Home> Health
Advertisement

ಈ ಸಮಸ್ಯೆಗಳಿದ್ದಲ್ಲಿ ಹೆಸರುಕಾಳು, ಹೆಸರು ಬೇಳೆ ತಿನ್ನಲೇ ಬಾರದು !

Side effects of Moong Daal :  ಕೆಲವು ವೈದ್ಯಕೀಯ ಸಮಸ್ಯೆಗಳ ಸಂದರ್ಭದಲ್ಲಿ  ಹೆಸರು ಕಾಳು ಮತ್ತು ಹೆಸರು ಬೇಳೆ ಸೇವಿಸಿದರೆ ಸಾಕಷ್ಟು ಹಾನಿಯಾಗುತ್ತದೆ. 
 

ಈ  ಸಮಸ್ಯೆಗಳಿದ್ದಲ್ಲಿ ಹೆಸರುಕಾಳು, ಹೆಸರು ಬೇಳೆ ತಿನ್ನಲೇ ಬಾರದು !

Side effects of Moong Daal : ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸುವಂತೆ ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರೋಟೀನ್ ಹೇರಳವಾಗಿರುವ ಕಾಳುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಬೇಳೆಕಾಳುಗಳ ಹೊರತಾಗಿ, ಮೊಳಕೆ ಕಾಳುಗಳನ್ನು ಸೇವಿಸುವ ಪ್ರವೃತ್ತಿಯು ಸಾಕಷ್ಟು ಹೆಚ್ಚಾಗಿದೆ. ಆದರೆ ಎಲ್ಲರೂ ಹೆಸರು ಕಾಳು ಹೆಸರು ಬೇಳೆ ತಿನ್ನುವಂತಿಲ್ಲ. ಏಕೆಂದರೆ ಇದು ಆರೋಗ್ಯಕ್ಕೂ ಹಾನಿ ಉಂಟು ಮಾಡುತ್ತದೆ. ಕೆಲವು ವೈದ್ಯಕೀಯ ಸಮಸ್ಯೆಗಳ ಸಂದರ್ಭದಲ್ಲಿ  ಹೆಸರು ಕಾಳು ಮತ್ತು ಹೆಸರು ಬೇಳೆ ಸೇವಿಸಿದರೆ ಸಾಕಷ್ಟು ಹಾನಿಯಾಗುತ್ತದೆ. 

1. ಕಡಿಮೆ ರಕ್ತದೊತ್ತಡ 

ನಿಮ್ಮ BP ಹೆಚ್ಚಿದ್ದರೆ, ವೈದ್ಯರು ನಿಮಗೆ ಹೆಸರು ಬೇಳೆ ತಿನ್ನುವಂತೆ ಸಲಹೆ ನೀಡುತ್ತಾರೆ. ಆದರೆ, ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಹೆಸರು ಕಾಳು ಮತ್ತು ಬೇಳೆಯನ್ನು ಸೇವಿಸಬಾರದು. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. 

ಇದನ್ನೂ ಓದಿ : ಕಾಂತಿಯುತ ತ್ವಚೆಯನ್ನು ಪಡೆಯಲು ತೆಂಗಿನ ಎಣ್ಣೆಯ ಫೇಸ್‌ ಮಾಸ್ಕ್‌ಗಳು, ಟ್ರೈ ಮಾಡಿ ನೋಡಿ

2.  ಹೊಟ್ಟೆ ಉಬ್ಬರ : 
ಹೊಟ್ಟೆ ಉಬ್ಬರ, ವಾಯು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಸರು ಬೇಳೆ, ಹೆಸರು ಕಾಳನ್ನು ಸೇವಿಸಬಾರದು. ಏಕೆಂದರೆ ಅದರಲ್ಲಿ ಶಾರ್ಟ್ ಚೈನ್ ಕಾರ್ಬೋಹೈಡ್ರೇಟ್‌ಗಳು ಕಂಡುಬರುತ್ತವೆ. ಇದರಿಂದಾಗಿ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ.

3. ಕಡಿಮೆ ರಕ್ತದ ಸಕ್ಕರೆ : 
ಕಡಿಮೆ ರಕ್ತದ ಸಕ್ಕರೆ ಹೊಂದಿರುವವರು ಸಾಮಾನ್ಯವಾಗಿ ತಲೆ ಸುತ್ತುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯಲ್ಲಿ ಹೆಸರು ಕಾಳು, ಹೆಸರು ಬೇಳೆ ತಿಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತಷ್ಟು ಕಡಿಮೆಯಾಗುತ್ತದೆ. ಇದರಿಂದ ಮೂರ್ಛೆ ಹೋಗುವ ಅಪಾಯ ಕೂಡಾ ಇದೆ. 

ಇದನ್ನೂ ಓದಿ : Health Tips: ಮಲಗುವ ಮುನ್ನ ಈ ಮಸಾಲೆ ವಸ್ತು ತಿಂದರೆ ಒಂದೇ ವಾರದಲ್ಲಿ 4 ಕೆಜಿ ತೂಕ ಇಳಿಸಬಹುದು!

4. ಯೂರಿಕ್ ಆಮ್ಲ 
ಹೈ ಯೂರಿಕ್ ಆಮ್ಲ ತೊಂದರೆಯಿಂದ ಬಳಲುತ್ತಿರುವವರು ಹೆಸರು ಬೇಳೆ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ, ಅದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾದಾಗ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಚ್ಚರಿಕೆ ಅಗತ್ಯ.

 

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More