರಿದಿದ್ದ ಚಲಿಸುತ್ತಿದ್ದ ರೈಲಿನ ಇಂಜಿನ್ ಹಾಗೂ ಮುಂದಿನ 5 ಬೋಗಿಗಳು ಮುಂದೆ ಸಾಗಿ 12 ಬೋಗಿಗಳು ಸಂಪರ್ಕ ಕಳೆದುಕೊಂಡವು ಎಂದು ಹೇಳಲಾಗಿದೆ. ಈ ಘಟನೆ ಕಾನ್ಪುರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ನಡೆದಿದೆ.

fallbacks

ರೈಲು ಅಪಘಾತದ ಮಾಹಿತಿಯನ್ನು ಸ್ವೀಕರಿಸಿದ ನಂತರ, ಸ್ಥಳೀಯ ಆಡಳಿತ ಮತ್ತು ರೈಲ್ವೆ ಆಡಳಿತವು ತಕ್ಷಣ ಸ್ಥಳಕ್ಕೆ ಧಾವಿಸಿದರವು. ರಕ್ಷಣಾ ಕಾರ್ಯಕ್ಕಾಗಿ ಎನ್ಡಿಆರ್ಎಫ್ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಲಿಲ್ಲ. 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು  ಹತ್ತಿರದ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಸ್ಥಳದಲ್ಲಿ 15-20 ಅಂಬ್ಯುಲನ್ಸ್ಗಳನ್ನು ನಿಯೋಜಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಸಹಾಯವಾಣಿ ಸಂಖ್ಯೆ;
ಈ ರೈಲಿನಲ್ಲಿ ನಿಮ್ಮ ಪರಿಚಿತರಾರಾದರೂ ಪ್ರಯಾಣ ಬೆಳೆಸಿದ್ದಲ್ಲಿ ಅವರ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಗಿ ರೈಲ್ವೇ ಇಲಾಖೆ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಹೆಲ್ಪ್ಲೈನ್ ಸಂಖ್ಯೆ (033) 26402241, 26402242, 26402243, 26413660.
 

Read More