Home> Health
Advertisement

ತೂಕವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಹೋಂ ಮೇಡ್ ಡ್ರಿಂಕ್ಸ್

ತೂಕ ನಷ್ಟಕ್ಕೆ ಸಲಹೆಗಳು: ಈ ದಿನಗಳಲ್ಲಿ ಬಹುತೇಕ ಮಂದಿಯನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅತಿಯಾದ ತೂಕ. ತೂಕ ನಷ್ಟಕ್ಕಾಗಿ ಜನರು ಡಯಟ್ ಮಾಡುತ್ತಾರೆ. ಜೊತೆಗೆ ಯೋಗ, ವ್ಯಾಯಾಮದಂತಹ ಅಭ್ಯಾಸಗಳನ್ನೂ ಸಹ ರೂಢಿಸಿಕೊಳ್ಳುತ್ತಾರೆ. ಆದರೆ ಕೆಲವು ಮನೆಯಲ್ಲಿಯೇ ತಯಾರಿಸಿದ ಪಾನೀಯಗಳಿಂದಲೂ ತೂಕ ನಷ್ಟ ಸಾಧ್ಯ.

ತೂಕವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಹೋಂ ಮೇಡ್ ಡ್ರಿಂಕ್ಸ್

ತೂಕ ನಷ್ಟಕ್ಕೆ ಸಲಹೆಗಳು:  ಇತ್ತೀಚಿನ ದಿನಗಳಲ್ಲಿ ಒತ್ತಡದ ಕೆಲಸದಿಂದಾಗಿ ಆರೋಗ್ಯದ ಬಗ್ಗೆ ಸರಿಯಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅನಾರೋಗ್ಯಕರ ಜೀವನಶೈಲಿ ಮತ್ತು ಕೆಲವು ಕೆಟ್ಟ ಅಭ್ಯಾಸಗಳಿಂದ ಉಂಟಾಗುವ ಇಂತಹ ಸಮಸ್ಯೆಗಳಲ್ಲಿ ಬೊಜ್ಜು ಕೂಡ ಒಂದು. ಈ ದಿನಗಳಲ್ಲಿ ಬಹುತೇಕ ಮಂದಿಯನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅತಿಯಾದ ತೂಕ. ತೂಕ ನಷ್ಟಕ್ಕಾಗಿ ಜನರು ಡಯಟ್ ಮಾಡುತ್ತಾರೆ. ಜೊತೆಗೆ ಯೋಗ, ವ್ಯಾಯಾಮದಂತಹ ಅಭ್ಯಾಸಗಳನ್ನೂ ಸಹ ರೂಢಿಸಿಕೊಳ್ಳುತ್ತಾರೆ. ಆದರೂ ಯಾವುದೇ ಪ್ರಯೋಜನವಿಲ್ಲ ಎಂದು ಚಿಂತಿಸುತ್ತಾರೆ. ಆದರೆ, ಕೆಲವು ಪಾನೀಯಗಳು ನಮ್ಮ ತೂಕ ನಷ್ಟಕ್ಕೆ ಸಹಾಯಕವಾಗಿವೆ ಎಂದು ಹೇಳಲಾಗುತ್ತದೆ. ಅಂತಹ ಪಾನೀಯಗಳ ಬಗ್ಗೆ ತಿಳಿಯೋಣ...

ಈ 3 ಮನೆ ಪಾನೀಯಗಳು ನಿಮ್ಮ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತವೆ:

ಬ್ಯುಸಿ ಲೈಫ್‌ನಲ್ಲಿ ಹಲವು ಬಾರಿ ಜಿನ್, ವ್ಯಾಯಾಮ ಅಥವಾ ವರ್ಕೌಟ್‌ಗೆ ಸಮಯ ಸಿಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ.... ಆದರೆ ಈಗ ಗಾಬರಿಯಾಗುವ ಅಗತ್ಯವಿಲ್ಲ, ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳುವ ಕೆಲವು ಪಾನೀಯಗಳಿವೆ, ಮತ್ತೊಂದು ಮುಖ್ಯವಾದ ವಿಷಯವೆಂದರೆ ಇವುಗಳನ್ನು ಸುಲಭವಾಗಿ ತಯಾರಿಸಬಹುದು. 

