Home> Health
Advertisement

ಮೂಳೆ & ಸ್ನಾಯುಗಳನ್ನು ಬಲಗೊಳಿಸಲು ನಿಮ್ಮ ಮಕ್ಕಳಿಗೆ ಈ ಆಹಾರಗಳನ್ನು ನೀಡಿ

Children Health: ಯುವ ಪೀಳಿಗೆ ಆರೋಗ್ಯಕರವಾಗಿರಬೇಕೆಂದರೆ ಅವರ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿವುದು ಬಹಳ ಮುಖ್ಯ. ನೀವು ನಿಮ್ಮ ಮಕ್ಕಳು ಆರೋಗ್ಯಕರವಾಗಿರಬೇಕು, ಮಕ್ಕಳಲ್ಲಿ ಮೂಳೆಗಳು, ಸ್ನಾಯುಗಳು ಬಲಿಷ್ಠವಾಗಿರಬೇಕು  ಎಂದು ಬಯಸಿದರೆ ಅವರ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದು ಬಹಳ ಅಗತ್ಯ. 

ಮೂಳೆ & ಸ್ನಾಯುಗಳನ್ನು ಬಲಗೊಳಿಸಲು ನಿಮ್ಮ ಮಕ್ಕಳಿಗೆ ಈ ಆಹಾರಗಳನ್ನು ನೀಡಿ

Foods For Strengthen Bones and Muscles: ಪೋಷಕರಿಗೆ ಮಕ್ಕಳಿಗೆ ಊಟ ಮಾಡಿಸುವುದು ಯಾವುದೇ ದೊಡ್ಡ ಸವಾಲಿಗಿಂತ ಕಡಿಮೆ ಇಲ್ಲ. ನಿಮ್ಮ ಮಗುವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಸಲು ನೀವು ಬಯಸಿದರೆ, ಅವರ ಆಹಾರದಲ್ಲಿ ಸರಿಯಾದ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯವಾಗಿದೆ. ಮಕ್ಕಳ ಮೂಳೆಗಳು ಮತ್ತು ಸ್ನಾಯುಗಳು ಬಲಿಷ್ಠವಾಗಿರಬೇಕು ಎಂದು ಬಯಸಿದರೆ ಅದಕ್ಕಾಗಿ ಅವರು ಯಾವ ಆಹಾರಗಳನ್ನು ಸೇವಿಸಬೇಕು. ಮಕ್ಕಳಿಗೆ ನಿತ್ಯದ ಡಯಟ್ನಲ್ಲಿ ಯಾವ ಆಹಾರಗಳನ್ನು ನೀಡಬೇಕು ಎಂದು ತಿಳಿಯಿರಿ. 

ಮಕ್ಕಳಲ್ಲಿ ಬಲಿಷ್ಠ ಮೂಳೆ, ಸ್ನಾಯುಗಳಿಗಾಗಿ ಈ ಆಹಾರಗಳನ್ನು ತಪ್ಪದೇ ನೀಡಿ:- 

* ಹಾಲು:
ಹಾಲು ಒಂದು ಸೂಪರ್ ಫುಡ್ ಎಂದು ನಿಮಗೆ ತಿಳಿದೇ ಇದೆ. ನೀವು ನಿಮ್ಮ ಮಕಲು ಬಲವಾದ ಮೂಳೆ ಮತ್ತು ಸ್ನಾಯುಗಳನ್ನು ಹೊಂದಬೇಕು ಎಂದು ಬಯಸಿದರೆ ನಿತ್ಯ ಬೆಳಿಗ್ಗೆ-ರಾತ್ರಿ ತಪ್ಪದೇ ಅವರಿಗೆ ಒಂದು ಲೋಟ ಹಾಲು ನೀಡಿ.

*  ಹಸಿರು ಸೊಪ್ಪು ತರಕಾರಿಗಳು:
ಮೂಳೆಗಳು ಬಲಿಷ್ಠವಾಗಿರಬೇಕು ಎಂದಾದರೆ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಇದಕ್ಕಾಗಿ ನಿತ್ಯ ಮಕ್ಕಳಿಗೆ ಹಸಿರು ಸೊಪ್ಪು ತರಕಾರಿಗಳನ್ನು ನೀಡಿ.

ಇದನ್ನೂ ಓದಿ- ಬೇಸಿಗೆಯಲ್ಲಿ ಸೌತೆಕಾಯಿ ಸೇವನೆಯಿಂದ ಸಿಗುತ್ತೆ ಈ ಅದ್ಭುತ ಪ್ರಯೋಜನಗಳು 

* ಪ್ರೋಟೀನ್ ಭರಿತ ಆಹಾರ:
ಮಕ್ಕಳ ಆರೋಗ್ಯ ಪ್ರೋಟೀನ್ ಸಹ ತುಂಬಾ ಮುಖ್ಯ. ಮಾಂಸಾಹಾರದಲ್ಲಿ ಪ್ರೋಟೀನ್ ಹೆಚ್ಚಾಗಿ ಕಂಡು ಬರುವುದರಿಂದ ಇದೂ ಸಹ ಮಕ್ಕಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

* ಬ್ರೊಕೊಲಿ:
ಬ್ರೊಕೊಲಿಯಲ್ಲಿ ಜೀವಸತ್ವಗಳು, ಬೀಟಾ ಕ್ಯಾರೋಟಿನ್, ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಸಮೃದ್ಧವಾಗಿದೆ. ಮಕ್ಕಳಿಗೆ ದೈನಂದಿನ ಆಹಾರದಲ್ಲಿ ಬ್ರೊಕೋಲಿಯನ್ನು ನೀಡುವುದರಿಂದ ಇದು ಅವರ ದೇಹವನ್ನು ಸದೃಢವಾಗಿಸಲು ತುಂಬಾ ಪ್ರಯೋಜನಕಾರಿ ಆಗಿದೆ. 

* ವಿಟಮಿನ್ ಡಿ ಆಹಾರಗಳು: 
ಆರೋಗ್ಯಕರ ದೇಹಕ್ಕೆ ವಿಟಮಿನ್ ಡಿ ತುಂಬಾ ಮುಖ್ಯ. ಇದಕ್ಕಾಗಿ ಮಕ್ಕಳ ಆಹಾರದಲ್ಲಿ ಮೊಟ್ಟೆ, ಕಿತ್ತಳೆ, ಅಣಬೆಗಳು, ಕಾಡ್ ಲಿವರ್ ಎಣ್ಣೆ, ಧಾನ್ಯಗಳು, ವಿಟಮಿನ್ ಡಿ ಪೂರಕಗಳನ್ನು ನೀಡಬಹುದು. 

ಇದನ್ನೂ ಓದಿ- ಚಿಕನ್ ಅಥವಾ ಪನೀರ್ ಇದರಲ್ಲಿ ತೂಕ ನಷ್ಟಕ್ಕೆ ಯಾವುದು ಬೆಸ್ಟ್ ?

* ಹಣ್ಣುಗಳು: 
ಇದಲ್ಲದೆ, ನೀವು ನಿತ್ಯ ನಿಮ್ಮ ಮಕ್ಕಳಿಗೆ ಸೇಬು, ಕಿತ್ತಳೆ, ದ್ರಾಕ್ಷಿ ಮತ್ತು ಬಾಳೆಹಣ್ಣು ಇದಲ್ಲದೆ ಋತುಮಾನದ ಹಣ್ಣುಗಳನ್ನು ನೀಡಿ. ಇದರಿಂದ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರುತ್ತಾರೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More