Home> Health
Advertisement

Mahindra Scorpio-N: ಈ ಕಾರಿನ ಮೈಲೇಜ್ ಮತ್ತು ವಿಶೇಷತೆಗಳ ಬಗ್ಗೆ ತಿಳಿಯಿರಿ

ಈ ವಿನೂತನ ಶೈಲಿಯ ಹೊಸ SUV ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

Mahindra Scorpio-N: ಈ ಕಾರಿನ ಮೈಲೇಜ್ ಮತ್ತು ವಿಶೇಷತೆಗಳ ಬಗ್ಗೆ ತಿಳಿಯಿರಿ

ನವದೆಹಲಿ: ಭಾರತದ ಖ್ಯಾತ ವಾಹನ ತಯಾರಿಕಾ ಕಂಪನಿ ಮಹೀಂದ್ರಾ ಸ್ಕಾರ್ಪಿಯೋ ಎನ್ (Scorpio-N) ಮಾದರಿಯ SUV ಬಿಡುಗಡೆ ಮಾಡಿದೆ. ಕೇವಲ 30 ನಿಮಿಷದಲ್ಲಿ 1 ಲಕ್ಷ ಕಾರು ಬುಕಿಂಗ್ ಆಗುವ ಮೂಲಕ ಹೊಸ ದಾಖಲೆ ಬರೆದ ಈ ನೂತನ SUV ವಿಶೇಷತೆ ಮತ್ತು ಮೈಲೇಜ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಜೂನ್ 27ರಂದು ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ SUV ಬಿಡುಗಡೆ ಮಾಡಿತು. ಬುಕಿಂಗ್ ಆರಂಭವಾದ ಮೊದಲ ನಿಮಿಷದಲ್ಲಿ 25 ಸಾವಿರ ಗ್ರಾಹಕರು ಬುಕ್ ಮಾಡಿದರೆ, 30 ನಿಮಿಷದೊಳಗಾಗಿ ಬರೋಬ್ಬರಿ 1 ಲಕ್ಷ ಗ್ರಾಹಕರು ಬುಕ್ ಮಾಡಿದ್ದರು. ಈ ಹೊಸ ಕಾರು Z2, Z4, Z6, Z8 ಮತ್ತು Z L ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋ ರೂಂ ಪ್ರಕಾರ ಆರಂಭಿಕ 11.99 ಲಕ್ಷ ರೂ.ನಿಂದ Top End ಮಾದರಿಯ ಕಾರು 21.45 ಲಕ್ಷ ರೂ.ವರೆಗೂ ಬೆಲೆ ಹೊಂದಿದೆ. ಹೊಸ ಸ್ಕಾರ್ಪಿಯೋ-ಎನ್ ಕಾರನ್ನು ಅಧಿಕೃತ ವೆಬ್‌ಸೈಟ್ ಅಥವಾ ನೇರವಾಗಿ ಡೀಲರ್ಸ್‌ಗಳ ಮೂಲಕ ಖರೀದಿಸಬಹುದು.  

ಇದನ್ನೂ ಓದಿ: Best Mileage Car At Low Price: ಮೈಲೇಜ್ ನಲ್ಲಿ ಎಲ್ಲಾ ಕಾರ್ ಗಳನ್ನು ಮೀರಿಸುತ್ತದೆ ಈ ಕಾರ್, ಸಿಎನ್ಜಿ ಕಿಟ್ ನೊಂದಿಗೆ ಅತ್ಯಂತ ಅಗ್ಗದ ದರದಲ್ಲಿ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ

ಈ ವಿನೂತನ ಶೈಲಿಯ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸಹ ಇದೆ.  

ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ಧಿಪಡಿಸಿದೆ. ಇದು ಕಾರನ್ನು ಮತ್ತಷ್ಟು ಆಕರ್ಷಕವಾಗಿಸಿದ್ದು, ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ DRLS ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ

ಮೈಲೇಜ್ ಬಗ್ಗೆ ತಿಳಿಯಿರಿ

ಈ SUV ಬುಕ್ ಮಾಡುವವರಿಗೆ ಇದರ ಮೈಲೇಜ್ ಬಗ್ಗೆ ಇನ್ನೂ ತಿಳಿದಿಲ್ಲ. ಇಂದು ನಾವು ನಿಮಗೆ ಇದರ ಮೈಲೇಜ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಹೀಂದ್ರಾ ಸ್ಕಾರ್ಪಿಯೊ-ಎನ್ ಖರೀದಿಸಬಯಸುವವರ ಮನದಲ್ಲಿ ಮೈಲೇಜ್ ಬಗ್ಗೆ ಪ್ರಶ್ನೆ ಮೂಡುವುದು ಸಹಜ. ಇದಕ್ಕಾಗಿಯೇ ಇಂದು ನಾವು ಈ ಪ್ರಶ್ನೆಗೆ ಉತ್ತರವನ್ನು ನೀಡುತ್ತಿದ್ದೇವೆ.  

ಇದನ್ನೂ ಓದಿ: Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ

ಈ SUVಯನ್ನು 1000 ಕಿ.ಮೀಗಿಂತಲೂ ಹೆಚ್ಚು ಓಡಿಸಿದ ಇಬ್ಬರು ವ್ಯಕ್ತಿಗಳ ಅನುಭವವನ್ನು ನಾವು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಸ್ಕಾರ್ಪಿಯೊ-ಎನ್ (ಡೀಸೆಲ್, ಸ್ವಯಂಚಾಲಿತ) ಅನ್ನು ಗಂಟೆಗೆ 100 ಕಿಮೀಗಿಂತ ಹೆಚ್ಚು ವೇಗದಲ್ಲಿ ಓಡಿಸಿದರೆ ಇದರ ಮೈಲೇಜ್ ಲೀಟರ್‍ಗೆ 11 ಕಿ.ಮೀ ಆಗಿರುತ್ತದೆ. ನೀವು ಗಂಟೆಗೆ 90 ಅಥವಾ 95 ಕಿ.ಮೀ ವೇಗದಲ್ಲಿ ಓಡಿಸಿದರೆ ಮತ್ತು ಹಾರ್ಡ್ ಆಕ್ಸಿಲರೇಶನ್ ಬಳಸದಿದ್ದರೆ ಆಗ ಲೀಟರ್‍ಗೆ 13 ರಿಂದ 14 ಕಿ.ಮೀ ಗರಿಷ್ಠ ಮೈಲೇಜ್ ಪಡೆಯುತ್ತೀರಿ. ಆದರೆ ಪೆಟ್ರೋಲ್ ಬಳಸಿದರೆ ಮೈಲೇಜ್ ಕಡಿಮೆ ಇರುತ್ತದೆ ಎಂದು ಇಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 70ಕ್ಕೂ ಹೆಚ್ಚು ಕಾರ್ ಕನೆಕ್ಟ್ ಫೀಚರ್ಸ್, ಆಂಡ್ರಾಯ್ಡ್ ಆಟೋ ಮತ್ತು ಆಟೋ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ ವಾಯ್ಸ್ ಸರ್ಪೊಟ್, 3D ಸೊನಿ ಸರೌಂಡ್ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಫೀಚರ್ಸ್ ಹೊಂದಿದೆ. ಡ್ಯುಯಲ್-ಜೋನ್ ಸ್ವಯಂಚಾಲಿತ ಹವಾ ನಿಯಂತ್ರಣ, ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳು ಮತ್ತು ಸ್ಮಾರ್ಟ್‌ಫೋನ್‌ಗಾಗಿ ವೈರ್‌ಲೆಸ್ ಚಾರ್ಜರ್‌ನಂತಹ ವೈಶಿಷ್ಟ್ಯ, 6 ಏರ್‌ಬ್ಯಾಗ್‌ಗಳು ಸೇರಿದಂತೆ ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಈ SUV ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More