Home> Health
Advertisement

Health Tips: ಈ ಐದು ಹಣ್ಣುಗಳ ಸೇವನೆಯಿಂದ ಈ ಕಾಯಿಲೆಗಳು ದೂರಾಗುತ್ತವೆ

Health Benefits Of Fruits: ಕೆಲ ಕಾಯಿಲೆಗಳನ್ನು ನಾವು ನಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಮೂಲಕ  ಗುಣಪಡಿಸಿಕೊಳ್ಳಬಹುದು. ಇದೇ  ರೀತಿ ಕೆಲ ಹಣ್ಣುಗಳಿದ್ದು,  ಅವುಗಳ ಸೇವನೆಯಿಂದ ಅನೇಕ ರೀತಿಯ ಕಾಯಿಲೆಗಳಲ್ಲಿ ನಮಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ.

Health Tips: ಈ ಐದು ಹಣ್ಣುಗಳ ಸೇವನೆಯಿಂದ ಈ ಕಾಯಿಲೆಗಳು ದೂರಾಗುತ್ತವೆ

Top 5 Fruits - ಸಾಮಾನ್ಯವಾಗಿ ಜ್ವರ ಬಂದಾಗ ನಮ್ಮ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದರ ಜೊತೆಗೆ ಚಳಿಯ ಅನುಭವ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜೀರ್ಣಕ್ರಿಯೆ ಸಮಸ್ಯೆ ಎದುರಾಗುತ್ತದೆ. ಹೀಗಿರುವಾಗ ಹಣ್ಣುಗಳನ್ನು ಸೇವಿಸಬೇಕು. ದುರ್ಬಲ ರೋಗನಿರೋಧಕ ಶಕ್ತಿಯಿಂದ ಒಂದು ವೇಳೆ ನಿಮಗೆ ಜ್ವರ ಬಂದಿದ್ದರೆ, ಹಣ್ಣುಗಳನ್ನು ಸೇವಿಸುವ ಮೂಲಕ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನೀವು ಜ್ವರದಿಂದ ಹೊರಬರಬಹುದು. ಇಂದು ನಾವು ನಿಮಗೆ ಹೇಳಲು ಹೊರಟಿರುವ ಕೆಲ ಹಣ್ಣುಗಳನ್ನು ಸೇವಿಸುವ ಮೂಲಕ ನೀವು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹಲವು ರೀತಿಯ ಕಾಯಿಲೆಗಳನ್ನು ತಪ್ಪಿಸಬಹುದು. ಹಾಗಾದರೆ ಬನ್ನಿ ಆ ಹಣ್ಣುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. 

ಕಿತ್ತಳೆ ಹಣ್ಣು

ಹಣ್ಣುಗಳಲ್ಲಿ ನೀವು ಕಿತ್ತಳೆ ಸೇವಿಸಬೇಕು. ಕಿತ್ತಳೆಯಲ್ಲಿ ವಿಟಮಿನ್ ಸಿ ಇದ್ದು ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಎರಡರಿಂದ ಮೂರು ಕಿತ್ತಳೆ ಹಣ್ಣು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ.

ಬೆರ್ರಿ ಹಣ್ಣುಗಳು
ಜ್ವರದ ಸಮಯದಲ್ಲಿ ನಿಮ್ಮ ಆಹಾರದಲ್ಲಿ ನೀವು ಸ್ಟ್ರಾಬೆರಿ, ರಾಸ್ಬೆರ್ರಿ, ಬ್ಲ್ಯೂಬೆರಿ ಹಣ್ಣುಗಳನ್ನು ಸಹ ಸೇವಿಸಬಹುದು. ಬೆರ್ರಿ ಹಣ್ಣುಗಳು ಹೇರಳ ಪ್ರಮಾಣದಲ್ಲಿ ಫೈಬರ್, ವಿಟಮಿನ್ ಸಿ ಹೊಂದಿರುತ್ತವೆ, ಇವು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನೀವು ಇವುಗಳ ಜ್ಯೂಸ್ ಅನ್ನು ಕೂಡ ತಯಾರಿಸಬಹುದು.

ಮಾವು
ಮಾವು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತದೆ. ಮಾವಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದೆ, ಆದರೆ ಮಾವಿನಲ್ಲಿನ ಫೈಬರ್ ಅಂಶದಿಂದಾಗಿ ಅದನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಮಾವು ನಿಮ್ಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Mango Shake Side Effects : ಬೇಸಿಗೆಯಲ್ಲಿ ಅತಿಯಾಗಿ ಸೇವಿಸದಿರಿ ಮ್ಯಾಂಗೋ ಶೇಕ್, ಎದುರಾಗಬಹುದು ಈ ಸಮಸ್ಯೆ

ಕೀವಿ ಹಣ್ಣು
ಕೀವಿಯಲ್ಲಿ ವಿಟಮಿನ್ ಸಿ ಮತ್ತು ಇ ಗಳಿರುತ್ತವೆ. ಕೀವಿಯಲ್ಲಿನ ಪ್ಯಾಥೋಜನ್ ಗಳು ನಿಮ್ಮ  ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ಇನ್ನೊಂದೆಡೆ ಕೀವಿಯಲ್ಲಿ ಪೊಟ್ಯಾಸಿಯಮ್ ಕೂಡ ಇರುತ್ತದೆ. ಇದರ ಸೇವನೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಬಿಪಿ  ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ-ಹೈ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ನೈಸರ್ಗಿಕ ವಿಧಾನಗಳನ್ನೊಮ್ಮೆ ಟ್ರೈ ಮಾಡಿ...

ನಿಂಬೆ ಹಣ್ಣು
ಜ್ವರದ ಸಂದರ್ಭದಲ್ಲಿ, ನಿಂಬೆ ರಸವನ್ನು ಸೇವಿಸಬೇಕು. ಇದರಲ್ಲಿ ಹೇರಳ  ಪ್ರಮಾಣದ ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸ್ವಲ್ಪ ಮಟ್ಟಿಗೆ ವೈರಸ್ ಪ್ರಭಾವವನ್ನು ಅನ್ನು ಕಡಿಮೆ ಮಾಡುವಲ್ಲಿ ಶಕ್ತಿಯನ್ನು ನೀಡುತ್ತದೆ. ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ನೀವು ಸೇವಿಸಬಹುದು. ಹಣ್ಣುಗಳನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬೆಳಗಿನ ಉಪಾಹಾರದ ನಂತರ ಅಥವಾ ಸಂಜೆಯ ನಂತರ ನೀವು ಹಣ್ಣುಗಳನ್ನು ಸೇವಿಸಬಹುದು. ಆದರೆ ರಾತ್ರಿ ವೇಳೆಯಲ್ಲಿ ಹಣ್ಣುಗಳ ಸೇವನೆಯನ್ನು ತಪ್ಪಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More