Home> Health
Advertisement

ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ 4 ಸೂಪರ್‌ಫುಡ್‌ಗಳು

ಇತ್ತೀಚಿನ ದಿನಗಳಲ್ಲಿ ಪ್ರತಿ ವಯಸ್ಸಿನ ಜನರಲ್ಲಿ ಹೃದ್ರೋಗದ ಸಮಸ್ಯೆ ಕಂಡು ಬರುವುದು ಸಾಮಾನ್ಯವಾಗಿದೆ. ಆದರೆ, ನಿಮ್ಮ ನಿತ್ಯದ ಡಯಟ್ನಲ್ಲಿ ಕೆಲವು ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇರಿಸಬಹುದು. ಹೃದಯದ ಆರೋಗ್ಯಕ್ಕೆ ಯಾವೆಲ್ಲಾ ಆಹಾರಗಳು ಪ್ರಯೋಜನಕಾರಿ ಎಂದು ತಿಳಿಯಿರಿ.

ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ 4 ಸೂಪರ್‌ಫುಡ್‌ಗಳು

ಆರೋಗ್ಯಕರ ಹೃದಯಕ್ಕಾಗಿ ಸೂಪರ್‌ಫುಡ್ಸ್ : ನಮ್ಮ ದೇಹದ ಬಹಳ ಮುಖ್ಯವಾದ ಅಂಗ ಹೃದಯ. ವಯಸ್ಸಾದಂತೆ ನಮ್ಮ ಅಂಗಗಳು ದುರ್ಬಲವಾಗುತ್ತವೆ. ಇಂತಹ ದೌರ್ಬಲ್ಯವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ, ಆದರೆ ಸಾಧ್ಯವಾದಷ್ಟು ಅವು ಹೆಚ್ಚಾಗಿ ಹಾಳಾಗದಂತೆ ನಿಗಾವಹಿಸಬಹುದು. ವಾಸ್ತವವಾಗಿ, ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ನಿತ್ಯದ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಆರೋಗ್ಯಕರ ಹೃದಯವನ್ನು ನಮ್ಮದಾಗಿಸಬಹುದು. ಅಂತಹ ಕೆಲವು ಸೂಪರ್‌ಫುಡ್‌ಗಳ ಬಗ್ಗೆ ತಿಳಿಯಿರಿ.

ಆರೋಗ್ಯಕರ ಹೃದಯಕ್ಕೆ ಸೂಪರ್‌ಫುಡ್ಸ್ : 
ಸೂಪರ್‌ಫುಡ್‌ಗಳು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಆಹಾರಗಳಾಗಿವೆ. ಇಂತಹ ಆಹಾರಗಳು ನಮ್ಮ ನಮ್ಮ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. ಸೂಪರ್‌ಫುಡ್‌ಗಳು ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಚಿಕ್ಕ ವಯಸ್ಸಿನಿಂದಲೇ ಇಂತಹ ಆಹಾರಗಳನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ತಪ್ಪಿಸಬಹುದು.

ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ 4 ಸೂಪರ್‌ಫುಡ್‌ಗಳು:
* ಸಿರಿ ಧಾನ್ಯಗಳು:

ಸಂಸ್ಕರಿಸಿದ ಧಾನ್ಯಗಳಿಗಿಂತ ಭಿನ್ನವಾಗಿ, ಧಾನ್ಯಗಳು ನಮ್ಮ ದೇಹಕ್ಕೆ ಮತ್ತು ವಿಶೇಷವಾಗಿ ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಂಸ್ಕರಿಸಿದ ಆಹಾರಗಳು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸಿದರೆ, ಸಿರಿ ಧಾನ್ಯಗಳು ಆರೋಗ್ಯಕರ ಹೃದಯಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ.

ಇದನ್ನೂ ಓದಿ- ಆರೋಗ್ಯಕರ ತೂಕ ಇಳಿಕೆಗಾಗಿ ನಿಮ್ಮ ಬ್ರೇಕ್ ಫಾಸ್ಟ್ ಹೀಗಿರಲಿ

* ಡಾರ್ಕ್ ಚಾಕೊಲೇಟ್: 
ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನೀವು ಸಾಮಾನ್ಯ ಚಾಕೊಲೇಟ್ ಅನ್ನು ಹೆಚ್ಚು ಸೇವಿಸಬಹುದು. ಆದರೆ, ನೀವು ಹೃದಯವನ್ನು ಆರೋಗ್ಯವಾಗಿಡಲು ಬಯಸಿದರೆ, ಇಂದಿನಿಂದ ಡಾರ್ಕ್ ಚಾಕೊಲೇಟ್ ತಿನ್ನಲು ಪ್ರಾರಂಭಿಸಿ. ಡಾರ್ಕ್ ಚಾಕೊಲೇಟ್ ಹೃದಯದ ಕಾರ್ಯವನ್ನು ಸುಧಾರಿಸುವ ಪ್ರಮುಖ ಖನಿಜಗಳನ್ನು ಹೊಂದಿರುತ್ತದೆ. ಉತ್ಕರ್ಷಣ ನಿರೋಧಕ-ಸಮೃದ್ಧವಾಗಿರುವ ಡಾರ್ಕ್ ಚಾಕೊಲೇಟ್ ನಿಮ್ಮ ದೇಹ ಮತ್ತು ಹೃದಯವನ್ನು ರಕ್ಷಿಸುತ್ತದೆ. 

* ಕೊಬ್ಬಿನ ಮೀನು:
ಸಾಲ್ಮನ್ ಮತ್ತು ಟ್ಯೂನ ಮೀನುಗಳಂತಹ ಕೊಬ್ಬಿನ ಮೀನುಗಳು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಸಮೃದ್ಧ ಮೂಲಗಳಾಗಿವೆ. ವಿವಿಧ ಕಾರ್ಯಗಳಿಗೆ ದೇಹಕ್ಕೆ ಪ್ರೋಟೀನ್ ಅಗತ್ಯವಿದೆ. ಇದರೊಂದಿಗೆ, ಆರೋಗ್ಯಕರ ಕೊಬ್ಬುಗಳು ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಅಗತ್ಯವಾದ ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- Diabetic Symptoms: ನಿಮ್ಮ ಪಾದಗಳಲ್ಲಾಗುವ ಈ ಬದಲಾವಣೆ ಡಯಾಬಿಟಿಸ್‌ ಮುನ್ಸೂಚನೆ ಇರಬಹುದು

* ಆಲಿವ್ ಆಯಿಲ್:
ಆಲಿವ್ ಆಯಿಲ್ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಇತರ ಅಡುಗೆ ಎಣ್ಣೆಗಳು ಪರಿಧಮನಿಯ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು, ಆದರೆ ಆಲಿವ್ ಎಣ್ಣೆಯು ಅದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಮ್ಮ ದೈನಂದಿನ ಆಹಾರದಲ್ಲಿ ಆಲಿವ್ ಎಣ್ಣೆಯನ್ನು ಬಳಸುವ ಜನರು ಹೃದಯದ ಆರೋಗ್ಯದಲ್ಲಿ ಸುಧಾರಣೆಯನ್ನು ಹೊಂದಿರುತ್ತಾರೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More