Home> Health
Advertisement

ನಿಷಿದ್ಧ.! ಮೊಸರಿನ ಜೊತೆ ಈ ಆಹಾರಗಳನ್ನು ತಿನ್ನಲೇಬಾರದು..!

ಸಾಮಾನ್ಯವಾಗಿ ಮೊಸರಿನ ಜೊತೆ ಈರುಳ್ಳಿ ಸೇರಿಸಿ ಮೊಸರುಬಜ್ಜಿ ಅಥವಾ ರಾಯಿತ ಮಾಡುತ್ತೇವೆ. ಬಿಸಿಲು ಕಾಲದಲ್ಲಿ (Summer) ಅದನ್ನು ಚೆನ್ನಾಗಿ ತಿನ್ನುತ್ತೇವೆ.  ಆದರೆ, ಇವೆರಡರ ಕಾಂಬಿನೇಷನ್ ಒಳ್ಳೆಯದಲ್ಲ ಎನ್ನುತ್ತದೆ ಆಯುರ್ವೇದ.
 

ನಿಷಿದ್ಧ.! ಮೊಸರಿನ ಜೊತೆ ಈ ಆಹಾರಗಳನ್ನು ತಿನ್ನಲೇಬಾರದು..!

ಬೆಂಗಳೂರು : ದೇಹಕ್ಕೆ ಅಪೂರ್ವ ಶಕ್ತಿ ನೀಡುವ ಆಹಾರ ಮೊಸರು (Curd) .  ಇದು ಶಕ್ತಿ ಅಷ್ಟೇ ಅಲ್ಲ,  ಇಮ್ಯೂನಿಟಿ (Immunity) ಕೂಡಾ ನೀಡುತ್ತದೆ.  ಇದರಲ್ಲಿ ಪ್ರೊಬಯೋಟಿಕ್ ಗುಣ ಇದೆ. ಕ್ಯಾಲ್ಸಿಯಂ ಭರಪೂರ ಇರುತ್ತೆ. ವಿಟಮಿನ್ ಬಿ2, ವಿಟಮಿನ್ ಬಿ12, ಮೆಗ್ನೇಶಿಯಂ, ಪೊಟ್ಯಾಶಿಯಂ ಮತ್ತು ಪ್ರೊಟೀನ್ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ.  ಆದರೆ, ಮೊಸರನ್ನು ಕೆಲವೊಂದು ವಸ್ತುಗಳ ಜೊತೆ ತಿನ್ನಲೇ ಬಾರದು. ಅದು ದೇಹಕ್ಕೆ ಹಾನಿ ಉಂಟು ಮಾಡಬಹುದು.  ಹಾಗಾದರೆ, ಆ ವಸ್ತುಗಳು ಯಾವುವು. ಅದನ್ನು ಮೊಸರಿನ ಜೊತೆ ಯಾಕೆ ತಿನ್ನಬಾರದು ನೋಡೋಣ.

1. ಮೊಸರು ಮತ್ತು ಈರುಳ್ಳಿ

ಸಾಮಾನ್ಯವಾಗಿ ಮೊಸರಿನ ಜೊತೆ ಈರುಳ್ಳಿ (onion) ಸೇರಿಸಿ ಮೊಸರುಬಜ್ಜಿ ಅಥವಾ ರಾಯಿತ ಮಾಡುತ್ತೇವೆ. ಬಿಸಿಲು ಕಾಲದಲ್ಲಿ (Summer) ಅದನ್ನು ಚೆನ್ನಾಗಿ ತಿನ್ನುತ್ತೇವೆ.  ಆದರೆ, ಇವೆರಡರ ಕಾಂಬಿನೇಷನ್ ಒಳ್ಳೆಯದಲ್ಲ ಎನ್ನುತ್ತದೆ ಆಯುರ್ವೇದ (ayurveda) . ಯಾಕೆಂದರೆ ಮೊಸರು ತಂಪು ಪ್ರವೃತ್ತಿ ಹೊಂದಿದೆ. ಈರುಳ್ಳಿ ಉಷ್ಣ ಪ್ರವೃತ್ತಿಯದ್ದು.  ಪರಸ್ಪರ ವಿರುದ್ಧ  ಪ್ರವೃತ್ತಿಯ ಎರಡು ವಸ್ತುಗಳನ್ನು ಒಟ್ಟಿಗೆ ತಿಂದರೆ ಅಲರ್ಜಿ (Allergy) , ಎಕ್ಷಿಮಾ, ಸೊರಯಾಸೀಸ್, ಗ್ಯಾಸ್, ಆಸಿಡಿಟಿ ಮತ್ತು ವಾಂತಿ ಉಂಟಾಗಬಹುದು.

