Home> Health
Advertisement

Winter Foods : ಚಳಿಗಾಲದಲ್ಲಿ ಈ 4 ಪದಾರ್ಥಗಳನ್ನು ತಪ್ಪದೆ ಸೇವಿಸಿ : ನಿಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ 

ಈ ಚಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಬೆಚ್ಚನೆಯ ಬಟ್ಟೆಯಷ್ಟೇ ಅಲ್ಲ ಬಿಸಿಯಾದ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು.

Winter Foods : ಚಳಿಗಾಲದಲ್ಲಿ ಈ 4 ಪದಾರ್ಥಗಳನ್ನು ತಪ್ಪದೆ ಸೇವಿಸಿ : ನಿಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ 

ಚಳಿಗಾಲದಲ್ಲಿ ಭಾರಿ ಚಳಿ ಅನುಭವಿಸುತ್ತಿದ್ದರೆ ತಪ್ಪದೆ ಈ ಆಹಾರಗಳನ್ನ ಸೇವಿಸಿ. ಚಳಿಯಿಂದ ಪಾರಾಗಲು ಜನರು ಬೆಂಕಿ ಕಾಯಿಸುವುದು ಮತ್ತು ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು ಮಾಡುತ್ತಾರೆ. ಆದರೆ ಈ ಚಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಬೆಚ್ಚನೆಯ ಬಟ್ಟೆಯಷ್ಟೇ ಅಲ್ಲ ಬಿಸಿಯಾದ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಚಳಿಗಾಲದಲ್ಲಿ(winter season) ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳಲು, ಜನರು ವಿವಿಧ ರೀತಿಯ ಡ್ರೈಫೂಟ್ ಮತ್ತು ಬಿಸಿ ನೀಡುವ ಆಹಾರಗಳ ಮೊರೆ ಹೋಗುತ್ತಾರೆ. ಆದ್ದರಿಂದ, ನೀವು ಬಿಸಿ ಬಿಸಿ ಆಹಾರಗಳ ಜೊತೆ ಕೆಲ ಹಣ್ಣುಗಳು ಮತ್ತು ತರಕಾರಿಗಳನ್ನು ಸಹ ಸೇವಿಸಬಹುದು.

ಇದನ್ನೂ ಓದಿ : Papaya side Effects : ಪಪ್ಪಾಯಿ ಹಣ್ಣು ಸೇವಿಸುವ ಮುನ್ನ ತಿಳಿದಿರಲಿ ಅದರ ಅನಾನುಕೂಲಗಳ ಬಗ್ಗೆ!

ಚಳಿಗಾಲದಲ್ಲಿ ಸೇವಿಸಲೇಬೇಕಾದ ಹಣ್ಣು ಮತ್ತು ತರಕಾರಿಗಳು ಇಲ್ಲಿವೆ ನೋಡಿ

1. ಖರ್ಜೂರ ಸೇವಿಸಿ

ಖರ್ಜೂರಗಳ(Dates) ಸೇವನೆಯು ನಿಮ್ಮ ತುಂಬಾ ಬಿಸಿಯಾಗಿಡುತ್ತದೆ. ಇದರೊಂದಿಗೆ, ಇದರಲ್ಲಿ ಅನೇಕ ಪೋಷಕಾಂಶಗಳಿವೆ, ಇದು ನಿಮ್ಮ ದೇಹಕ್ಕೆ ಉಷ್ಣತೆಯನ್ನು ನೀಡುವುದರ ಜೊತೆಗೆ ಮೂಳೆಗಳನ್ನು ಬಲಪಡಿಸಲು ಮತ್ತು ರಕ್ತದ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

2. ಶುಂಠಿ ಸೇವಿಸಿ

ಅಂದಹಾಗೆ, ಚಳಿಗಾಲದಲ್ಲಿ ಹೆಚ್ಚಿನ ಮನೆಗಳಲ್ಲಿ ಶುಂಠಿ(Ginger)ಯನ್ನು ಚಹಾ ಮತ್ತು ಕಷಾಯ ರೂಪದಲ್ಲಿ ಬಳಸಲಾಗುತ್ತದೆ. ಆದರೆ ನೀವು ಇದನ್ನು ತರಕಾರಿಗಳು, ಸಲಾಡ್‌ಗಳು, ಹಾಲು ಮುಂತಾದವುಗಳಲ್ಲಿ ಸುಲಭವಾಗಿ ಬಳಸಬಹುದು. ಶುಂಠಿಯು ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ದೇಹಕ್ಕೆ ಉಷ್ಣತೆಯನ್ನು ನೀಡುವುದಲ್ಲದೆ, ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಸಹಾಯ ಮಾಡುತ್ತದೆ.

3. ಬೆಳ್ಳುಳ್ಳಿಯನ್ನು ಸೇವಿಸಿ

ಬೆಳ್ಳುಳ್ಳಿಯ ಪರಿಣಾಮವು ತುಂಬಾ ನಿಮ್ಮನ್ನು ಬಿಸಿಯಾಗಿಡುತ್ತದೆ, ಆದ್ದರಿಂದ ಚಳಿಗಾಲದಲ್ಲಿ ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳಲು, ನೀವು ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಬೇಕು. ನೀವು ಬೆಳ್ಳುಳ್ಳಿ(Garlic) ಎಸಳುಗಳನ್ನು ಕತ್ತರಿಸಿ ಆಹಾರದಲ್ಲಿ ಸೇರಿಸಿದರೆ, ಅದು ದೇಹವನ್ನು ಬೆಚ್ಚಗಾಗಲು, ನಿಮ್ಮ ರಕ್ತ ಪರಿಚಲನೆ ಸುಧಾರಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Smart Watch: ದೇಹವನ್ನು ಅನಾರೋಗ್ಯಕ್ಕೆ ಒಳಪಡಿಸುತ್ತಿವೆ ಫಿಟ್‌ನೆಸ್ ಗ್ಯಾಜೆಟ್‌ಗಳು!

4. ಕೆಂಪು ಮೆಣಸಿನಕಾಯಿ ಸೇವಿಸಿ

ಸಂಪೂರ್ಣ ಕೆಂಪು ಮೆಣಸಿನಕಾಯಿಗಳು ತುಂಬಾ ಬಿಸಿಯಾಗಿರುತ್ತದೆ, ಆದ್ದರಿಂದ ಇದು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಾಗಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ರಕ್ತ ಹೆಪ್ಪುಗಟ್ಟುವಿಕೆಯು ಸಂಭವಿಸುವುದನ್ನು ತಡೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More