Home> Health
Advertisement

Turmeric Benefits: ಸರ್ವ ರೋಗಕ್ಕೂ ಮದ್ದು ಅರಿಶಿನ!

Turmeric Benefits: ಅರಿಶಿನವನ್ನು ಕೇವಲ ಸಾಂಬಾರು ಪದಾರ್ಥಗಳಿಗೆ ಮಾತ್ರ ಬಳಸದೇ ಎಲ್ಲಾ ರೋಗಗಳಿಗೂ ಪ್ರಥಮ ಚಿಕಿತ್ಸೆ ಇದುವೇ ಆಗಿದೆ. ಹಳ್ಳಿ ಕಡೆಗಳಲ್ಲಿ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡರೇ ಅಮ್ಮಂದಿಗೆ ನೆನಪಿಗೆ ಬರುವ ಮೊದಲ ಉತ್ತಮ ಔಷಧಿ ಅರಿಶಿನ.

Turmeric Benefits: ಸರ್ವ ರೋಗಕ್ಕೂ ಮದ್ದು ಅರಿಶಿನ!

Health Tipes: ಅರಿಶಿನವನ್ನು ಕೇವಲ ಸಾಂಬಾರ್‌ ಪದಾರ್ಥಗಳಿಗೆ ಮಾತ್ರ ಬಳಸದೇ ಎಲ್ಲಾ ರೋಗಗಳಿಗೂ ಪ್ರಥಮ ಚಿಕಿತ್ಸೆ ಇದುವೇ ಆಗಿದೆ. ಹಳ್ಳಿ ಕಡೆಗಳಲ್ಲಿ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡರೇ ಅಮ್ಮಂದಿಗೆ ನೆನಪಿಗೆ ಬರುವ  ಉತ್ತಮ ಔಷಧಿ ಅರಿಶಿನ.

ಅರಿಶಿನದಲ್ಲಿ  ಫೈಬರ್, ವಿಟಮಿನ್ ಸಿ, ಇ ಮತ್ತು ಕೆ, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಅರಿಶಿನದಲ್ಲಿ ಕಂಡುಬರುತ್ತವೆ. ಅರಿಶಿನವನ್ನು ಔಷಧಿಯಾಗಿ ಮಾತ್ರ ಬಳಸದೇ ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. 

ಇದನ್ನೂ ಓದಿ: Managlore Cucumber: ಮಂಗಳೂರು ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು..?

ಅರಿಶಿನದ ಪ್ರಯೋಜನಗಳು
ಗಾಯಗಾಳಾಗಿದ್ದರೇ ಅಂಥಹ ಜಾಗಕ್ಕೆ ಅರಿಶಿನವನ್ನು ಹಚ್ಚಿ ರಕ್ತ ಸೋರುವಿಕೆಯನ್ನು ನಿಯಂತ್ರಿಸಬಹುದಾಗಿದೆ.
ರಕ್ತ ಶುದ್ದಿಕರಣ: ಪ್ರತಿನಿತ್ಯ ಕಾಲಿ ಹೊಟ್ಟೆಯಲ್ಲಿ ಅರಿಶಿನದ ನೀರು ಕುಡಿಯುವುದರಿಂದ ದೇಹದಲ್ಲಿನ ರಕ್ತ ಶುದ್ದಿಗೊಳಿಸಿ, ರಕ್ತ ಸಂಚನ ಸುಲಭಗೊಳಿಸುತ್ತದೆ. ಅದರ ಜೊತೆಯಲ್ಲಿ ಮೆದುಳಿನ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತದೆ.

ಇದನ್ನೂ ಓದಿ: Remedies For Headache: ತಲೆನೋವಿಗೆ ಕಾರಣಗಳು; ಅದರ ಪರಿಹಾರಕ್ಕಾಗಿ ಮನೆಮದ್ದುಗಳು !

ರೋಗಗಳ ನಿಯಂತ್ರಣ: ಇದು ಆ್ಯಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡುಗೆಯಲ್ಲಿ ಬಳಸುವುದರಿಂದ ಕಾಣದ ರೀತಿಯಲ್ಲಿ ದೇಹಕ್ಕೆ ಆವರಿಸುವ ರೋಗವನ್ನು ತಡೆಯುತ್ತದೆ. 

ಕೆಮ್ಮು ನಿಯಂತ್ರಣನೆಗಡಿ ಸಂದರ್ಭದಲ್ಲಿ ಉಗುರು ಬೆಚ್ಚಗಿನ ಹಾಲಿನಲ್ಲಿ ಅರಿಶಿನ ಸೇರಿಸಿ ಕುಡಿದರೇ ಸ್ವಲ್ಪ ಮಟ್ಟಿಗೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.
ಅರಿಶಿನವು ವೈದ್ಯಕೀಯ ಚಿಕಿತ್ಸೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಅರಿಶಿನದಲ್ಲಿರುವ ಕರ್ಕ್ಯುಮಿನ್ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಪರಿಣಾಮಕಾರಿಯಾಗಿದೆ. ಅರಿಶಿನವು ಪ್ರಯೋಜನಕಾರಿ ಗಿಡಮೂಲಿಕೆಯಾಗಿದೆ, ಇದನ್ನು ಅನೇಕ ರೋಗಗಳು  ಸೌಂದರ್ಯ ಮತ್ತು ಚಿಕಿತ್ಸೆಗಾಗಿ ಶತಮಾನಗಳಿಂದ ಬಳಸಲಾಗುತ್ತಿದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

 

 

 

Read More