ಇದನ್ನೂ ಓದಿ- ಜಿಮ್‌ಗೆ ಹೋಗದೆ ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯಕಾರಿ ಈ ಡ್ರಿಂಕ್ಸ್

ತೂಕ ನಷ್ಟಕ್ಕೆ ಸಹಾಯಕವಾಗುವ ಪಾನೀಯಗಳಿವು:
1. ಮಜ್ಜಿಗೆ 

ಮಜ್ಜಿಗೆಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಆರೋಗ್ಯ ತಜ್ಞರ ಪ್ರಕಾರ ಇದು ತೂಕ ನಷ್ಟಕ್ಕೆ ರಾಮಬಾಣವಾಗಿದೆ. ಇದರಲ್ಲಿ ತುಂಬಾ ಕಡಿಮೆ ಕ್ಯಾಲೋರಿಗಳಿದ್ದು ಇದು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ಇರುವ ಕೊಬ್ಬು ಸುಡಲು ಅಂದರೆ ಕರಗಳು ಪ್ರಾರಂಭಿಸುತ್ತದೆ.  ಸಕ್ಕರೆಯ ಸೇವನೆಯು ಬೊಜ್ಜು ಹೆಚ್ಚಿಸಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಮಜ್ಜಿಗೆಯಲ್ಲಿ ಸಂಪೂರ್ಣವಾಗಿ ಸಕ್ಕರೆ ಅಂಶವಿಲ್ಲ.

2. ನೀರಿನೊಂದಿಗೆ ತುಳಸಿ ಬೀಜಗಳು 
ನೀವು ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಲು ಬಯಸಿದರೆ, ತುಳಸಿ ಬೀಜಗಳ ಸೇವನೆಯು ನಿಮಗೆ ಅಪೇಕ್ಷಿತ ಫಲಿತಾಂಶಗಳನ್ನು ತರುತ್ತದೆ. ಇದನ್ನು ಸಾಮಾನ್ಯವಾಗಿ ಸಬ್ಜಾ ಬೀಜಗಳು ಎಂದೂ ಕರೆಯುತ್ತಾರೆ. ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಇ, ವಿಟಮಿನ್ ಕೆ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಬೀಜವನ್ನು ನೀರಿನಲ್ಲಿ ಬೆರೆಸಿ ಕುಡಿದರೆ, ನಿಮಗೆ ದೀರ್ಘಕಾಲ ಹಸಿವಾಗುವುದಿಲ್ಲ ಮತ್ತು ತೂಕವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ- ನಿಮ್ಮ ದೇಹದ ಬೊಜ್ಜು ಕರಗಿಸಬೇಕಾ? ಹಾಗಿದ್ರೆ, ಪ್ರತಿ ದಿನ ರಾತ್ರಿ ಈ ಜ್ಯೂಸ್ ಸೇವಿಸಿ

3. ಬಿಸಿ ನೀರು ಮತ್ತು ನಿಂಬೆ:
ಬೆಳಗ್ಗೆ ಎದ್ದು ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ನಿಂಬೆರಸವನ್ನು ಬೆರೆಸಿ ಮಿಶ್ರಣ ಮಾಡಿ ಕುಡಿದರೆ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದು, ಮಾತ್ರವಲ್ಲದೇ ದೇಹದಲ್ಲಿರುವ ವಿಷಕಾರಿ ಅಂಶಗಳು ಬೇಗ ಹೊರಬರಬಹುದು. ಈ ಪಾನೀಯದ ಮೂಲಕ ಚಯಾಪಚಯವು ಹೆಚ್ಚಾಗುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ದೊಡ್ಡ ಕಾರಣವಾಗಿದೆ. ವಾಸ್ತವವಾಗಿ ನಿಂಬೆಯು ಫ್ಲೇವನಾಯ್ಡ್‌ಗಳು, ವಿಟಮಿನ್ ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಅಂಶಗಳನ್ನು ಒಳಗೊಂಡಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More