Home> Health
Advertisement

National Deworming Day 2023: ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳು ಹುಟ್ಟಿಕೊಳ್ಳಲು ಕಾರಣ ಮತ್ತು ಪರಿಹಾರ ಇಲ್ಲಿದೆ

National Deworming Day 2023:ಮಕ್ಕಳು ಮತ್ತು ಹದಿಹರೆಯದವರಲ್ಲಿ ಜಂತು ಹುಳು ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

National Deworming Day 2023: ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳು ಹುಟ್ಟಿಕೊಳ್ಳಲು ಕಾರಣ ಮತ್ತು ಪರಿಹಾರ ಇಲ್ಲಿದೆ

National Deworming Day 2023 : ನ್ಯಾಷನಲ್ ಡಿ ವಾರ್ಮಿಂಗ್ ದಿನವನ್ನು 2015 ರಿಂದ  ಆಚರಿಸಲಾಯಿತು. ಅಂದಿನಿಂದ  ಫೆಬ್ರವರಿ 10 ರಂದು ಪ್ರತಿ ವರ್ಷ  ಈ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಜಂತು ಹುಳು ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.  ಜಂತು ಹುಳ ಸಮಸ್ಯೆ ಭಾರತದ ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿದೆ. ಅಂಕಿಅಂಶಗಳನ್ನು ಗಮನಿಸಿದರೆ, ಪ್ರಸ್ತುತ ದೇಶದಲ್ಲಿ ಒಂದು ವರ್ಷದಿಂದ 14 ವರ್ಷದೊಳಗಿನ 24 ಕೋಟಿಗೂ ಹೆಚ್ಚು ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. 

ಈ ಸಮಸ್ಯೆ ಸಾಮಾನ್ಯವಾಗಿ ಹಳ್ಳಿಗಳು ಮತ್ತು ಅರೆ-ನಗರ ಪ್ರದೇಶಗಳ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಶುಚಿತ್ವದ ಕೊರತೆ ಮತ್ತು ತಪ್ಪು ಆಹಾರ ಸೇವನೆಯಿಂದ ಈ ಸೋಂಕು  ಹುಟ್ಟಿಕೊಳ್ಳುತ್ತದೆ. ಮಣ್ಣಿನಲ್ಲಿ ಆಟವಾಡಿದ ನಂತರ ಕೈ ಉಗುರುಗಳಲ್ಲಿ ಸೇರಿಕೊಂಡಿರುವ ಕೊಳೆಯ ಮೂಲಕ ಆಹಾರದ ಜೊತೆ ಈ ಹುಳುಗಳು ಕೂಡಾ ಮಕ್ಕಳ ದೇಹ ಪ್ರವೇಶಿಸುತ್ತವೆ.   

ಇದನ್ನೂ ಓದಿ : Diabetes : ಮಧುಮೇಹ ನಿಯಂತ್ರಕ್ಕೆ ತಪ್ಪದೆ ಸೇವಿಸಿ ಈ ತರಕಾರಿಗಳನ್ನು!

ತಪ್ಪಿಸಲು ಏನು ಮಾಡಬೇಕು ? :
ಊಟ ಮಾಡುವ ಮೊದಲು ಮತ್ತು ಮಲವಿಸರ್ಜನೆಯ ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು.
ಸದಾ  ಚಪ್ಪಲಿ/ಬೂಟುಗಳನ್ನು ಧರಿಸಬೇಕು.
ಹಣ್ಣುಗಳು/ತರಕಾರಿಗಳನ್ನು ಶುದ್ಧ/ಸುರಕ್ಷಿತ ನೀರಿನಿಂದ ತೊಳೆದ ನಂತರವೇ ಬಳಸಿ.
ಚೆನ್ನಾಗಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ.

ಈ ವಿಷಯಗಳನ್ನು ನೆನಪಿನಲ್ಲಿಡಿ :
ಆರು ತಿಂಗಳಿಗೊಮ್ಮೆ ಮಕ್ಕಳಿಗೆ ಔಷಧ ನೀಡುವುದು ಸರಿಯಲ್ಲ. ಸರಿಯಾಗಿ ಪರೀಕ್ಷಿಸಿದ ನಂತರವೇ ಔಷಧ ನೀಡಿ.
ಔಷಧಿ ನೀಡುವ ಮೊದಲು ಮಲಬದ್ಧತೆ ಅಥವಾ ಇನ್ನಾವುದೇ ಸಮಸ್ಯೆ ಇಲ್ಲ  ಎನ್ನುವುದನ್ನು ಖಚಿತಪಡಿಸಿಕೊಳ್ಳಿ. 
 ಮಲವನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಹುಳುಗಳನ್ನು ಪರೀಕ್ಷಿಸಿ.
ಮಗುವಿಗೆ ಹುಳುಗಳ ಔಷಧವನ್ನು ನೀಡಿದ್ದರೆ, ನಂತರ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. 
ಇಲ್ಲವಾದರೆ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ :  World Pulses Day : ನಿತ್ಯ ಬೇಳೆ ಕಾಳುಗಳನ್ನು ಸೇವಿಸುತ್ತಾ ಬಂದರೆ ಈ ಸಮಸ್ಯೆಗಳಿಗೆ ಔಷಧಿಯೇ ಬೇಕಿಲ್ಲ !

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More