Home> Health
Advertisement

ಮೂಲವ್ಯಾಧಿ ನಿವಾರಣೆಗೆ ಬೆಲ್ಲ ಉತ್ತಮ ಮನೆಮದ್ದು, ಇತರೆ ರೋಗಗಳಿಗೂ ಇದು ರಾಮಬಾಣ

ಬೆಲ್ಲದ ಬಳಕೆಯು ದೇಹಕ್ಕೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ. ಹಾಲುಣಿಸುವ ಮಹಿಳೆಯರಿಗೂ ಇದು ಸೂಕ್ತವಾಗಿದೆ.

ಮೂಲವ್ಯಾಧಿ ನಿವಾರಣೆಗೆ ಬೆಲ್ಲ ಉತ್ತಮ ಮನೆಮದ್ದು, ಇತರೆ ರೋಗಗಳಿಗೂ ಇದು ರಾಮಬಾಣ

ನವದೆಹಲಿ: ಬೆಲ್ಲದ ಬಳಕೆಯು ಅನೇಕ ರೋಗಗಳನ್ನು ಒಳಗೊಂಡಂತೆ ದೀರ್ಘಕಾಲದ ಮೂಲವ್ಯಾಧಿ(Piles)ಯನ್ನು ಸಹ ಗುಣಪಡಿಸುತ್ತದೆ. ಬೆಲ್ಲದಲ್ಲಿ, ಕ್ಯಾರೋಟಿನ್ ಜೊತೆಗೆ, ನಿಕೋಟಿನ್, ಆಮ್ಲ, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2, ವಿಟಮಿನ್ ಸಿ, ಕಬ್ಬಿಣ ಮತ್ತು ರಂಜಕವೂ ಕಂಡುಬರುತ್ತದೆ. ಬೆಲ್ಲವನ್ನು ಆಸ್ತಮಾ, ಕೆಮ್ಮು, ಹೊಟ್ಟೆಯ ಹುಳುಗಳಂತಹ ರೋಗಗಳ ವಿರುದ್ಧ ಬಳಸಬಹುದು. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವುದರ ಜೊತೆಗೆ, ಗ್ಯಾಸ್ ನಿಂದಾಗುವ ತೊಂದರೆಯಿಂದಲು ಸಹ ಮುಕ್ತಿ ನೀಡುತ್ತದೆ.

ಮಕ್ಕಳಿಗಾಗಿ ಹಾಲು ಉತ್ಪತ್ತಿಸುತ್ತದೆ

ಮಗುವಿಗಾಗಿ ಎದೆ ಹಾಲಿನ ಕೊರತೆ ಎದುರಿಸುತ್ತಿರುವ ಮಹಿಳೆಯರಲ್ಲಿ ಬೆಲ್ಲ ಹಾಲು ಉತ್ಪತ್ತಿಯ ಕೆಲಸ ಮಾಡುತ್ತದೆ. ಬೆಲ್ಲದ ಜೊತೆಗೆ ಬಿಳಿ ಬಣ್ಣದ ಜೀರಿಗೆ ಪೌಡರ್ಅನ್ನು ಹಾಲಿಗೆ  ಬೆರೆಸಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸಬೇಕು. ವಿದ್ಯಾರ್ಥಿಗಳಲ್ಲಿ ಒಂದು ವೇಳೆ ಸ್ಮರಣ ಶಕ್ತಿಯ ಸಮಸ್ಯೆ ಇದ್ದರೆ ಅವರು ಬೆಳಗ್ಗೆ ಹಾಗೂ ಸಾಯಂಕಾಲ ಬೆಲ್ಲದ ಹಲ್ವಾ ಸೇವಿಸುವುದು ಉತ್ತಮ.

ಬೆಲ್ಲದಲ್ಲಿರುವ ಕಬ್ಬಿಣವು ರಕ್ತಹೀನತೆಯನ್ನು ಗುಣಪಡಿಸುತ್ತದೆ ಮತ್ತು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಮೊಣಕಾಲು ನೋವು ಮತ್ತು ಊತದಿಂದ ಬಳಲುತ್ತಿರುವ ಜನರು, 5 ಗ್ರಾಂ ಬೆಲ್ಲ ಮತ್ತು 5 ಗ್ರಾಂ ಶುಂಠಿ ಪುಡಿಯನ್ನು ಬಳಸಿದರೆ, ಅವರ ತೊಂದರೆ ದೂರವಾಗುತ್ತದೆ. ಅದೇ ರೀತಿ, ಮಲಗುವ ಮುನ್ನ ಸ್ವಲ್ಪ ಬೆಲ್ಲ ಮತ್ತು ಹುರಿದ ಶುಂಠಿಯನ್ನು ಸೇವಿಸಿದರೆ, ನೀವು ಶೀತ ಮತ್ತು ತಲೆನೋವನ್ನು ತೊಡೆದುಹಾಕುತ್ತೀರಿ. ಬೆಲ್ಲದ ಬಳಕೆಯನ್ನು ಮಲಬದ್ಧತೆಗೆ ಒಂದು ಉತ್ತಮ ಉಪಚಾರ ಎಂದು  ಪರಿಗಣಿಸಲಾಗಿದೆ. ಕಬ್ಜ್ ನಿಂದ ಹಲವು ರೀತಿಯ ರೋಗಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಕಬ್ಜ್ ಇರುವ ಜನರು ಬೆಲ್ಲ ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಮೂಲವ್ಯಾಧಿಯಿಂದ ಮುಕ್ತಿ ಪಡೆಯಲು ಬೆಲ್ಲ ಉತ್ತಮ
ಮೂಲವ್ಯಾಧಿಯಿಂದ ಮುಕ್ತಿ ಪಡೆಯಲು ಅಶ್ವಸ್ಥ ಮರದ ಎಲೆಗಳು , 10 ಗ್ರಾಂ ದಾಲ್ಚಿನಿ, ಮಸಾಲೆ ಎಲೆ, ಕರಿ ಮೆಣಸು 30-30ಗ್ರಾಂ, ಶುಂಠಿ 35 ಗ್ರಾಂ, ಅಳಲೇ ಕಾಯಿ ಪೌಡರ್ 100 ಗ್ರಾಂ.ನಲ್ಲಿ 200 ಗ್ರಾಂ ಬೆಲ್ಲ ಬೆರೆಸಿ ಚೆನ್ನಾಗಿ ಅರಿದುಕೊಳ್ಳಿ. ನಂತರ ಈ ಮಿಶ್ರಣದಿಂದ 25-25 ಗ್ರಾಂ.ನ ಲಡ್ಡು ತಯಾರಿಸಿ, ನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಹದ ಬಿಸಿ ನೀರಿನ ಜೊತೆಗೆ ಸೇವಿಸಿದರೆ, ಮೂಲವ್ಯಾಧಿ ದೂರವಾಗುತ್ತದೆ.

Read More