Home> Health
Advertisement

Salt-Mustard Oil Benefits: ಉಪ್ಪು-ಸಾಸಿವೆ ಎಣ್ಣೆ ಒಂದು ಜಬರ್ದಸ್ತ್ ಕಾಂಬಿನೇಷನ್, 3 ಸಮಸ್ಯೆ ಪರಿಹಾರಕ್ಕೆ ರಾಮಬಾಣ ಚಿಕಿತ್ಸೆ

Salt-Mustard Oil Benefits: ಸಾಸಿವೆ ಮತ್ತು ಉಪ್ಪಿನ ಕಾಂಬಿನೇಶನ್ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಇದರ ಪರಿಣಾಮಕಾರಿ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ,
 

Salt-Mustard Oil Benefits: ಉಪ್ಪು-ಸಾಸಿವೆ ಎಣ್ಣೆ ಒಂದು ಜಬರ್ದಸ್ತ್ ಕಾಂಬಿನೇಷನ್, 3 ಸಮಸ್ಯೆ ಪರಿಹಾರಕ್ಕೆ ರಾಮಬಾಣ ಚಿಕಿತ್ಸೆ

Salt and Mustard Oil : ಸಾಸಿವೆ ಎಣ್ಣೆ ಮತ್ತು ಉಪ್ಪು ನಮ್ಮ ಅಡುಗೆಮನೆಯಲ್ಲಿ ಸಿಗುವ ಎರಡು ಪ್ರಮುಖ ಪದಾರ್ಥಗಳಾಗಿವೆ. ಈ ಎರಡೂ ಪದಾರ್ಥಗಳ ಮಿಶ್ರಣಗಳನ್ನು ಪ್ರತಿಯೊಂದು ರೀತಿಯ ತರಕಾರಿಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎರಡೂ ಪದಾರ್ಥಗಳಿಂದ ನಮ್ಮ ದೇಹಕ್ಕಾಗುವ ಲಾಭ ನಿಮಗೆ ತಿಳಿದಿದೆಯೇ? ಹೌದು, ಸಾಸಿವೆ ಎಣ್ಣೆ ಮತ್ತು ಉಪ್ಪು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುತ್ತದವೆ. ವಿಶೇಷವಾಗಿ ಇದು ಹಲ್ಲು ನೋವು, ಹಲ್ಲುಗಳ ಹಳದಿ ಮತ್ತು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಇಂದು ಈ ಲೇಖನದಲ್ಲಿ ಸಾಸಿವೆ ಎಣ್ಣೆ ಮತ್ತು ಉಪ್ಪಿನಿಂದ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಸಾಸಿವೆ ಎಣ್ಣೆ ಮತ್ತು ಉಪ್ಪಿನ ಪ್ರಯೋಜನಗಳು

ಒಸಡು ನೋವನ್ನು ನಿವಾರಿಸುತ್ತದೆ
ಒಸಡು ನೋವನ್ನು ನಿವಾರಿಸಲು ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ನೀವು ಬಳಸಬಹುದು. ಉಪ್ಪಿನಲ್ಲಿರುವ ಫ್ಲೋರೈಡ್ ಒಸಡುಗಳ ಬಲವನ್ನು ಉತ್ತೇಜಿಸುತ್ತದೆ, ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದನ್ನು ಬಳಸಲು, 1 ಪಿಂಚ್ ಉಪ್ಪಿನಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ಈಗ ಅದರಿಂದ ಒಸಡುಗಳ ಮೇಲೆ ಮೆಲ್ಲನೆ ಮಸಾಜ್ ಮಾಡಿ. ಇದರಿಂದ ವಸಡು ನೋವು ಕಡಿಮೆಯಾಗುತ್ತದೆ.

ಹಲ್ಲುಗಳ ಹಳದಿ ಬಣ್ಣವನ್ನು ತೊಡೆದುಹಾಕಲು ಉಪಯೋಗಿಸಬಹುದು
ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಬಳಸಬಹುದು. ಇದು ಹಲ್ಲುಗಳಿಗೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಇದು ಹಲ್ಲುಗಳನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ನಿಮ್ಮ ಹಲ್ಲುಗಳ ಮೇಲೆ ಕೊಳಕು ಸಂಗ್ರಹವಾಗಿದ್ದರೆ ಅದನ್ನು ತೆಗೆದುಹಾಕುತ್ತದೆ, ಇದಕ್ಕಾಗಿ 1 ಟೀ ಚಮಚ ಉಪ್ಪನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬೆರೆಸಿ ಮತ್ತು ನಿಮ್ಮ ಬೆರಳುಗಳಿಂದ ನಿಮ್ಮ ಹಲ್ಲುಗಳನ್ನು ಉಜ್ಜಿಕೊಳ್ಳಿ. ಇದು ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ.

ತೂಕ ಇಳಿಕೆಗೆ ತುಂಬಾ ಲಾಭಕಾರಿ
ಬಾಯಿಯ ಆರೋಗ್ಯದ ಹೊರತಾಗಿ, ಸಾಸಿವೆ ಎಣ್ಣೆ ಮತ್ತು ಉಪ್ಪು ನಿಮ್ಮ ತೂಕವನ್ನು ಸಹ ಕಡಿಮೆ ಮಾಡಲು ಸಹಕಾರಿಯಾಗಿದವೆ. ಇದರಲ್ಲಿರುವ ಗುಣಲಕ್ಷಣಗಳು ನಿಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇದು ನಿಮ್ಮ ದೇಹದ ತೂಕವನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಇದನ್ನು ಮಾಡಲು, ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಸಾಸಿವೆ ಎಣ್ಣೆಯನ್ನು ನಿಯಮಿತವಾಗಿ ಶಾಮೀಲುಗೊಳಿಸಿ.

ಇದನ್ನೂ ಓದಿ-Fiber Rich Foods: ಶರೀರವನ್ನು ನಿರ್ವಿಷಗೊಳಿಸಬೇಕೆ? ಈ ಸೂಪರ್ ಫುಡ್ ಗಳು ನಿಮ್ಮ ಆಹಾರದಲ್ಲಿರಲಿ

ಮೇಲಿನ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಸಾಸಿವೆ ಎಣ್ಣೆ ಮತ್ತು ಉಪ್ಪು ನಿಮ್ಮ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಒಂದು ವೇಳೆ  ನಿಮ್ಮ ಸಮಸ್ಯೆಯು ಬಹಳಷ್ಟು ಹೆಚ್ಚಾಗುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಖಂಡಿತವಾಗಿಯೂ ತಜ್ಞರನ್ನು ಸಂಪರ್ಕಿಸುವುದು ಒಳಿತು.

ಇದನ್ನೂ ಓದಿ-Health Tips : ಸ್ನಾನದ ಸಮಯದಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪುಗಳನ್ನು 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More