Home> Health
Advertisement

High Uric Acid: ಹೆಚ್ಚಾಗುತ್ತಿರುವ ಯುರಿಕ್ ಆಸಿಡ್ ಪ್ರಮಾಣ ಈ ರೀತಿ ನಿಯಂತ್ರಿಸಿ, ಕೀಲು ನೋವಿನಿಂದ ಈ ರೀತಿ ಪರಿಹಾರ ಪಡೆಯಿರಿ

High Uric Acid: ಹೆಚ್ಚಿನ ಯೂರಿಕ್ ಆಸಿಡ್ ಮಟ್ಟವು ಉರಿಯೂತ ಮತ್ತು ಕೀಲು ನೋವನ್ನು ಉಂಟುಮಾಡಬಹುದು. ಹಾಗಾದರೆ ಬನ್ನಿ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಯಾವ ಆಯುರ್ವೇದ ಗಿಡಮೂಲಿಕೆಗಳು ಮತ್ತು ಮನೆ ಮದ್ದುಗಳನ್ನು ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

High Uric Acid: ಹೆಚ್ಚಾಗುತ್ತಿರುವ ಯುರಿಕ್ ಆಸಿಡ್ ಪ್ರಮಾಣ ಈ ರೀತಿ ನಿಯಂತ್ರಿಸಿ, ಕೀಲು ನೋವಿನಿಂದ ಈ ರೀತಿ ಪರಿಹಾರ ಪಡೆಯಿರಿ

ನವದೆಹಲಿ:  High Uric Acid - ಅಧಿಕ ಯೂರಿಕ್ ಆಮ್ಲವು ಕೀಲುಗಳ ಆರೋಗ್ಯದ (Joint Health) ಮೇಲೆ ಪರಿಣಾಮ ಬೀರುತ್ತದೆ. ಕೀಲುಗಳಿಗೆ ಸಂಬಂಧಿಸಿದ ಅನೇಕ ಕಂಡಿಶನ್ ಗಳಾದಂತಹ ಗೌಟ್ ಸಮಸ್ಯೆ, ಯೂರಿಕ್ ಆಸಿಡ್ ಹರಳುಗಳು ಕೀಲುಗಳಲ್ಲಿ (Joints) ಸಂಗ್ರಹವಾದಾಗ ಸಂಭವಿಸುತ್ತವೆ. ಉರಿಯೂತ ಮತ್ತು ಕೀಲು ನೋವನ್ನು (Joint Pain)  ತಡೆಗಟ್ಟಲು, ನಿಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವು ನಿಯಂತ್ರಣದಲ್ಲಿರುವುದು ಬಹಳ ಮುಖ್ಯ ಮುಖ್ಯ.

ಕೀಲು ನೋವು ನಿವಾರಣೆಗಾಗಿ

ಆಯುರ್ವೇದದ ಪ್ರಕಾರ, ಹಲವಾರು ಗಿಡಮೂಲಿಕೆಗಳಿದ್ದು, ಅವುಗಳನ್ನು ಬಳಸುವ ಮೂಲಕ ನೀವು ಯುರಿಕ್ ಆಸಿಡ್ (High Uric Acid) ಮಟ್ಟವನ್ನು ನಿಯಂತ್ರಿಸಬಹುದು. ಈ ಗಿಡಮೂಲಿಕೆಗಳ ಸೇವನೆಯಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ.

ಯೂರಿಕ್ ಆಸಿಡ್ ಮಟ್ಟ 
ಯೂರಿಕ್ ಆಸಿಡ್ ಒಂದು ನೈಸರ್ಗಿಕ ತ್ಯಾಜ್ಯ ಉತ್ಪನ್ನವಾಗಿದ್ದು, ಮೀನು, ಆಲ್ಕೋಹಾಲ್, ಸಮುದ್ರಾಹಾರ ಮತ್ತು ಕೆಲವು ವಿಧದ ಮಾಂಸದಂತಹ ಪ್ಯೂರಿನ್ ಹೊಂದಿರುವ ಆಹಾರವನ್ನು ಜೀರ್ಣಿಸಿಕೊಳ್ಳುವಾಗ ದೇಹದಲ್ಲಿ ರೂಪುಗೊಳ್ಳುತ್ತದೆ. ಮೂತ್ರಪಿಂಡಗಳು ಸಾಮಾನ್ಯವಾಗಿ ಯೂರಿಕ್ ಆಸಿಡ್ ಅನ್ನು ಫಿಲ್ಟರ್ ಮಾಡುತ್ತವೆ, ಆದರೆ ಅದರ ಅಧಿಕಪ್ರಮಾಣ ಕೀಲುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಈ ಉಪಾಯಗಳನ್ನು ಅನುಸರಿಸಿ
ಸಾಮಾನ್ಯವಾಗಿ  ಜೀವನಶೈಲಿ ಬದಲಾವಣೆ, ವ್ಯಾಯಾಮ, ಉತ್ತಮ ಆಹಾರ, ಸಾಕಷ್ಟು ನೀರು ಸೇವನೆ, ಇವೆಲ್ಲವೂ ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಇದೇ ವೇಳೆ ಕೆಲವು ಆಯುರ್ವೇದ ಪರಿಹಾರಗಳೂ ಕೂಡ ಇದ್ದು, ಅವುಗಳನ್ನು  ಅಳವಡಿಸಿಕೊಳ್ಳುವ ಮೂಲಕ ನೀವು ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಬಹುದು. 

