Home> Health
Advertisement

Pumpkin Flower Benefits: ಕುಂಬಳಕಾಯಿ ಮಾತ್ರವಲ್ಲ, ಅದರ ಹೂವಿನಿಂದಲೂ ಸಿಗುತ್ತೆ ಭಾರೀ ಪ್ರಯೋಜನ

Pumpkin Flower Benefits: ಕುಂಬಳಕಾಯಿ ಮಾತ್ರವಲ್ಲ, ಅದರ ಹೂವಿನಿಂದಲೂ ಸಿಗುತ್ತೆ ಹಲವು ಆರೋಗ್ಯಕರ ಪ್ರಯೋಜನ ಲಭ್ಯವಿದೆ. 

Pumpkin Flower Benefits: ಕುಂಬಳಕಾಯಿ ಮಾತ್ರವಲ್ಲ, ಅದರ ಹೂವಿನಿಂದಲೂ ಸಿಗುತ್ತೆ ಭಾರೀ ಪ್ರಯೋಜನ

Pumpkin Flower Benefits: ಭಾರತದಲ್ಲಿ ಬಳಸುವ ಹಲವು ತರಕಾರಿಗಳಲ್ಲಿ ಕುಂಬಳಕಾಯಿ ಕೂಡ ಒಂದು. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ ಮತ್ತು ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ ಕುಂಬಳಕಾಯಿ ಜೊತೆಗೆ ಅದರ ಹೂವುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಇದರ ಹೂವುಗಳನ್ನು ಕೂಡ ಆಹಾರವಾಗಿ ಬಳಸಲಾಗುತ್ತದೆ. ಕುಂಬಳಕಾಯಿ ಹೂವಿನ ಪ್ರಯೋಜನಗಳ ಬಗ್ಗೆ ತಿಳಿಯಿರಿ-

ಶೀತ ಮತ್ತು ಕೆಮ್ಮಿನಿಂದ ರಕ್ಷಣೆ- ಕುಂಬಳಕಾಯಿ ಹೂವುಗಳಲ್ಲಿ (Pumpkin Flowers) ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಅದರ ಸೇವನೆಯಿಂದ  ಶೀತ ಮತ್ತು ಕೆಮ್ಮಿನ ಸಮಸ್ಯೆ ಕೂಡ ದೂರವಾಗುತ್ತದೆ.

ಇದನ್ನೂ ಓದಿ- Jeera To Increase Breast Milk: ಎದೆ ಹಾಲಿನ ಕೊರತೆ ನಿವಾರಣೆಗೆ ಸೇವಿಸಿ ಜೀರಿಗೆ ಹಾಲು

ಕಣ್ಣುಗಳಿಗೆ ಒಳ್ಳೆಯದು- ಕುಂಬಳಕಾಯಿ ಹೂವುಗಳು ಕಣ್ಣುಗಳಿಗೆ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಇದು ಕಣ್ಣುಗಳನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ (Vitamin A) ಇರುವುದರಿಂದ ಇದು ದೃಷ್ಟಿ ವೇಗಗೊಳಿಸುತ್ತದೆ.

ರೋಗನಿರೋಧಕ ಶಕ್ತಿ- ಕುಂಬಳಕಾಯಿ ಹೂವುಗಳು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಕುಂಬಳಕಾಯಿ ಹೂವುಗಳು ಯಾವುದೇ ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಹಾಯ ಮಾಡುತ್ತವೆ.

ಇದನ್ನೂ ಓದಿ- Pumpkin- ಕುಂಬಳಕಾಯಿಯನ್ನು ಈ ರೀತಿ ಬಳಸಿ ಸುಂದರ ತ್ವಚೆ, ಕೂದಲು ನಿಮ್ಮದಾಗಿಸಿ

ಮೂಳೆಗಳಿಗೆ ಒಳ್ಳೆಯದು- ಕುಂಬಳಕಾಯಿ ಹೂವುಗಳು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ಇದು ಮೂಳೆಗಳು, ಹಲ್ಲು ಮತ್ತು ಒಸಡುಗಳನ್ನು ಬಲವಾಗಿರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More