Home> Health
Advertisement

ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ತಿನ್ನಲು ಹೋಗಬೇಡಿ ಈ ಆಹಾರಗಳನ್ನು , ಲಾಭಕ್ಕಿಂತ ನಷ್ಟವೇ ಹೆಚ್ಚು

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಈ ಋತುವಿನಲ್ಲಿ ಪರಿಸರದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಬ್ಯಾಕ್ಟೀರಿಯಾ ಮತ್ತು ರೋಗಾಣುಗಳ ಸಂತಾನೋತ್ಪತ್ತಿಯೂ ಹೆಚ್ಚಾಗಿರುತ್ತದೆ. 

ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ತಿನ್ನಲು ಹೋಗಬೇಡಿ ಈ ಆಹಾರಗಳನ್ನು , ಲಾಭಕ್ಕಿಂತ ನಷ್ಟವೇ  ಹೆಚ್ಚು

ನವದೆಹಲಿ : Do not eat these food in monsoon : ಹಸಿರು ತರಕಾರಿಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಎಲ್ಲಾ ಕಾಲದಲ್ಲೂ ಹಸಿರು ತರಕಾರಿಗಳನ್ನು (Green vegetables)  ಸೇವಿಸುವಂತೆ ಸೂಚಿಸಲಾಗುತ್ತದೆ.  ಆದರೂ ಮಳೆಗಾಲದಲ್ಲಿ ಇವುಗಳಲ್ಲಿ ಕೆಲವೊಂದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಳೆಗಾಲದಲ್ಲಿ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಟಾಕ್ಸಿನ್ ಮಟ್ಟ ಹೆಚ್ಚುತ್ತದೆ  ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.   

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಈ ಋತುವಿನಲ್ಲಿ ಪರಿಸರದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಬ್ಯಾಕ್ಟೀರಿಯಾ (Bacteria) ಮತ್ತು ರೋಗಾಣುಗಳ ಸಂತಾನೋತ್ಪತ್ತಿಯೂ ಹೆಚ್ಚಾಗಿರುತ್ತದೆ. ಮಳೆಗಾಲದಲ್ಲಿ ಕೀಟ, ಹುಳ ಹುಪ್ಪಡಿಗಳು ಅಧಿಕ ಸಂಖ್ಯೆಯಲ್ಲಿರುತ್ತವೆ. ಅವುಗಳ ಸಂತಾನೋತ್ಪತ್ತಿಗೆ ಮಳೆಗಾಲ ಉತ್ತಮವಾದ ಕಾಲವಾಗಿರುತ್ತವೆ.  ಹಾಗೆಯೇ  ಹಸಿರು ಎಲೆ ತರಕಾರಿಗಳು ಹೇಳಿ ಮಾಡಿಸಿದ ಜಾಗವಾಗಿರುತ್ತದೆ. ಆದ್ದರಿಂದ, ಈ ಋತುವಿನಲ್ಲಿ ಅವುಗಳನ್ನು ತಿನ್ನದಿರುವುದು ಉತ್ತಮ (Do not consume these vegetables in monsoon).

ಇದನ್ನೂ ಓದಿ : Children's Health Tips : ಮಳೆಗಾಲದಲ್ಲಿ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಪ್ರಮುಖ ಸಲಹೆಗಳು..!

ಮಳೆಗಾಲದಲ್ಲಿ ಈ ತರಕಾರಿಗಳ ಸೇವನೆ ಬೇಡ : 
ಮಳೆಗಾಲದಲ್ಲಿ ಪಾಲಕ್ (Palak), ಮೆಂತ್ಯೆ, ಬಸಳೆ, ಬದನೇಕಾಯಿ (Brinjal) , ಎಲೆಕೋಸು, ಹೂ ಕೋಸು ಇತ್ಯಾದಿಗಳನ್ನು ತಿನ್ನುವುದನ್ನು ತಪ್ಪಿಸುವುದು  ಒಳ್ಳೆಯದು. ಈ ಋತುವಿನಲ್ಲಿ ಅವುಗಳನ್ನು ತಿನ್ನುವುದು ಹಾನಿಕಾರಕವಾಗಿ ಪರಿಣಮಿಸಬಹುದು. ಯಾಕೆಂದರೆ ಮೊದಲೇ ಹೇಳಿದ ಹಾಗೆ, ಈ ತರಕಾರಿಗಳಲ್ಲಿ ಕೀಟಗಳ ಪತಂಗಗಳು ಹೆಚ್ಚಿನ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ಈ ಸಮಸ್ಯೆಗಳು ಎದುರಾಗಬಹುದು :
ಮಳೆಗಾಲದಲ್ಲಿ (Food for rainy season) ಎಲೆ ತರಕಾರಿಗಳನ್ನು ಸೇವಿಸಿದರೆ, ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅತಿಸಾರ, ಅಸಿಡಿಟಿ  (Acidity), ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಡಬಹುದು. ಈ ಸಮಯದಲ್ಲಿ 12 ಗಂಟೆಗಳವರೆಗೆ  ಉಪವಾಸ ಮಾಡುವ ಮೂಲಕ, ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಹೀಗೆ ಮಾಡುವುದರಿಂದ ದೇಹದಲ್ಲಿ ಡಿಟಾಕ್ಸಿಂಗ್ (detoxing)ಪ್ರಕ್ರಿಯೆ ಪ್ರಾರಂಭವಾಗುತ್ತದೆ ಮತ್ತು ದೇಹವು ಅನುಪಯುಕ್ತ ಕೋಶಗಳನ್ನು ಸ್ವಚ್ಛಗೊಳಿಸಲು ಆರಂಭಿಸುತ್ತದೆ. ಡಾ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಈ ದಿನಗಳಲ್ಲಿ ಕಡಿಮೆ ತಿನ್ನುವ ಮೂಲಕ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ಹೆಚ್ಚು ತಿನ್ನುವ ಜನರು ಉದರದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ : Life Insurance : ಮಳೆಗಾಲದಲ್ಲಿ ಇರಲಿ ಈ 3 'ಜೀವ ವಿಮಾ' ಪಾಲಿಸಿಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More