Home> Health
Advertisement

Anger Control: ಕೋಪ ನಿಯಂತ್ರಿಸಲು ರೂಢಿಸಿಕೊಳ್ಳಿ ಈ ರೀತಿಯ ಆಹಾರ ಪದ್ಧತಿ

ನಾವು ನಮ್ಮ ನಿತ್ಯ ಜೀವನದಲ್ಲಿ ಬಹಳಷ್ಟು ಮಂದಿಯನ್ನು ನೋಡುತ್ತೇವೆ. ವಿನಾ ಕಾರಣ ಅವರಿಗೆ ಕೋಪ ಬರುತ್ತದೆ. ಅವರ ಈ ಸುದ್ದಿ ನೋಡಿ. ಇದು ನಿಮ್ಮ ಕೋಪವನ್ನು ನಿಯಂತ್ರಿಸಲು ಸಹಾಯ ಮಾಡಬಹುದು. 

Anger Control: ಕೋಪ ನಿಯಂತ್ರಿಸಲು ರೂಢಿಸಿಕೊಳ್ಳಿ ಈ ರೀತಿಯ ಆಹಾರ ಪದ್ಧತಿ

ಒಬ್ಬ  ವ್ಯಕ್ತಿಯ ಜೀವನದಲ್ಲಿ ವಯಸ್ಸು ಹೆಚ್ಚಾದಂತೆ ಜವಾಬ್ದಾರಿಗಳು ಕೂಡಾ ಹೆಚ್ಚಾಗುತ್ತವೆ. ಜವಾಬ್ದಾರಿಗಳು ಹೆಚ್ಚಾದಂತೆ ಉದ್ವೇಗ, ಕೋಪ, ಕಿರಿಕಿರಿ ಸಾಮಾನ್ಯವಾಗುತ್ತದೆ. ಆದರೆ ಅತಿಯಾದ ಕಿರಿಕಿರಿಯಿಂದ, ಕೆಲಸದಲ್ಲಿನ ಸಮತೋಲನವು ಸಂಪೂರ್ಣವಾಗಿ ಹದಗೆಡುತ್ತದೆ. ಹೀಗಾದಾಗ ಮಾತು ಮಾತಿಗೂ ಕೋಪಗೊಳ್ಳುವುದು, ಕಿರುಚಾಡುವುದು ಮಾಡಲು ಶುರು ಮಾಡುತ್ತಾರೆ. 

ಇದನ್ನು ಓದಿ: ಈ ಹೆಸರಿನ ಹುಡುಗರ ಮೇಲೆ ಜೀವನ ಪೂರ್ತಿ ಇರುತ್ತದೆ ಧನ ಕುಬೇರನ ಆಶೀರ್ವಾದ..!

ನಾವು ನಮ್ಮ ನಿತ್ಯ ಜೀವನದಲ್ಲಿ ಬಹಳಷ್ಟು ಮಂದಿಯನ್ನು ನೋಡುತ್ತೇವೆ. ವಿನಾ ಕಾರಣ ಅವರಿಗೆ ಕೋಪ ಬರುತ್ತದೆ. ಅವರ ಈ ಸುದ್ದಿ ನೋಡಿ. ಇದು ನಿಮ್ಮ ಕೋಪವನ್ನು ನಿಯಂತ್ರಿಸಲು ಸಹಾಯ ಮಾಡಬಹುದು. 

ದೇಹದಲ್ಲಿ ಟ್ರಾನ್ಸ್ ಫ್ಯಾಟಿ ಆಸಿಡ್  ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದಾಗ, ವ್ಯಕ್ತಿಯ ಕೋಪವೂ ಹೆಚ್ಚಾಗುತ್ತದೆ. ಇದು ವ್ಯಕ್ತಿಯ ಮೆದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದ ಎನ್ನುವ ಅಂಶ ಅನೇಕ ಸಂಶೋಧನೆಗಳಲ್ಲಿ ಕಂಡುಬಂದಿದೆ. ಇದಕ್ಕೆ ವಿರುದ್ಧವಾಗಿ, ಒಮೆಗಾ 3 ಫ್ಯಾಟಿ ಆಸಿಡ್ ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹ ಒಮೆಗಾ 3 ಫ್ಯಾಟಿ ಆಸಿಡ್ ಪಡೆಯಬೇಕಾದರೆ ಕೆಲವೊಂದು ಆಹಾರ ವಸ್ತುಗಳನ್ನು ಸೇವಿಸಬೇಕು. 

