Home> Health
Advertisement

ಬೆಳಗಿನ ಉಪಹಾರ - ಮಧ್ಯಾಹ್ನದ ಭೋಜನದ ಮಧ್ಯೆ ಎಷ್ಟು ಗಂಟೆಗಳ ಅಂತರವಿರಬೇಕು?

Breakfast and Lunch Gap:ಒತ್ತಡದ ಬದುಕಿನ ಮಧ್ಯೆ ಕೆಲವರು ಬೆಳಗಿನ ಉಪಹಾರವನ್ನೇ ಮರೆತು ಬಿಡುತ್ತಾರೆ. ಇಲ್ಲ ಬಹಳ ತಡವಾಗಿ ಮಾಡುತ್ತಾರೆ. ಬೆಳಗಿನ ಆಪಾಹಾರ ತಡವಾಗಿಯಾದರೆ ಮಧ್ಯಾಹ್ನದ ಊಟದ ಕತೆ ಏನು? 
 

ಬೆಳಗಿನ ಉಪಹಾರ - ಮಧ್ಯಾಹ್ನದ ಭೋಜನದ ಮಧ್ಯೆ ಎಷ್ಟು ಗಂಟೆಗಳ ಅಂತರವಿರಬೇಕು?

Breakfast and Lunch Gap : ಬೆಳಗಿನ ಉಪಾಹಾರ ನಮ್ಮ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಬೆಳಿಗ್ಗೆ ರಾಜನಂತೆ ತಿನ್ನು, ಮಧ್ಯಾಹ್ನ ಮಂತ್ರಿಯಂತೆ, ರಾತ್ರಿ ಸೇವಕನಂತೆ ತಿನ್ನಬೇಕು ಎನ್ನುವ ಮಾತಿದೆ. ಅಂದರೆ ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಯಾವ ಹೊತ್ತಿನಲ್ಲಿ ಏನು ತಿನ್ನಬೇಕು ಎಷ್ಟು ತಿನ್ನಬೇಕು ಅನ್ನುವ ಅಂಶ ಬಹಳ ಪರಿಣಾಮ ಬೀರುತ್ತದೆ. ಇದರ ಜೊತೆಗೆ ನಾವು ಯಾವ ಹೊತ್ತಿನಲ್ಲಿ ಆಹಾರ ಸೇವಿಸುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ. ಒತ್ತಡದ ಬದುಕಿನ ಮಧ್ಯೆ ಕೆಲವರು ಬೆಳಗಿನ ಉಪಹಾರವನ್ನೇ ಮರೆತು ಬಿಡುತ್ತಾರೆ. ಇಲ್ಲ ಬಹಳ ತಡವಾಗಿ ಮಾಡುತ್ತಾರೆ. ಬೆಳಗಿನ ಆಪಾಹಾರ ತಡವಾಗಿಯಾದರೆ ಮಧ್ಯಾಹ್ನದ ಊಟದ ಕತೆ ಏನು? 

ಆರೋಗ್ಯ ತಜ್ಞರ ಪ್ರಕಾರ ಈ ಅಭ್ಯಾಸವು ನಮ್ಮ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಬೆಳಗ್ಗೆ ಉಪಹಾರ ತಡವಾಗಿ ಆಯಿತು ಎಂದಾದರೆ, ಮಧ್ಯಾಹ್ನ ಹಸಿವಾಗದಿದ್ದರೂ ಬಲವಂತವಾಗಿ ತಿನ್ನುವ ಅವಶ್ಯಕತೆ ಇಲ್ಲ. ಆರೋಗ್ಯಕರ ಮತ್ತು ಸಮತೋಲಿತ ಉಪಹಾರವು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುತ್ತದೆ. ಈ ಆಹಾರ ನೀಡುವ ಶಕ್ತಿಯು ದೇಹದಲ್ಲಿ 4 ರಿಂದ 5 ಗಂಟೆಗಳವರೆಗೆ ಇರುತ್ತದೆ. 

ಇದನ್ನೂ ಓದಿ : ನೀರು ಕುಡಿಯುವಾಗಿನ ಈ ತಪ್ಪು ನಿಮ್ಮ ಆಯಸ್ಸನ್ನು 15 ವರ್ಷ ಕಡಿಮೆ ಮಾಡುತ್ತೆ

ಉಪಾಹಾರದ ನಂತರ ಊಟಕ್ಕೆ ಸರಿಯಾದ ಸಮಯ : 
ಉಪಾಹಾರದ ನಂತರ ಊಟಕ್ಕೆ ಸರಿಯಾದ ಸಮಯ ಯಾವುದು ಎನ್ನುವುದನ್ನು ಕೂಡಾ ತಜ್ಞರು ವಿವರಿಸುತ್ತಾರೆ. ತಜ್ಞರ ಪ್ರಕಾರ, ಬೆಳಿಗ್ಗೆ 8 ಗಂಟೆಗೆ ಉಪಹಾರ ಸೇವಿಸಿದರೆ, ಮಧ್ಯಾಹ್ನ 1 ಗಂಟೆಗೆ ಊಟ ಮಾಡಬೇಕು.  ಮತ್ತೊಂದೆಡೆ,  ಒಂದು ವೇಳೆ 1 ಗಂಟೆಗೆ ಊಟ ಮಾಡುವುದು ಸಾಧ್ಯವಾಗದೆ ಇದ್ದರೆ, ಮಧ್ಯಾಹ್ನ 2 ರ ನಡುವೆ ಭೋಜನ ಮುಗಿಸಬೇಕು. 

