Home> Health
Advertisement

ಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ

ICC T20I Team Rankings: ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ, ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಐಸಿಸಿ ಟಿ20 ತಂಡ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಈ ದೊಡ್ಡ ಲಾಭ ಸಿಕ್ಕಿದೆ

ಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ

ICC T20I Team Rankings: ಇನ್ನೇನು T20 ವಿಶ್ವಕಪ್ ಪ್ರಾರಂಭವಾಗಲು ಕೇವಲ ದಿನಗಳಷ್ಟೇ ಬಾಕಿ ಉಳಿದಿವೆ. ಈ ಐಸಿಸಿ ಈವೆಂಟ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಹೋಸ್ಟಿಂಗ್ ಅಡಿಯಲ್ಲಿ ಜೂನ್ 2 ರಿಂದ ಪ್ರಾರಂಭವಾಗುತ್ತದೆ. ಇದಕ್ಕೂ ಮುನ್ನ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಐಸಿಸಿ ಭರ್ಜರಿ ಗಿಫ್ಟ್ ನೀಡಿದೆ.

ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ, ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಐಸಿಸಿ ಟಿ20 ತಂಡ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಈ ದೊಡ್ಡ ಲಾಭ ಸಿಕ್ಕಿದೆ.

ಇದನ್ನೂ ಓದಿ: ಕಾವ್ಯಾ ಮಾರನ್ ಎಷ್ಟೊಂದು ಸಿರಿವಂತೆ ಗೊತ್ತಾ? ವಿರಾಟ್ ಕೊಹ್ಲಿಗಿಂತಲೂ ದುಪ್ಪಟ್ಟು ಆಸ್ತಿ ಹೊಂದಿರುವ ಈಕೆ ಕನ್ನಡದ ಪ್ರಖ್ಯಾತ ಚಾನೆಲ್’ವೊಂದರ ಮಾಲಕಿ

ಮುಂಬರುವ ಟೂರ್ನಿಗೂ ಮುನ್ನ 2014 ಮತ್ತು 2016ರ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್’ಗೆ ಐಸಿಸಿ ಉಡುಗೊರೆ ನೀಡಿ ನಾಲ್ಕನೇ ಸ್ಥಾನಕ್ಕೆ ಏರಿದೆ. 254 ರೇಟಿಂಗ್ ಪಾಯಿಂಟ್‌’ಗಳೊಂದಿಗೆ ವೆಸ್ಟ್ ಇಂಡೀಸ್ ತಂಡ ಇತ್ತೀಚಿನ ಐಸಿಸಿ ಟಿ20 ತಂಡ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ವೆಸ್ಟ್ ಇಂಡೀಸ್ ತಂಡ ಮುಂಬರುವ ಟಿ20 ವಿಶ್ವಕಪ್ ಅನ್ನು ರೋವ್‌ಮನ್ ಪೊವೆಲ್ ನಾಯಕತ್ವದಲ್ಲಿ ಆಡಲಿದ್ದು, ಜೂನ್ 2 ರಂದು ಗಯಾನಾದಲ್ಲಿ ಪಪುವಾ ನ್ಯೂಗಿನಿ ತಂಡದ ವಿರುದ್ಧ ಮೊದಲ ಪಂದ್ಯ ನಡೆಯಲಿದೆ.

ಅಗ್ರಸ್ಥಾನದಲ್ಲಿ ಭಾರತ:

ಟಿ20 ತಂಡಗಳ ಶ್ರೇಯಾಂಕದಲ್ಲಿ ಭಾರತ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ. ಟೀಂ ಇಂಡಿಯಾ 264 ರೇಟಿಂಗ್ ಅಂಕಗಳನ್ನು ಪಡೆದಿದ್ದು, ಆಸ್ಟ್ರೇಲಿಯಾ ತಂಡ 257 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಪಾಕಿಸ್ತಾನ ಕೂಡ ಇತ್ತೀಚಿನ ಶ್ರೇಯಾಂಕದಲ್ಲಿ ಲಾಭ ಗಳಿಸಿದೆ. ತಂಡ ಒಂದು ಸ್ಥಾನ ಮೇಲೇರಿ ಆರನೇ ಸ್ಥಾನಕ್ಕೆ ತಲುಪಿದೆ. ಪಾಕಿಸ್ತಾನ ತಂಡ 244 ರೇಟಿಂಗ್ ಅಂಕಗಳನ್ನು ಪಡೆದಿದ್ದು, ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಮೂರು ಸ್ಥಾನ ಕುಸಿದು 244 ರೇಟಿಂಗ್ ಅಂಕಗಳನ್ನು ಪಡೆದಿದೆ.

ಇದನ್ನೂ ಓದಿ: ಗರ್ಭಿಣಿಯರು ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು! ಆರೋಗ್ಯಕ್ಕೆ ಒಳ್ಳೆಯದಲ್ಲ

ಟಿ20 ವಿಶ್ವಕಪ್‌’ನ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಈ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 254 ರೇಟಿಂಗ್ ಅಂಕಗಳನ್ನು ಹೊಂದಿದೆ. ನ್ಯೂಜಿಲೆಂಡ್ 250 ರೇಟಿಂಗ್ ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಕ್ರಮವಾಗಿ 8, 9 ಮತ್ತು 10 ನೇ ಸ್ಥಾನಗಳೊಂದಿಗೆ ಟಾಪ್-10 ನಲ್ಲಿ ಉಳಿದಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More