Home> Health
Advertisement

Skin Care Tips: ತಿನ್ನಲು ಮಾತ್ರವಲ್ಲ ತ್ವಚೆಯ ಆರೋಗ್ಯಕ್ಕೂ ಕೂಡ ಲಾಭಕಾರಿಯಾಗಿದೆ ಹಸಿ ಈರುಳ್ಳಿ

Onion On Skin: ಹಸಿ ಈರುಳ್ಳಿ ಸೇವನೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನೀಮಗೆ ತಿಳಿದಿದೆಯಾ? ಹೌದು, ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ತುಂಬಾ ಸಹಕಾರಿಯಾಗಿದೆ.

Skin Care Tips: ತಿನ್ನಲು ಮಾತ್ರವಲ್ಲ ತ್ವಚೆಯ ಆರೋಗ್ಯಕ್ಕೂ ಕೂಡ ಲಾಭಕಾರಿಯಾಗಿದೆ ಹಸಿ ಈರುಳ್ಳಿ

Benefits of Onion On Skin: ಬೇಸಿಗೆಯಲ್ಲಿ ಹಸಿ ಈರುಳ್ಳಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುವುದು ಎಂಬ ಸಂಗತಿ ನಮಗೆಲ್ಲರಿಗೂ ತಿಳಿದಿದೆ. ಇದು ಬೇಸಿಗೆಯಲ್ಲಿನ ಉಷ್ಣಾಂಶದಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈರುಳ್ಳಿ ಎಂದರೆ ಬಹುತೇಕ ಎಲ್ಲ ಮನೆಯಲ್ಲೂ ಕಾಣಸಿಗುವ ಒಂದು ತರಕಾರಿಯಾಗಿದೆ. ಹಸಿ ಈರುಳ್ಳಿ ಬಿಸಿಲಿನ ತಾಪದಿಂದ ರಕ್ಷಿಸಲು ನಮಗೆ ಸಹಾಯ ಮಾಡುತ್ತದೆ.  ಆದರೆ ಇದು ಇತರ ಅನೇಕ ರೋಗಗಳಿಂದಲೂ ಕೂಡ ರಕ್ಷಿಸಲು ನಮಗೆ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ ಮತ್ತು ಇದು ಹೃದ್ರೋಗವನ್ನು ದೂರವಿಡಲು ಸಹಾಯ ಮಾಡುತ್ತದೆ.

ಹಸಿ ಈರುಳ್ಳಿಯ ಸೇವನೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?  ಹೌದು, ಇದು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆ ಚರ್ಮ ಸುಕ್ಕು, ಎದೆಯ ಬಿರಿಯುವಿಕೆಯಂತಹ ಮುಂತಾದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾದರೆ ಬನ್ನಿ ಹಸಿ ಈರುಳ್ಳಿಯನ್ನು  ತ್ವಚೆಯ ಮೇಲೆ ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ

ಹಸಿ ಏರುಳ್ಳಿಯಿಂದಾಗುವ ಪ್ರಯೋಜನಗಳು
ಎದೆ ಬರಿಯುವಿಕೆಯಿಂದ ಪರಿಹಾರ ಪಡೆಯಿರಿ

ಅನೇಕ ಬಾರಿ ಜನರು ಬೇಸಿಗೆಯಲ್ಲಿ ಎದೆಯ ಬಿರಿಯುವಿಕೆಯ ಬಗ್ಗೆ ದೂರು ನೀಡುತ್ತಾರೆ. ಇದು ತಾಪಮಾನ  ಮತ್ತು ಉಷ್ಣಾಂಶದ ಅಲೆಯ ಕಾರಣ ಉಂಟಾಗುವ ಒಂದು ಸಾಮಾನ್ಯ ಸಮಸ್ಯೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಯನ್ನು ನಿವಾರಿಸಲು ನೀವು ಹಸಿ ಈರುಳ್ಳಿಯನ್ನು ಬಳಸಬಹುದು. ಇದಕ್ಕಾಗಿ ನೀವು ಮೊದಲು  ಈರುಳ್ಳಿಯ ರಸವನ್ನು ತೆಗೆದುಕೊಂಡು ಅದನ್ನು ಹಬೆಯಲ್ಲಿ ಬೇಯಿಸಿ, ಇದು ಎದೆಯ ದಟ್ಟಣೆಗೆ ತ್ವರಿತ ಮತ್ತು ಪರಿಣಾಮಕಾರಿ ಉಪಾಯವಾಗಿದೆ. 

ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ
ಈರುಳ್ಳಿ ಉತ್ಕರ್ಷಣ ನಿರೋಧಕ ಗುಣಗಳು, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದಲ್ಲದೆ  ಹೆಚ್ಚಿನ ಪ್ರಮಾಣದ ಖನಿಜಗಳು ಸಹ ಏರುಳ್ಳಿಯಲ್ಲಿವೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನಿಮಗೆ ಸನ್‌ಬರ್ನ್ ಸಮಸ್ಯೆ ಇದ್ದರೆ, ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಚರ್ಮಕ್ಕೆ ಹಸಿ ಈರುಳ್ಳಿಯನ್ನು ಉಜ್ಜಿ. ಇದರಿಂದ ನಿಮಗೆ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ-Anger Control: ಕೋಪ ನಿಯಂತ್ರಿಸಲು ರೂಢಿಸಿಕೊಳ್ಳಿ ಈ ರೀತಿಯ ಆಹಾರ ಪದ್ಧತಿ

ಉರಿಯುವಿಕೆ ಮತ್ತು ತುರಿಕೆಗೆ ಪರಿಹಾರ
ಬೇಸಿಗೆಯಲ್ಲಿ ಹಲವು  ಬಾರಿ ನಮಗೆ  ಚರ್ಮದಲ್ಲಿ ದದ್ದುಗಳು ಮತ್ತು ಸುಟ್ಟಗಾಯಗಳು ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಈ ತುರಿಕೆ ಮತ್ತು ದದ್ದುಗಳ ಸಮಸ್ಯೆಯನ್ನು ತೊಡೆದುಹಾಕಾಲು, ನೀವು ಈರುಳ್ಳಿ ರಸವನ್ನು ಉಪಯೋಗಿಸಬೇಕು. ಈರುಳ್ಳಿಯ ರಸವನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಚರ್ಮಕ್ಕೆ ಹಚ್ಚಿ. ಶೀಘ್ರದಲ್ಲೇ ನಿಮಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ-Orange Peel Benefits: ಕಿತ್ತಳೆ ಸಿಪ್ಪೆ ಎಸೆಯುವ ಮುನ್ನ ಅದರ ಈ ಐದು ಪ್ರಯೋಜನಗಳ ಬಗ್ಗೆ ತಿಳಿಯಿರಿ

ಚರ್ಮ ಹೊಳಪನ್ನು  ಪಡೆಯುತ್ತದೆ
ಈರುಳ್ಳಿ ರಸವು ಚರ್ಮವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ಸ್  ಗಳನ್ನು ಹೊಂದಿದೆ.  ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಸಮಸ್ಯೆಯನ್ನು ನಿವಾರಿಸಬಹುದು. ಚರ್ಮದ ಆರೋಗ್ಯ ಸುಧಾರಿಸಲು, ನೀವು ಅರಿಶಿನದೊಂದಿಗೆ  ಈರುಳ್ಳಿ ರಸವನ್ನು ಬೆರೆಸಿ ಮುಖಕ್ಕೆ ಅನ್ವಯಿಸಿ. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಮುಖ ಹೊಳಪನ್ನು ಪಡೆಯುತ್ತದೆ. ಇದಲ್ಲದೆ, ಉತ್ತಮ ಪರಿಣಾಮಕ್ಕಾಗಿ ನಿಂಬೆ ರಸವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಅನ್ವಯಿಸಬಹುದು . ಇದನ್ನು ಹತ್ತಿಯ ಸಹಾಯದಿಂದ ಮುಖದ ಮೇಲೆ ಹಚ್ಚಿ ನಂತರ 10 ನಿಮಿಷಗಳ ಕಾಲ ಒಣಗಲು ಬಿಟ್ಟು, ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More