Home> Health
Advertisement

ನೀವೂ ಕೂಡ ಕೇವಲ ಟೇಸ್ಟ್ ನೋಡಿ ಟೂತ್‌ಪೇಸ್ಟ್ ಖರೀದಿಸುತ್ತೀರಾ?

ಪ್ರತಿ ವ್ಯಕ್ತಿಗೂ ನಿತ್ಯ ಅಗತ್ಯವಾಗಿ ಬೇಕಾಗಿರುವ ವಸ್ತುಗಳಲ್ಲಿ ಟೂತ್‌ಪೇಸ್ಟ್ ಕೂಡ ಒಂದು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬಗೆಯ ವಿಧ ವಿಧವಾದ ಟೂತ್‌ಪೇಸ್ಟ್ಗಳು ಲಭ್ಯವಿದೆ. ನಮ್ಮಲ್ಲಿ ಕೆಲವರು ಟೇಸ್ಟ್ ನೋಡಿಯೇ ಟೂತ್‌ಪೇಸ್ಟ್ ಖರೀದಿಸುತ್ತಾರೆ. ಆದರೆ, ಟೂತ್‌ಪೇಸ್ಟ್ ಖರೀದಿಸುವಾಗ ಪ್ರಮುಖವಾಗಿ ಯಾವ ಅಂಶವನ್ನು ಗಮನಿಸಬೇಕು. ನಮ್ಮ ಹಲ್ಲುಗಳ ಆರೋಗ್ಯಕ್ಕೆ ಯಾವ ರೀತಿಯ ಟೂತ್‌ಪೇಸ್ಟ್ ಅಗತ್ಯ ಎಂದು ಎಂದಾದರೂ ಯೋಚಿಸಿದ್ದೀರಾ?

ನೀವೂ ಕೂಡ ಕೇವಲ ಟೇಸ್ಟ್ ನೋಡಿ ಟೂತ್‌ಪೇಸ್ಟ್ ಖರೀದಿಸುತ್ತೀರಾ?

ಬೆಂಗಳೂರು: ನಿತ್ಯ ಬೆಳಿಗ್ಗೆ ಎದ್ದ ಕೂಡಲೇ, ರಾತ್ರಿ ಮಲಗುವ ಮುನ್ನ ನಾವು ಬ್ರಶ್ ಮಾಡುತ್ತೇವೆ. ಇದಕ್ಕಾಗಿ, ಟೂತ್‌ಪೇಸ್ಟ್ ಅನ್ನು ಕೂಡ ಬಳಸುತ್ತೇವೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಟೂತ್‌ಪೇಸ್ಟ್ಗಳು ಲಭ್ಯವಿರುವುದರಿಂದ ನಮಗಿಷ್ಟವಾದ ಟೂತ್‌ಪೇಸ್ಟ್ ಖರೀದಿಸಲು ಹಲವು ಆಯ್ಕೆಗಳು ಕೂಡ ಲಭ್ಯವಿವೆ. ಆದರೆ, ನಮ್ಮ ದಂತಗಳ ಆರೋಗ್ಯಕ್ಕೆ ಎಂತಹ ಟೂತ್‌ಪೇಸ್ಟ್ ಅಗತ್ಯ. ಹಲ್ಲುಗಳು ಆರೋಗ್ಯವಾಗಿರಬೇಕು ಎಂದರೆ ಯಾವ ರೀತಿಯ ಟೂತ್‌ಪೇಸ್ಟ್ ಬಳಸಬೇಕು ಎಂದು ಎಂದಾದರೂ ಯೋಚಿಸಿದ್ದೀರಾ? 