ಇದನ್ನೂ ಓದಿ : Madrasthron Benefits : ಇಲಾಚಿ ಹಣ್ಣಿನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು: ಇಲ್ಲಿವೆ ಅದರ 5 ಪ್ರಯೋಜನಗಳು!

2. ಹಾಲು ಮತ್ತು ಮೊಸರು ಬೇಡವೇ ಬೇಡ
ಹಾಲು (Milk) ಮತ್ತು ಮೊಸರು-ಇವೆರಡೂ ಹೈನೋದ್ಯಮಗಳೇ. ಇವೆರಡನ್ನು ಒಟ್ಟಿಗೆ ತಿನ್ನಬಾರದು ಎಂದಿದೆ ಆಯುರ್ವೇದ.  ಇವೆರಡನ್ನೂ ಒಟ್ಟಿಗೆ ತಿಂದರೆ, ಡಯರಿಯಾ, ಗ್ಯಾಸ್ (Accidity) , ಹೊಟ್ಟೆ ನೋವು ಉಂಟಾಗಬಹುದು.

3. ಮಾವು ಮತ್ತು ಮೊಸರು ಸಲ್ಲದು
ಬೇಸಿಗೆಯಲ್ಲಿ (Summer) ಮಾವಿನ ಲಸ್ಸಿ ಎಲ್ಲರಿಗೂ ಇಷ್ಟ.  ಆದರೆ, ಇದು ಆರೋಗ್ಯಕ್ಕೆ ಹಾನಿಕರ  ಎನ್ನುತ್ತದೆ ಆಯುರ್ವೇದ.  ಎರಡೂ ಕೂಡಾ ಪರಸ್ಪರ ವಿರುದ್ಧ ಗುಣ ವಿಶೇಷ ಹೊಂದಿರುವ  ಆಹಾರಗಳು.  ಇವೆರಡನ್ನು ಒಟ್ಟಿಗೆ ತಿಂದರೆ  ತ್ವಚೆ ಸಂಬಂಧಿ ಕಾಯಿಲೆ (Skin disease)  ಉಂಟಾಗಬಹುದು. ದೇಹದಲ್ಲಿ ಟಾಕ್ಸಿನ್ ಹೆಚ್ಚಾಗಬಹುದು. ಜೀರ್ಣಕ್ರಿಯೆಗೆ (Digestion) ತೊಂದರೆಯಾಗಬಹುದು.

ಇದನ್ನೂ ಓದಿ : Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ

4. ಮೀನು ಮತ್ತು ಮೊಸರು 
ಪ್ರೊಟೀನ್ ಯುಕ್ತ  ಎರಡು ಆಹಾರಗಳನ್ನು ಒಟ್ಟಿಗೆ ತಿನ್ನಬಾರದು.  ಮೀನು (Fish)  ಮತ್ತು ಮೊಸರು ಎರಡೂ ಪ್ರೊಟೀನ್ ಯುಕ್ತ  ಆಹಾರಗಳು.  ಇವೆರಡನ್ನೂ ಒಟ್ಟಿಗೆ ತಿಂದರೆ ಅಜೀರ್ಣ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.

5. ಉದ್ದಿನ ಬೇಳೆ ಮತ್ತು ಮೊಸರು
ಮೊಸರು ಮತ್ತು ಉದ್ದಿನ ಬೇಳೆ ಕೂಡಾ ಒಳ್ಳೆಯ ಕಾಂಬಿನೇಶನ್ ಅಲ್ಲ. ಅವೆರಡ ಕಾಂಬಿನೇಷನ್ ನಿಂದ ದೂರ ಇರುವುದು ಉತ್ತಮ.  ಇಲ್ಲದೇ ಹೋದರೆ, ಅಸಿಡಿಟಿ, ಲೂಸ್ ಮೋಶನ್ ಇತ್ಯಾದಿ ಸಮಸ್ಯೆಗಳುಂಟಾಗಬಹುದು. 

ಇದನ್ನೂ ಓದಿ : ತಲೆದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳು ಇಟ್ಟು ಮಲಗಿದರೆ ಸಿಗಲಿದೆ ಅದ್ಬುತ ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More