Home> Health
Advertisement

Tomato Flu symptoms : 80 ಮಕ್ಕಳಿಗೆ ತಗುಲಿರುವ ಟೊಮೆಟೊ ಜ್ವರ .! ಏನಿದರ ಲಕ್ಷಣಗಳು ಗೊತ್ತಾ?

ಕೇರಳದಲ್ಲಿ ಇದುವರೆಗೆ ಐದು ವರ್ಷದೊಳಗಿನ 80ಕ್ಕೂ ಹೆಚ್ಚು ಮಕ್ಕಳಲ್ಲಿ ಟೊಮೇಟೊ ಜ್ವರ ಕಾಣಿಸಿಕೊಂಡಿದೆ. ಸೋಂಕು ತಡೆಗಟ್ಟಲು ಕ್ರಮ ಕೈಗೊಳ್ಳದಿದ್ದರೆ ವೈರಸ್ ಮತ್ತಷ್ಟು ಹರಡಬಹುದು ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

Tomato Flu symptoms : 80 ಮಕ್ಕಳಿಗೆ ತಗುಲಿರುವ ಟೊಮೆಟೊ ಜ್ವರ .! ಏನಿದರ ಲಕ್ಷಣಗಳು ಗೊತ್ತಾ?

ನವದೆಹಲಿ : ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಆತಂಕವೇ ಇನ್ನೂ ದೂರವಾಗಿಲ್ಲ. ಇದರ ಮಧ್ಯೆಯೇ ಹೊಸ ಕಾಯಿಲೆಯ ಭೀತಿ ಆವರಿಸಿದೆ. ಇತ್ತೀಚಿನ ದಿನಗಳಲ್ಲಿ ಫುಡ್ ಪಾಯಿಸನ್  ಪ್ರಕರಣಗಳ ನಡುವೆ,  ಕೇರಳದ ಹಲವು ಭಾಗಗಳಲ್ಲಿ ಟೊಮೇಟೊ ಫ್ಲೂ ಎಂಬ ಹೊಸ ವೈರಸ್ ಪತ್ತೆಯಾಗಿದೆ. ಈ ವೈರಸ್ ಪತ್ತೆಯಾದ ಬಳಿಕ ಜ್ವರದಿಂದ ಬಳಲುತ್ತಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.  ರಾಜ್ಯದಲ್ಲಿ ಇದುವರೆಗೆ ಐದು ವರ್ಷದೊಳಗಿನ 80ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. 

ಏನಿದು ಟೊಮೆಟೊ ಜ್ವರ ? :
ಟೊಮೆಟೊ ಜ್ವರವು ಅಜ್ಞಾತ ಜ್ವರವಾಗಿದ್ದು, ಇದು ಕೇರಳದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದಿದೆ. ಜ್ವರದಿಂದ ಸೋಂಕಿತ ಮಕ್ಕಳಲ್ಲಿ ದದ್ದುಗಳು ಮತ್ತು ಗುಳ್ಳೆಗಳು ಉಂಟಾಗಬಹುದು,. ಅವುಗಳು ಸಾಮಾನ್ಯವಾಗಿ ಕೆಂಪು ಬಣ್ಣದ್ದಾಗಿರುತ್ತವೆ. ಅದಕ್ಕಾಗಿಯೇ ಇದನ್ನು ಟೊಮೆಟೊ ಜ್ವರ ಎಂದು ಕರೆಯಲಾಗುತ್ತದೆ. ಕೇರಳದ ಕೆಲವು ಭಾಗಗಳಲ್ಲಿ ಮಾತ್ರ ಈ ರೋಗ ಪತ್ತೆಯಾಗಿದ್ದು, ಸೋಂಕನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ವೈರಸ್ ಮತ್ತಷ್ಟು ಹರಡಬಹುದು ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ :  Health Tips: ಬೇಸಿಗೆಯಲ್ಲಿ ದೇಹವನ್ನು ತಂಪುಗೊಳಿಸಲು ಈ ಆಹಾರ ಸೇವಿಸಿ

ಟೊಮೆಟೊ ಜ್ವರದ ಲಕ್ಷಣಗಳೇನು?
ಟೊಮೆಟೊ ಜ್ವರದ ಮುಖ್ಯ ಲಕ್ಷಣಗಳೆಂದರೆ ಕೆಂಪು ದದ್ದು, ಗುಳ್ಳೆಗಳು, ಚರ್ಮದ ಕಿರಿಕಿರಿ ಮತ್ತು  ಡಿ ಹೈಡ್ರೇಶನ್. ಇದಲ್ಲದೆ, ಸೋಂಕಿತ ಮಕ್ಕಳಲ್ಲಿ ತೀವ್ರ ಜ್ವರ, ಮೈ ಕೈ ನೋವು, ಕೀಲು ಊತ, ಸುಸ್ತು, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಅತಿಸಾರ, ಕೆಮ್ಮು, ಸೀನುವಿಕೆ ಮತ್ತು ಸ್ರವಿಸುವ ಮೂಗು, ಮತ್ತು ಕೈಗಳ ಬಣ್ಣ ಬದಲಾವಣೆಯಂತಹ ಲಕ್ಷಣಗಳು ಕಂಡುಬರುತ್ತವೆ.

ಟೊಮೆಟೊ ಜ್ವರ ಬಂದಾಗ ಏನು ಮಾಡಬೇಕು ?
ಮಗುವಿಗೆ ಟೊಮೆಟೊ ಜ್ವರದ ಯಾವುದೇ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದರೊಂದಿಗೆ, ಸೋಂಕಿತ ಮಗು ದದ್ದುಗಳು ಮತ್ತು ಗುಳ್ಳೆಗಳನ್ನು ತುರಿಸದಂತೆ ನೋಡಿಕೊಳ್ಳಿ.  ಇದರೊಂದಿಗೆ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಇದರೊಂದಿಗೆ ಕಾಲಕಾಲಕ್ಕೆ ದ್ರವ ಪದಾರ್ಥಗಳನ್ನು ತೆಗೆದುಕೊಳ್ಳುವಂತೆ ಮತ್ತು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಇದನ್ನೂ ಓದಿ : Golden Blood ಬಗ್ಗೆ ನಿಮಗೆ ತಿಳಿದಿದೆಯೇ: ವಿಶ್ವದಲ್ಲಿಯೇ ಅಪರೂಪದ ರಕ್ತವಿದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More