Home> Health
Advertisement

Health benefits of banana: ಪ್ರತಿದಿನ ಒಂದೇ ಒಂದು ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ..?

Health Benefits of Banana: ಬಾಳೆಹಣ್ಣು ಫೈಬರ್‌ನ ಉತ್ತಮ ಮೂಲವಾಗಿದ್ದು, ಮಲಗುವ ಮುನ್ನ ಬಾಳೆಹಣ್ಣು ಸೇವನೆಯಿಂದ ಹಸಿವಿನ ಸಂಕಟವನ್ನು ತಡೆಯುತ್ತದೆ. ಇದು ಉತ್ತಮ ನಿದ್ರೆಗೂ ಸಹ ಸಹಕಾರಿಯಾಗಿದೆ.

Health benefits of banana: ಪ್ರತಿದಿನ ಒಂದೇ ಒಂದು ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ..?

Health Benefits of Bananas: ಬಾಳೆಹಣ್ಣು ಸೇವನೆಯಿಂ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಬಾಳೆಹಣ್ಣಿನಲ್ಲಿ ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಬಾಳೆಹಣ್ಣು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೆಂದು ವೈದ್ಯರು ಸಲಹೆ ನೀಡುತ್ತಾರೆ. ಅದರಲ್ಲೂ ಮಲಗುವ ಮುನ್ನ ಒಂದೇ ಒಂದು ಬಾಳೆಹಣ್ಣು ತಿನ್ನುವುದಿರಂದ ಹಲವಾರು ಲಾಭಗಳಿವೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಬಾಳೆಹಣ್ಣು ಪೊಟ್ಯಾಸಿಯಂ, ವಿಟಮಿನ್‌ C, ವಿಟಮಿನ್‌ B6, ಫೈಬರ್‌ ಮತ್ತು ಮ್ಯಾಂಗನೀಸ್‌ನಂತಹ ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿರುತ್ತದೆ. ಮಲಗುವ ಮುನ್ನ ಒಂದೇ ಒಂದು ಬಾಳೆಹಣ್ಣು ಸೇವನೆಯಿಂದ ರಾತ್ರಿಯಿಡೀ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಅಡಚಣೆಯನ್ನು ತಡೆಯಬಹುದು. 

ಇದನ್ನೂ ಓದಿ: ನೀವು ಚಹಾ ಪ್ರಿಯರೇ..? ಹಾಗಿದ್ದಲ್ಲಿ ತಪ್ಪದೇ ಈ ತಜ್ಞರ ಸಲಹೆಗಳನ್ನು ನೋಡಿ 

ಬಾಳೆಹಣ್ಣಿನಲ್ಲಿ ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ಕೂಡ ಅಧಿಕವಾಗಿದೆ. ಇವು ಸ್ನಾಯುಗಳನ್ನು ವಿಶ್ರಾಂತಿ ಮಾಡುವ ಖನಿಜಗಳನ್ನು ಹೊಂದಿರುತ್ತವೆ. ಮಲಗುವ ಮುನ್ನ ಬಾಳೆಹಣ್ಣು ಸೇವನೆಯಿಂದ ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ಮಾಡಲು ಮತ್ತು ಶಾಂತ ನಿದ್ರೆ ಮಾಡಲು ಸಹಕಾರಿಯಾಗಿದೆ. 

ಬಾಳೆಹಣ್ಣು ಫೈಬರ್‌ನ ಉತ್ತಮ ಮೂಲವಾಗಿದ್ದು, ಮಲಗುವ ಮುನ್ನ ಬಾಳೆಹಣ್ಣು ಸೇವನೆಯಿಂದ ಹಸಿವಿನ ಸಂಕಟವನ್ನು ತಡೆಯುತ್ತದೆ. ಇದು ಉತ್ತಮ ನಿದ್ರೆಗೂ ಸಹ ಸಹಕಾರಿಯಾಗಿದೆ. ರಾತ್ರಿ ಊಟದ ನಂತರ ಒಂದು ಬಾಳೆಹಣ್ಣು ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಬಾಳೆಹಣ್ಣು ಸೇವನೆಯಿಂದ ನೀವು ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. 

ಇದನ್ನೂ ಓದಿ: ಈ ಒಣಹಣ್ಣು ನೆನೆಸಿಟ್ಟು ಸೇವಿಸಿದರೆ ಸಾಕು… ಪದೇ ಪದೇ ಕಾಡುವ ಮೈಗ್ರೇನ್ ತಲೆನೋವು ದೂರವಾಗುತ್ತೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Read More