Home> Health
Advertisement

Constipation Treatment: ಮಲಬದ್ಧತೆ ನಿವಾರಣೆಗೆ ಮನೆಮದ್ದು

Constipation Treatment: ಇತ್ತೀಚಿನ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಹಲವರಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿದೆ. ಕೆಲವು ಮನೆಮದ್ದುಗಳ ಸಹಾಯದಿಂದಲ್ಲೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Constipation Treatment: ಮಲಬದ್ಧತೆ ನಿವಾರಣೆಗೆ ಮನೆಮದ್ದು

ಮಲಬದ್ಧತೆ ಚಿಕಿತ್ಸೆ: ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರಿಗೆ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಮಲಬದ್ಧತೆ. ಕಳಪೆ ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ  ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವುದರಿಂದ ಉದರ ಸಂಬಂಧಿತ ಹಲವು ಸಮಸ್ಯೆಗಳನ್ನು ನಿವಾರಿಸಬಹುದು.  

ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಸರಳ ವಿಧಾನಗಳನ್ನು ಅನುಸರಿಸಿ:-

ಪ್ರತಿದಿನ ಸಾಕಷ್ಟು ನೀರು ಸೇವಿಸಿ:
ದೇಹಕ್ಕೆ ನೀರು ಬಹಳ ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ದೇಹವನ್ನು ಹೈಡ್ರೀಕರಿಸುವಲ್ಲಿ ನೀರು ತುಂಬಾ ಪ್ರಯೋಜನಕಾರಿಯಾಗಿದೆ.  ಆದ್ದರಿಂದ, ಉತ್ತಮ ಆರೋಗ್ಯಕ್ಕಾಗಿ ನೀವು ದಿನವಿಡೀ ಕನಿಷ್ಠ 7-8 ಗ್ಲಾಸ್ ನೀರನ್ನು ಕುಡಿಯಬೇಕು. ಇದನ್ನು ಅನುಸರಿಸುವುದರಿಂದ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. 

ಇದನ್ನೂ ಓದಿ- Diabetes: ಸಕ್ಕರೆ ಕಾಯಿಲೆಯಿಂದ ಬಾಯಿಗೆ ಸಂಬಂಧಿಸಿದ ಈ ಸಮಸ್ಯೆಗಳು ಎದುರಾಗಬಹುದು

ಫೈಬರ್ ಭರಿತ ಆಹಾರ ಸೇವಿಸಿ: 
ಸದಾ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರು ಮತ್ತು ಮಲಬದ್ಧತೆ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮದಲ್ಲಿಯೂ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಹೆಚ್ಚು ಹೆಚ್ಚು ಫೈಬರ್ ಭರಿತ ವಸ್ತುಗಳನ್ನು ಸೇವಿಸಬೇಕು. ಇದು ಓಟ್ ಮೀಲ್, ಬಾರ್ಲಿ, ಬಟಾಣಿ, ಬೀನ್ಸ್, ಮಸೂರ, ನಿಂಬೆಹಣ್ಣು ಮತ್ತು ಸೇಬುಗಳನ್ನು ಒಳಗೊಂಡಿದೆ.

ಇದನ್ನೂ ಓದಿ- Mens Health: ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿ ಶುಂಠಿ - ಈರುಳ್ಳಿ

ಬಾದಾಮಿ ಮತ್ತು ಬೆರ್ರಿ ಹಣ್ಣುಗಳನ್ನು ತಿನ್ನಿರಿ: 
ಬಾದಾಮಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುವ ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಬೆರ್ರಿ ಹಣ್ಣುಗಳು ಕೂಡ ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ ಇದನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ.

ಸೂಚನೆ:   ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Read More