  • ನಿಮ್ಮ ಆಹಾರದಲ್ಲಿ ವಿವಿಧ ಬಣ್ಣಗಳ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ
  • ಅಣಬೆ, ಬೀಜ, ವಾಲ್‌ನಟ್‌ಗಳಂತಹ ಒಮೆಗಾ 3 ಫ್ಯಾಟಿ ಆಸಿಡ್ ಇರುವಂಥಹ ಆಹಾರವನ್ನು ಸೇವಿಸಿ
  • ಮೊಟ್ಟೆ, ಮೀನು ಮತ್ತು ಕೋಳಿಯಂತಹ ಡೋಪಮೈನ್ ಆಹಾರವು ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 
  • ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಪಾಲಕ್ ಮುಂತಾದ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.
  • ಸಾಧ್ಯವಾದಷ್ಟು,  ಸಿಹಿ ಪದಾರ್ಥಗಳನ್ನು ತಿನ್ನುವುದನ್ನು  ಕಡಿಮೆ ಮಾಡಿ. 
  • ಹಣ್ಣನ್ನು ಜ್ಯೂಸ್ ತೆಗೆದು ಕುಡಿಯುವ ಬದಲು, ಹಾಗೆಯೇ ತಿನ್ನಿ. 
  • ವಿಟಮಿನ್ ಡಿ ಪಡೆಯಲು ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.

ಕೋಪವನ್ನು ನಿಯಂತ್ರಿಸಲು ಈ ಆಹಾರವನ್ನು ಸೇವಿಸಬೇಡಿ : 
1. ಡ್ರೈ ಫ್ರುಟ್ಸ್ : ಡ್ರೈ ಫ್ರುಟ್ಸ್ ಗಳು ಬಹಳ ಹೀಟ್ ಆಗಿರುತ್ತವೆ. ಇದನ್ನು ಸೇವಿಸುವುದರಿಂದ ಮನಸ್ಸಿನಲ್ಲಿ ಕೋಪ ಹೆಚ್ಚಾಗಬಹುದು. ಹಾಗಾಗಿ ಡ್ರೈ ಫ್ರುಟ್ಸ್  ಅನ್ನು ಹಾಗೆಯೇ ತಿನ್ನಬೇಡಿ. ಇದನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ನಂತರ ತಿನ್ನುವುದು ಉತ್ತಮ.

2. ಬದನೆ : ಬದನೆಕಾಯಿಯನ್ನು ಹೆಚ್ಚಿನ  ಪ್ರಮಾಣದಲ್ಲಿ ತಿನ್ನಬೇಡಿ. ಏಕೆಂದರೆ ಅದು ಕೋಪವನ್ನು ಹೆಚ್ಚಿಸುತ್ತದೆ.

​ಇದನ್ನು ಓದಿ: ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಪಟ್ಟಿ ಬಿಡುಗಡೆ- ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ

3. ಟೊಮ್ಯಾಟೊ : ನಿಮ್ಮ ದೇಹದಲ್ಲಿ ಶಾಖವನ್ನು ಟೊಮೇಟೊ ಹೆಚ್ಚಿಸಬಹುದು. ಇದನ್ನು ಹೆಚ್ಚು ತಿನ್ನುವುದರಿಂದ ಕೋಪವೂ ಬರುತ್ತದೆ. ಹಾಗಾಗಿ ನೀವು ಬಹಳ ಬೇಗ ಕೋಪಗೊಳ್ಳುವವರಾದರೆ, ಟೊಮೆಟೊವನ್ನು ಹೆಚ್ಚು ತಿನ್ನಬೇಡಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More