Home> Health
Advertisement

ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತಾ?

Kidney Stone: ನಮ್ಮಲ್ಲಿ ಹಲವರು ಟೊಮ್ಯಾಟೊ ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರಬಹುದು ಎಂದು ನಂಬುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾದರೆ ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರುವುದು ಎಷ್ಟು ಸತ್ಯ ಎಂಬ ಬಗ್ಗೆ ತಿಳಿಯುವುದೂ ಸಹ ಬಹಳ ಮುಖ್ಯ. 
 

ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತಾ?

ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ನಿಜವೇ: ಒಬ್ಬ ವ್ಯಕ್ತಿ ಆರೋಗ್ಯವಂತನಾಗಿರಲು ದೇಹದ ಎಲ್ಲಾ ಅಂಗಗಳೂ ಸಹ ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಅವುಗಳಲ್ಲಿ ಕಿಡ್ನಿ ಸಹ ಒಂದು. ಯಾವುದೇ ವ್ಯಕ್ತಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡಾಗ ಆ ವ್ಯಕ್ತಿಯು ಸಾಕಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯಗೆ ನಮ್ಮ ಆಹಾರ ಪದ್ಧತಿ, ಜೀವನ ಶೈಲಿ ಪ್ರಮುಖ ಕಾರಣವಾಗಿರಬಹುದು. 

ನಮ್ಮಲ್ಲಿ ಕೆಲವರಿಗೆ ಟೊಮ್ಯಾಟೊ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಬರಬಹುದು ಎಂಬ ಕಲ್ಪನೆ ಇದೆ. ಇದಲ್ಲದೆ, ಬದನೆ, ಪಾಲಕ್ ಸೊಪ್ಪಿನಿಂದಲೂ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತದೆ ಎಂದು ನಂಬುವವರೂ ಸಹ ಹಲವರಿದ್ದಾರೆ. ಆದರೆ, ಇದು ನಿಜವೇ?  ಈ ವಿಚಾರದಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎಂಬುದನ್ನು ತಿಳಿದಿರುವುದು ಸಹ ಅತ್ಯಗತ್ಯವಾಗಿದೆ.  

ಇದನ್ನೂ ಓದಿ- ಬೆಳ್ಳುಳ್ಳಿಯ ಸಿಪ್ಪೆಯನ್ನು ಕಸ ಎಂದು ಎಸೆಯಬೇಡಿ, ಅದರಲ್ಲಿವೆ ಅಪಾರ ಪ್ರಯೋಜನಗಳು

ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರಬಹುದೇ? ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಟೊಮ್ಯಾಟೊ-ಬದನೆ-ಪಾಲಕ್ ಎಷ್ಟು ಅಪಾಯಕಾರಿ? 
ವಾಸ್ತವವಾಗಿ, ಯಾವುದೇ ಒಬ್ಬ ವ್ಯಕ್ತಿಯು ಆಕ್ಸಲೇಟ್ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿದಾಗ  ಕಿಡ್ನಿಗಳಲ್ಲಿ ಕಲ್ಲುಗಳಾಗುವ ಸಾಧ್ಯತೆಯು ಹೆಚ್ಚಾಗುತ್ತದೆ.  ಟೊಮ್ಯಾಟೊದಲ್ಲಿಯೂ  ಆಕ್ಸಲೇಟ್ ಕಂಡು ಬರುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತದೆ ಎಂದು ಹಲವರು ನಂಬುತ್ತಾರೆ. ಹಾಗಾಗಿಯೇ,  ಆರೋಗ್ಯವಂತ ಜನರು ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೋ ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಆದಾಗ್ಯೂ, ಯಾವುದೇ ಒಬ್ಬ ವ್ಯಕ್ತಿ ಸೀಮಿತ ಪ್ರಮಾಣದಲ್ಲಿ ಟೊಮ್ಯಾಟೋ ಸೇವಿಸುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. 

ಇದನ್ನೂ ಓದಿ- Pillow Benefits: ಕಾಲುಗಳ ಕೆಳಗೆ ದಿಂಬಿಟ್ಟು ಮಲಗುವುದರಿಂದ ಸಿಗುತ್ತೆ ಈ ದೊಡ್ಡ ಪ್ರಯೋಜನ

ಕಿಡ್ನಿ ಸ್ಟೋನ್ ಸಮಸ್ಯೆಗೆ ಇವೂ ಸಹ ಕಾರಣವಾಗಿರಬಹುದು: 
ಟೊಮ್ಯಾಟೋ ಹೊರತುಪಡಿಸಿ ಅತಿಯಾದ ಟೀ, ಕಾಫಿ, ಬದನೆ, ಪಾಲಕ್ ಸೊಪ್ಪಿನ ಅತಿಯಾದ ಸೇವನೆ ಸಹ ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಉಪ್ಪು ಹೆಚ್ಚಿರುವ ಯಾವುದೇ ಆಹಾರವು ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಷ್ಟೇ ಅಲ್ಲ, ನಿತ್ಯ ಅಗತ್ಯ ಪ್ರಮಾಣದಲ್ಲಿ ನೀರು ಸೇವಿಸದಿದ್ದರೂ ಸಹ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಉಂಟಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More