Home> India
Advertisement

2022ರ ವೇಳೆಗೆ ಪಿಎಂಎವೈ ಯೋಜನೆಯಡಿ 1.95 ಕೋಟಿ ಮನೆಗಳ ವಿತರಣೆ: ಸೀತಾರಾಮನ್

ನಮ್ಮ ಸರ್ಕಾರ ಯಾವುದೇ ಕಾರ್ಯವನ್ನು ಕೈಗೊಂಡರೂ ಅದರಲ್ಲಿ ಗ್ರಾಮೀಣ ಜನತೆ, ಬಡವರು ಮತ್ತು ರೈತರನ್ನು ಹೆಚ್ಚು ಕೆಂದ್ರೀಕರಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2022ರ ವೇಳೆಗೆ ಪಿಎಂಎವೈ ಯೋಜನೆಯಡಿ 1.95 ಕೋಟಿ ಮನೆಗಳ ವಿತರಣೆ: ಸೀತಾರಾಮನ್

ನವದೆಹಲಿ: 2019-20 ರಿಂದ 2021-22ರ ಅವಧಿಯಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ 1.95 ಕೋಟಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. 

ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2019-20 ಅನ್ನು ಮಂಡಿಸುತ್ತಾ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಯೋಜನೆಯಡಿ 2015-16ರಲ್ಲಿ 314 ದಿನಗಳಿದ್ದ ಮನೆಗಳನ್ನು ಪೂರ್ಣಗೊಳಿಸುವ ಸಮಯವನ್ನು 2017-18ರಲ್ಲಿ 114 ಕ್ಕೆ ಇಳಿಸಲಾಗಿದೆ. ಇದು ಮೋದಿ ಸರ್ಕಾರದ ಸಾಧನೆಯಾಗಿದೆ ಎಂದು ಹೇಳಿದರು.

ಮುಂದುವರೆದು "ನಮ್ಮ ಸರ್ಕಾರ ಯಾವುದೇ ಕಾರ್ಯವನ್ನು ಕೈಗೊಂಡರೂ ಅದರಲ್ಲಿ ಗ್ರಾಮೀಣ ಜನತೆ, ಬಡವರು ಮತ್ತು ರೈತರನ್ನು ಹೆಚ್ಚು ಕೆಂದ್ರೀಕರಿಸಲಾಗುತ್ತದೆ. 2022 ರ ಹೊತ್ತಿಗೆ, ವಿದ್ಯುತ್ ಮತ್ತು ಅನಿಲ ಸಂಪರ್ಕ ಪಡೆಯಲು ಇಚ್ಚಿಸದ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ವಿದ್ಯುತ್ ಮತ್ತು ಶುದ್ಧ ಅಡುಗೆ ಸೌಲಭ್ಯ ಲಭ್ಯವಾಗಲಿದೆ"ಎಂದು ಸೀತಾರಾಮನ್ ಹೇಳಿದರು.

"ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣದ ಎರಡನೇ ಹಂತದಲ್ಲಿ 2019-20 ರಿಂದ 2021-22ರ ಅವಧಿಯಲ್ಲಿ 1.95 ಕೋಟಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುವುದು. ಅವರಿಗೆ ಎಲ್ಪಿಜಿ, ವಿದ್ಯುತ್ ಮತ್ತು ಶೌಚಾಲಯಗಳಂತಹ ಸೌಲಭ್ಯಗಳನ್ನೂ ಒದಗಿಸಲಾಗುವುದು" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. 
 

Read More