ನಮ್ಮಲ್ಲಿ ಕೆಲವರು ಬ್ರಾಂಡ್ ನೋಡಿ ಟೂತ್‌ಪೇಸ್ಟ್ ಖರೀದಿಸಿದರೆ, ಇನ್ನೂ ಕೆಲವರು ಅದರ ರುಚಿಗಾಗಿಯೇ ಟೂತ್‌ಪೇಸ್ಟ್ ಖರೀದಿಸುವುದೂ ಉಂಟು. ಆದರೆ, ಹಲ್ಲುಗಳ ಆರೋಗ್ಯಕ್ಕೆ ರುಚಿ, ಬ್ರಾಂಡ್ ಗಿಂತ ಮುಖ್ಯವಾಗಿ  ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಬಹಳ ಮುಖ್ಯ ಎನ್ನುತ್ತಾರೆ ಬ್ರಿಟಿಷ್ ದಂತವೈದ್ಯ ಡಾ.ಖಾಲೀದ್ ಕಾಸಿಮ್.

ಇದನ್ನೂ ಓದಿ- ಬೆಳಿಗ್ಗೆ ಮಾತ್ರವಲ್ಲ ರಾತ್ರಿಯೂ ಬ್ರಷ್ ಮಾಡುವುದು ಅತ್ಯಗತ್ಯ, ಇಲ್ಲದಿದ್ದರೆ ಈ ರೋಗಗಳಿಗೆ ಬಲಿಯಾಗಬಹುದು!

ಬ್ರಿಟಿಷ್ ದಂತವೈದ್ಯ ಡಾ.ಖಾಲೀದ್ ಕಾಸಿಮ್ ಅವರ ಪ್ರಕಾರ, ಹಲ್ಲುಗಳ ಆರೋಗ್ಯಕ್ಕಾಗಿ ನಾವು ಯಾವಾಗಲೂ ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಅನ್ನು ಬಳಸಬೇಕು. ಇದಕ್ಕೆ ಮುಖ್ಯ ಕಾರಣವೆಂದರೆ,  ಫ್ಲೋರೈಡ್ ಹಲ್ಲಿನ ಒಳಗೆ ಮತ್ತು ಹೊರಗೆ ಸಂಗ್ರಹವಾಗಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಅಂಶವಾಗಿದೆ. ಹಾಗಾಗಿ, ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಬಳಸುವುದರಿಂದ ಹಲ್ಲುಗಳು ಸ್ವಚ್ಚವಾಗುವುದರ ಜೊತೆಗೆ ಹೊಳೆಯುತ್ತವೆ ಎನ್ನಲಾಗುತ್ತದೆ.

ಇದನ್ನೂ ಓದಿ- Health Tips: ನಿಮ್ಮ ಹಲ್ಲುಜ್ಜಲು ಸರಿಯಾದ ಟೂತ್ ಬ್ರಷ್ ಆಯ್ಕೆ ಮಾಡಿಕೊಂಡಿದ್ದೀರಾ?

ಮಕ್ಕಳಿಗೆ ಬಳಸುವ ಟೂತ್‌ಪೇಸ್ಟ್ ಈ ರೀತಿ ಇರಲಿ:
ದಂತ ವೈದ್ಯರ ಪ್ರಕಾರ, ಫ್ಲೋರೈಡ್ ಯುಕ್ತ ಟೂತ್‌ಪೇಸ್ಟ್ ಹಲ್ಲುಗಳಿಗೆ ಒಳ್ಳೆಯದು. ಆದರೆ, ಮಕ್ಕಳಿಗೆ ಕಡಿಮೆ ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಅನ್ನು ಬಳಸಬೇಕು. ಮಕ್ಕಳಿಗೆ 1000 ಪಿಪಿಎಂ ಫ್ಲೋರೈಡ್ ಟೂತ್ ಪೇಸ್ಟ್ ನೀಡುವುದು ಉತ್ತಮ. ಅಂತೆಯೇ, ವಯಸ್ಕರಿಗೆ ಸಾಮಾನ್ಯವಾಗಿ 1,350 ರಿಂದ 1,500 ppm ಫ್ಲೋರೈಡ್ ಹೊಂದಿರುವ ಟೂತ್‌ಪೇಸ್ಟ್ ತುಂಬಾ ಪರಿಣಾಮಕಾರಿ ಎಂದು ಮಾಹಿತಿ ನೀಡಿದ್ದಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More