Home> Health
Advertisement

Peanuts Benefits: ಗೋಡಂಬಿ-ಬಾದಾಮಿ ತಿಂದಷ್ಟೇ ಪ್ರಯೋಜನ ನೀಡುತ್ತೆ ಕಡಲೆಬೀಜ

Peanuts Benefits: ಬಡವರ ಬಾದಾಮಿ ಎಂದೇ ಪ್ರಸಿದ್ದವಾಗಿರುವ ಕಡಲೆಬೀಜ ತಿನ್ನಲು ಬಲು ರುಚಿ. ಮಾತ್ರವಲ್ಲ, ಕಡಲೆಬೀಜ ಸೇವಿಸುವುದರಿಂದ ಆರೋಗ್ಯಕ್ಕೆ ಗೋಡಂಬಿ-ಬಾದಾಮಿ ತಿಂದಷ್ಟೇ ಪ್ರಯೋಜನವಾಗುತ್ತದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಆದರೆ, ಪೌಷ್ಟಿಕಾಂಶಗಳ ಆಗರವಾಗಿರುವ ಕಡಲೆಬೀಜ/ಕಡಲೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭ್ಯವಾಗಲಿವೆ.

Peanuts Benefits: ಗೋಡಂಬಿ-ಬಾದಾಮಿ ತಿಂದಷ್ಟೇ ಪ್ರಯೋಜನ ನೀಡುತ್ತೆ ಕಡಲೆಬೀಜ

Peanuts Benefits: ಕಡಲೆಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಬಿಸಿ ಕಡಲೆಕಾಯಿ ತಿನ್ನುವ ರುಚಿಯೇ ಬೇರೆ. ಆದರೆ, ಪೌಷ್ಟಿಕಾಂಶಗಳ ಗಣಿಯಾಗಿರುವ ಬಡವರ ಬಾದಾಮಿ ಕಡಲೆಕಾಯಿ/ಕಡಲೆಬೀಜ ಸೇವನೆಯಿಂದ ದೇಹಕ್ಕೆ ಗೋಡಂಬಿ-ಬಾದಾಮಿ ತಿಂದಷ್ಟೇ ಆರೋಗ್ಯ ಪ್ರಯೋಜನಗಳು ಲಭ್ಯವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಹೌದು, ಬಡವರ ಬಾದಾಮಿ ಕಡಲೆಕಾಯಿಯಲ್ಲಿ ಗೋಡಂಬಿ-ಬಾದಾಮಿಯಲ್ಲಿ ಕಂಡು ಬರುವಂತೆಯೇ ಸಾಕಷ್ಟು ಪ್ರಮಾಣದ ಕೊಬ್ಬು, ಪ್ರೋಟೀನ್, ಫೈಬರ್, ಕಬ್ಬಿಣ, ವಿಟಮಿನ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳು ಇವೆ. ಇವೆಲ್ಲವೂ ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯ. ಹಾಗಿದ್ದರೆ, ಕಡಲೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿದೆ ಎಂದು ತಿಳಿಯೋಣ...

ಬಡವರ ಬಾದಾಮಿ ಕಡಲೆಬೀಜ ಸೇವನೆಯಿಂದ ಆರೋಗ್ಯಕ್ಕೆ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು:
ರಕ್ತಹೀನತೆ ಸಮಸ್ಯೆಗೆ ಪರಿಹಾರ:

ಬಡವರ ಬಾದಾಮಿ ಕಡಲೆಬೀಜ ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕಡಲೆಕಾಯಿಯಲ್ಲಿ ಕಬ್ಬಿಣಾಂಶವಿದೆ. ಹಾಗಾಗಿ, ಇದು ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ- Potato Juice Benefits: ಈ ಗಂಭೀರ ಸಮಸ್ಯೆಗಳಿಗೆ ರಾಮಬಾಣ ಅಲೂಗಡ್ಡೆ ಜ್ಯೂಸ್

ಹೃದಯದ ಆರೋಗ್ಯಕ್ಕೆ ಉತ್ತಮ:
ಕಡಲೆಕಾಯಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದ ಹೃದಯ ಸಂಬಂಧಿತ ಕಾಯಿಲೆಗಳಿಂದಲೂ ದೂರ ಉಳಿಯಲು ಸಹಾಯಕವಾಗಿದೆ. ಹಾಗಾಗಿ, ಕಡಲೆಕಾಯಿಯನ್ನು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಡಯಾಬಿಟಿಸ್ ನಿಯಂತ್ರಣ: 
ಕಡಲೆಕಾಯಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವಾಗಿದೆ. ಇದನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ. ಹಾಗಾಗಿ, ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಕಡಲೆಕಾಯಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

ಇದನ್ನೂ ಓದಿ- Garlic Milk : ಬೆಳ್ಳುಳ್ಳಿ- ಹಾಲು ಸೇವನೆ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯ ಗೋತ್ತಾ?

ಉತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಕಡಲೆಕಾಯಿಯನ್ನು ಹೇಗೆ ಸೇವಿಸಬೇಕು?
ಆರೋಗ್ಯ ವೃದ್ಧಿಗಾಗಿ ನೆನೆಸಿದ ಕಡಲೆಕಾಯಿ ಬಹಳ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ, ರಾತಿ ಮಲಗುವ ಮೊದಲು ನೀರಿನಲ್ಲಿ ಕಡಲೆಕಾಯಿಯನ್ನು ಹಾಕಿ ನೆನೆಸಿಡಿ. ನಂತರ ಬೆಳಗಿನ ಉಪಹಾರದಲ್ಲಿ ಕಡಲೆಕಾಯಿಯನ್ನು ತಿನ್ನಬಹುದು. 

ಈ ಸಮಯದಲ್ಲಿ ಕಡಲೆಕಾಯಿ ಸೇವನೆ ತಪ್ಪಸಿ:
ರಾತ್ರಿ ವೇಳೆಯಲ್ಲಿ ಕಡಲೆಕಾಯಿ ಸೇವನೆಯನ್ನು ತಪ್ಪಿಸ. ಏಕೆಂದರೆ, ಇದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪದಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More