Home> Health
Advertisement

Womens Health Tips : 20 ರಿಂದ 35 ನೇ ವಯಸ್ಸಿನಲ್ಲಿ ಮಹಿಳೆಯರು ಈ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಾರೆ!

ಪ್ರೌಢವ್ಯಸ್ಥೆಯಲ್ಲಿ ಮಹಿಳೆಯರ ದೇಹವು ತುಂಬಾ ಆರೋಗ್ಯಕರವಾಗಿರುತ್ತದೆ ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂದು ಆಗಾಗ್ಗೆ ಮಹಿಳೆಯರು ಭಾವಿಸುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಬೊಜ್ಜು ಮತ್ತು ಕಳಪೆ ಜೀವನಶೈಲಿಯಿಂದಾಗಿ, 20 ರಿಂದ 35 ನೇ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದಂತೆ ಬಾಧಿಸುವ ಗಂಭೀರ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Womens Health Tips : 20 ರಿಂದ 35 ನೇ ವಯಸ್ಸಿನಲ್ಲಿ ಮಹಿಳೆಯರು ಈ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಾರೆ!

ಪ್ರೌಢವ್ಯಸ್ಥೆಯಲ್ಲಿ ಮಹಿಳೆಯರ ದೇಹವು ತುಂಬಾ ಆರೋಗ್ಯಕರವಾಗಿರುತ್ತದೆ ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂದು ಆಗಾಗ್ಗೆ ಮಹಿಳೆಯರು ಭಾವಿಸುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಬೊಜ್ಜು ಮತ್ತು ಕಳಪೆ ಜೀವನಶೈಲಿಯಿಂದಾಗಿ, 20 ರಿಂದ 35 ನೇ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದಂತೆ ಬಾಧಿಸುವ ಗಂಭೀರ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಹಿಳೆಯರು ಎದುರಿಸುತ್ತಿರುವ ಇಂತಹ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾನ್ಸ್ ಹಾಪ್‌ಕಿನ್ಸ್ ಅವರ ವರದಿಯಲ್ಲಿ ತಿಳಿಸಲಾಗಿದೆ.

20 ರಿಂದ 35 ನೇ ವಯಸ್ಸಿನ ಮಹಿಳೆಯರಲ್ಲಿ ಮಾರಕ ರೋಗ:

ಕಿರಿಯ ವಯಸ್ಸಿನ ಮಹಿಳೆಯರಲ್ಲಿ(womens) ಕೆಲವು ಹಳೆಯ ಆರೋಗ್ಯ ಸಮಸ್ಯೆಗಳು ಸಹ ಕಂಡುಬರುತ್ತಿವೆ ಎಂದು ದಿ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಿಕ್ಕಾರೋನ್ ಸೆಂಟರ್ ಫಾರ್ ದಿ ಪ್ರಿವೆನ್ಷನ್ ಆಫ್ ಹಾರ್ಟ್ ಡಿಸೀಸ್‌ನ ಸಹಾಯಕ ನಿರ್ದೇಶಕ ಎರಿನ್ ಮೈಕೋಸ್ ಹೇಳಿದ್ದಾರೆ. ಆದರೆ ಒಳ್ಳೆಯ ಸುದ್ದಿ ಎಂದರೆ ಅವುಗಳನ್ನು ತಡೆಯಬಹುದು. ಬನ್ನಿ, ಚಿಕ್ಕ ವಯಸ್ಸಿನಲ್ಲಿಯೇ ಮಹಿಳೆಯರು ಎದುರಿಸುತ್ತಿರುವ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ.

ಇದನ್ನೂ ಓದಿ : Most Common Exercise Mistakes: ಪ್ರತಿದಿನ ವ್ಯಾಯಾಮ ಮಾಡುವಾಗ ಈ ರೀತಿಯ ತಪ್ಪುಗಳಾಗದಂತೆ ನಿಗಾವಹಿಸಿ

1. ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ :

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, 20 ರಿಂದ 34 ವರ್ಷದೊಳಗಿನ ಸುಮಾರು 7 ಪ್ರತಿಶತದಷ್ಟು ಮಹಿಳೆಯರಿಗೆ ಅಧಿಕ ರಕ್ತದೊತ್ತಡ(Blood Pressure)ದ ಸಮಸ್ಯೆ ಇದೆ. ನಿಮ್ಮ ಹೃದಯವು ರಕ್ತವನ್ನು ಪಂಪ್ ಮಾಡಲು ಸಾಕಷ್ಟು ಶಕ್ತಿಯನ್ನು ನೀಡಿದಾಗ, ಅದನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ ಮತ್ತು ಇದು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಇದು ಹೃದಯ, ಮೂತ್ರಪಿಂಡ, ಮೆದುಳು ಮತ್ತು ರಕ್ತ ಅಪಧಮನಿಗಳಿಗೆ ಅಪಾಯಕಾರಿ. ವರದಿಯ ಪ್ರಕಾರ, ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರು ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ, ನಂತರ ಹೃದ್ರೋಗದ ಅಪಾಯವು ತುಂಬಾ ಹೆಚ್ಚಾಗಿರುತ್ತದೆ.