1. ಪುನರ್ಣವ ಸಸ್ಯ ಕಷಾಯ - ಇದು ಕೀಲುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ಅಧಿಕ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಯೂರಿಕ್ ಆಸಿಡ್ ಅಧಿಕವಾಗಿದ್ದಾಗ, ಕೀಲುಗಳಲ್ಲಿ ಉರಿಯೂತ ಉಂಟಾಗುತ್ತದೆ. ದ್ರವಗಳು ಮತ್ತು ಜೀವಾಣುಗಳ ಶೇಖರಣೆಯಿಂದಾಗಿ ಇದು ಸಂಭವಿಸುತ್ತದೆ. ಪುನರ್ಣವ ಸಸ್ಯದ ಕಷಾಯ   ಸೇವನೆಯು ಈ ವಿಷವನ್ನು ಮೂತ್ರದ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.

2. ಗುಲಾಲ - ಇದರಿಂದ ಹಳುವು ರೀತಿಯ ಆಯುರ್ವೇದ ಔಷಧಿಗಳನ್ನು ತಯಾರಿಸಲಾಗುತ್ತದೆ. ಆಯುರ್ವೇದದಲ್ಲಿ ಇದನ್ನು ನೋವು ನಿವಾರಕ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಕೀಲುಗಳ ಸುತ್ತಲಿನ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಇದು ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ.

ಇದನ್ನ್ನೂ ಓದಿ- Basil Leaves Benefits : ಹಲವು ರೋಗಗಳಿಗೆ ರಾಮಬಾಣ ತುಳಸಿ ಎಲೆ : ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ಸೇವಿಸಿ ಪ್ರಯೋಜನ ಪಡೆಯಿರಿ!

3. ಅಮೃತ ಬಳ್ಳಿ - ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಇದು ತುಂಬಾ ಸಹಾಯಕವಾಗಿದೆ. ಇದು ಪಿತ್ತವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಪಿತ್ತ ಮತ್ತು ವಾತ ದೋಷವನ್ನು ಸಮತೋಲನಗೊಳಿಸುವ ಮೂಲಕ, ಇದು ರಕ್ತದಲ್ಲಿನ ಯೂರಿಕ್ ಆಸಿಡ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಉರಿಯೂತ ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ದೊಡ್ಡಪತ್ರೆ ಎಲೆ - ಇದು ಪರಿಣಾಮಕಾರಿ ಗಿಡಮೂಲಿಕೆಯಾಗಿದೆ, ಇದು ಕೀಲು ನೋವಿಗೆ ಪರಿಹಾರ ನೀಡುತ್ತದೆ. ದೊಡ್ಡ ಪತ್ರೆ ಪುಡಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಬೆಳಗ್ಗೆ ಕುದಿಸಿ. ಅದರ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.

ಇದನ್ನೂ ಓದಿ- Beauty Tips : ಮುಖದ ಸೌಂದರ್ಯಕ್ಕೆ ಈ ರೀತಿಯ ವಾರಕ್ಕೊಮ್ಮೆ ಮುಖಕ್ಕೆ ಬಳಸಿ ಟೊಮೆಟೊ

5. ಕಪ್ಪು ಕಿಶಮಿಶ್ - ಕಪ್ಪು ಕಿಷ್ಮಿಶ್ ಸೇವನೆ ಬೋನ್ ಡೆನ್ಸಿಟಿಗೆ ತುಮಾ ಲಾಭಕಾರಿ ಹಾಗೂ ಇದು ಆರ್ಥ್ರೈಟಿಸ್, ಗೌಟ್ ಸಮಸ್ಯೆಯನ್ನು ಪರಿಹರಿಸುತ್ತದೆ. 10 ರಿಂದ 15 ಕಪ್ಪು ಕಿಷ್ಮಿಶ್ ಅನ್ನು ನಿತ್ಯ ನೀರಿನಲ್ಲಿ ನೆನೆಹಾಕಿ ಹಾಗೂ ಬೆಳಗ್ಗೆ ಅವುಗಳನ್ನು ಸೇವಿಸಿ. ಅದಾ ನೀರನ್ನು ಎಸೆಯಬೇಡಿ. ಆ ನೀರಿನ ಸೇವನೆಯಿಂದಲೂ ಕೂಡ ನಿಮಗೆ ಲಾಭ ಸಿಗುತ್ತದೆ.

(ಇಲ್ಲಿ ನೀಡಲಾಗಿರುವ ಮಾಹಿತಿ, ಮನೆಮದ್ದು ಉಪಾಯಗಳು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಗಳನ್ನು ಪಡೆಯಿರಿ. ಝೀ ಹಿಂದುಸ್ತಾನ್ ಕನ್ನಡ ಈ ಸಲಹೆಗಳನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-  ಹಾಲಿನೊಂದಿಗೆ ಎಂದಿಗೂ ಈ ವಸ್ತುಗಳನ್ನು ಸೇವಿಸಲೇ ಬಾರದು, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More