ಒಂದು ವೇಳೆ ಬೆಳಗಿನ ಉಪಹಾರದಲ್ಲಿ ಕಡಿಮೆ ಆಹಾರ ಸೇವಿಸಿದ್ದಾಗ  ಅಥವಾ ಬೆಳಗಿನ ಉಪಾಹಾರವನ್ನು ಸೇವಿಸದಿದ್ದರೆ, ಮಧ್ಯಾಹ್ನ ಬೇಗನೆ ಹಸಿವಾಗುತ್ತದೆ. ಕೆಲವೊಮ್ಮೆ ಇದು ನಿಮ್ಮ ಚಟುವಟಿಕೆಯ ಮಟ್ಟವನ್ನು ಕೂಡಾ ಅವಲಂಬಿಸಿರುತ್ತದೆ. 

ಇದನ್ನೂ ಓದಿ : White Hair: ಧೂಮಪಾನದಿಂದ ಕೂದಲು ಬಿಳಿಯಾಗುತ್ತದೆಯೇ?

ಬೇಕಾ ಬಿಟ್ಟಿ ಸಮಯಗಳಲ್ಲಿ ತಿನ್ನಬೇಡಿ : 
ಊಟಕ್ಕೆ ದಿನಚರಿಯನ್ನು ಹೊಂದಿಸಿಕೊಳ್ಳಿ. ಇದರಿಂದ ಯಾವಾಗ ಬೇಕೋ ಆವಾಗ ಕೈಗೆ ಸಿಕ್ಕ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸುತ್ತದೆ. ಪ್ರತಿ ದಿನ ಬೆಳಿಗ್ಗೆ  ಸರಿಯಾದ ಸಮಯದಲ್ಲಿ ಉಪಹಾರವನ್ನು ಸೇವಿಸುತ್ತಾ ಬಂದರೆ ಮಧ್ಯಾಹ್ನದ ಭೋಜನವನ್ನು ಕೂಡಾ ನಿಗದಿತ ಸಮಯಕ್ಕೆ  ನಿಗದಿ ಮಾಡಿಕೊಳ್ಳಬಹುದು. 

ಎರಡು ಊಟಗಳ ನಡುವೆ 3 ರಿಂದ 5 ಗಂಟೆಗಳ ಅಂತರ ಇರಬೇಕು : 
ಸಂಶೋಧನೆಗಳ ಪ್ರಕಾರ, Meal Frequency ತೂಕ ನಷ್ಟ, ಹೃದಯದ ಆರೋಗ್ಯ ಮತ್ತು ಮಧುಮೇಹದ ಮೇಲೆ ಕೂಡಾ ಪರಿಣಾಮ  ಬೀರುತ್ತದೆ. ಎರಡು ಊಟಗಳ ನಡುವೆ 3 ರಿಂದ 5 ಗಂಟೆಗಳ ಅಂತರವನ್ನು ಇರಿಸಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆಗೆ ಪೂರ್ಣ ಸಮಯ ಸಿಗುತ್ತದೆ. 

ಇದನ್ನೂ ಓದಿ : ತೂಕ ಇಳಿಕೆಯಿಂದ ಹಿಡಿದು ಕಾಂತಿಯುತ ಚರ್ಮದವರೆಗೆ ಹಸಿ ಮೆಣಸಿನಕಾಯಿ ಸೇವನೆಯ ಈ 8 ಲಾಭಗಳು ನಿಮಗೂ ತಿಳಿದಿರಲಿ!

ನೀವು ಊಟವನ್ನು ಬಿಟ್ಟರೆ ಏನಾಗುತ್ತದೆ? :
ಸಂಶೋಧನೆಯ ಪ್ರಕಾರ, ದಿನವಿಡೀ ಕಡಿಮೆ ತಿನ್ನುವುದು ಅಥವಾ  ಯಾವುದೇ ಆಹಾರವನ್ನು ಸೇವಿಸದೆ ರಾತ್ರಿಯ ಹೊತ್ತು ಅಧಿಕ ಭೋಜನ ಮಾಡುವಾಗ ಕ್ಯಾಲೋರಿ ಸೇವನೆಯು ಅಧಿಕವಾಗಿರುತ್ತದೆ. ಇದರಿಂದ ತೂಕ ಹೆಚ್ಚಾಗುವುದರಿಂದ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಇತರ ಸಮಸ್ಯೆಗಳು ಸಹ ಉಂಟಾಗಬಹುದು. ಅದಕ್ಕಾಗಿಯೇ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನವನ್ನು ಸ್ಕಿಪ್ ಮಾಡಬೇಡಿ. ಇವೆರಡರ ಸಮಯವನ್ನು ಸರಿಯಾಗಿ ಪಾಲಿಸಿದರೆ ಆರೋಗ್ಯದ ವಿಷಯದಲ್ಲಿ ನೀವು ಗೆದ್ದಂತೆಯೇ.  

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More