2. ಮಹಿಳೆಯರಲ್ಲಿ ಟೈಪ್ 2 ಡಯಾಬಿಟಿಸ್ :

ವರದಿಯ ಪ್ರಕಾರ, ಟೈಪ್ 2 ಡಯಾಬಿಟಿಸ್(Type 2 Diabetes in Women) ಇದ್ದರು ಅವರಲ್ಲಿ ಯಾವುದೇ ಲಕ್ಷಣಗಳನ್ನು ಕಾಣದಿರಬಹುದು. ಯುವಕರು ಮತ್ತು ಮಕ್ಕಳಲ್ಲಿ ಸ್ಥೂಲಕಾಯ ಪ್ರಕರಣಗಳು ಮೊದಲಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿ ಹೇಳುತ್ತದೆ. ಈ ಕಾರಣದಿಂದಾಗಿ ನೀವು ಗರ್ಭಾವಸ್ಥೆಯಲ್ಲಿ ಮಧುಮೇಹದ ಸಮಸ್ಯೆಯನ್ನು ಸಹ ಹೊಂದಿರಬಹುದು. ಈ ಸಮಸ್ಯೆಯು ಭವಿಷ್ಯದಲ್ಲಿ ಟೈಪ್ 2 ಮಧುಮೇಹವನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : ಊಟ ಮಾಡಿದ ಕೂಡಲೇ ನೀವು ಮಾಡುತ್ತೀರಾ ಈ ತಪ್ಪು ? ಹಾಗಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಿ

3. ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯ :

ಮೈಕೋಸ್ ಪ್ರಕಾರ, ಹೆಚ್ಚಿನ ಪಾರ್ಶ್ವವಾಯು ಪ್ರಕರಣಗಳು 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತವೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, 18 ರಿಂದ 34 ವರ್ಷದ ಮಹಿಳೆಯರಲ್ಲಿ ಪಾರ್ಶ್ವವಾಯು(Strock) ಬರುವ ಅಪಾಯವು ಶೇ. 32 ರಷ್ಟು ಹೆಚ್ಚಾಗಿದೆ. ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಪಾರ್ಶ್ವವಾಯು ಕಡಿಮೆ ಕಂಡುಬರುತ್ತದೆಯಾದರೂ, ಅದು ಮಾರಕ ಕಾಯಿಲೆಯಾದ್ದರಿಂದ ಅಪಾಯ ಹೆಚ್ಚು ಎಂದು ತಿಳಿಸಲಾಗಿದೆ.

4. ಮಹಿಳೆಯರಲ್ಲಿ ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ (ಕೊಲೊರೆಕ್ಟಲ್ ಕ್ಯಾನ್ಸರ್) :

ಮಹಿಳೆಯರಲ್ಲಿ ವಯಸ್ಸಾದಂತೆ ಕೊಲೊರೆಕ್ಟಲ್ ಕ್ಯಾನ್ಸರ್(Colorectal Cancer in Women) ಬರುವ ಅಪಾಯ ಹೆಚ್ಚಾಗುತ್ತದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ನಿಲೋ ಆಜಾದ್ ಹೇಳುತ್ತಾರೆ. ಆದರೆ ಇತ್ತೀಚಿನ ಅಧ್ಯಯನಗಳಲ್ಲಿ, ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿವೆ. ಆದರೆ, ಇದರ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ನಿಮ್ಮ ಮಲದ ಮೂಲಕ ರಕ್ತ ಹೋಗುವುದು ಕಂಡು ಬಂದರೆ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

5. ಮಹಿಳೆಯರಲ್ಲಿ ಮಿದುಳು ಕುಗ್ಗುವಿಕೆ :

ವರದಿಯ ಪ್ರಕಾರ, ಮಹಿಳೆಯರಿಗೆ ವಯಸ್ಸಾದಂತೆ ಮೆದುಳು ಕುಗ್ಗಲು ಪ್ರಾರಂಭಿಸುತ್ತದೆ, ಇದನ್ನು ಮೆದುಳಿನ ಕುಗ್ಗುವಿಕೆ ಎಂದು ಕರೆಯಲಾಗುತ್ತದೆ. ಆದರೆ, ನೀವು ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಮತ್ತು ಧೂಮಪಾನದ ಅಭ್ಯಾಸವನ್ನು ಹೊಂದಿದ್ದರೆ, ನಿಮ್ಮ ಮೆದುಳು ಚಿಕ್ಕ ವಯಸ್ಸಿನಲ್ಲಿಯೇ ಈ ಹಂತವನ್ನು ತಲುಪಬಹುದು. ನಿಮ್ಮ ಜೀವನದ ಆರಂಭಿಕ ಹಂತಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಆ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಮತ್ತು ನಿಮ್ಮ ಮುಂದಿನ ವಯಸ್ಸನ್ನು ನಿರ್ಧರಿಸುತ್ತದೆ.

ಇದನ್ನೂ ಓದಿ : Jaggery and Gram Benefits : ದಿನ ಬೆಲ್ಲ ಮತ್ತು ಕಡಲೆ ಎರಡು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು!

ಮಹಿಳೆಯರಿಗೆ ಆರೋಗ್ಯ ಸಲಹೆಗಳು : 

- ರಕ್ತದೊತ್ತಡವನ್ನು ಪರೀಕ್ಷಿಸುತ್ತಲೇ ಇರಿ.
- ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಿ.
- ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ.
- ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ.
- ಆರೋಗ್ಯಕರ ಆಹಾರವನ್ನು ಸೇವಿಸಿ.
- ತೂಕವನ್ನು ನಿಯಂತ್ರಣದಲ್ಲಿಡಿ.
- ಧೂಮಪಾನ ಮಾಡಬೇಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More